Prithvi Shaw: ನನಸಾಯಿತು ಯುವ ಬ್ಯಾಟ್ಸ್‌ಮನ್ ಕನಸು, ಮುಂಬೈನಲ್ಲಿ ಸೀ ಫೇಸಿಂಗ್ ಬಂಗಲೆ ಖರೀದಿ
ಭಾರತದ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಮುಂಬೈನ ಐಷಾರಾಮಿ ಪ್ರದೇಶಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಬಾಂದ್ರಾದಲ್ಲಿ ಮನೆ ಖರೀದಿಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾನ ಇನ್ಸ್ಟಾಗ್ರಾಂ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು ಕನಸು ನನಸಾಗಿದೆ ಎಂದು ಬರೆದುಕೊಂಡಿದ್ದಾರೆ.
ಐಷಾರಾಮಿ ಮನೆ ಖರೀದಿ ಬಗ್ಗೆ ಖುದ್ದು ಮಾಹಿತಿ ಹಂಚಿಕೊಂಡಿರುವ ಪೃಥ್ವಿ ಶಾ ಇನ್‌ಸ್ಟಾಗ್ರಾಮ್‌ನಲ್ಲಿ, "ಈ ಕ್ಷಣದ ಬಗ್ಗೆ ಕನಸು ಕಾಣುವುದರಿಂದ ಅದನ್ನು ನಿಜವಾಗಿಸುವವರೆಗಿನ ಪ್ರಯಾಣವು ಅತಿವಾಸ್ತವಿಕವಾಗಿದೆ. ನನ್ನ ಸ್ವರ್ಗದ ತುಂಡನ್ನು ಹೊಂದಲು ನಾನು ತುಂಬಾ ಕೃತಜ್ಞನಾಗಿದ್ದೇನೆ. ಒಳ್ಳೆಯ ದಿನಗಳು ಬರುತ್ತಿವೆ" ಎಂದು ಬರೆದುಕೊಂಡಿದ್ದಾರೆ.
ಮೊದಲೇ ತಿಳಿಸಿದಂತೆ ಪೃಥ್ವಿ ಶಾ ಮುಂಬೈನ ಐಷಾರಾಮಿ ಪ್ರದೇಶಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಬಾಂದ್ರಾದಲ್ಲಿ ಸಮುದ್ರಕ್ಕೆ ಮುಖ ಮಾಡಿದಂತೆ (ಸೀ ಫೇಸಿಂಗ್) ಐಷಾರಾಮಿ ಮನೆ ಖರೀದಿಸಿದ್ದಾರೆ.
ಪೃಥ್ವಿ ಶಾ 2018 ರಲ್ಲಿ ಭಾರತಕ್ಕಾಗಿ ತಮ್ಮ ಮೊದಲ ಪಂದ್ಯವನ್ನು ಆಡಿದ್ದರು. ಅವರು ಇಲ್ಲಿಯವರೆಗೆ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ಮಾತ್ರ ಆಡಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೆ 74 ಪಂದ್ಯಗಳನ್ನುಆಡಿರುವ ಪೃಥ್ವಿ ಶಾ, 14 ಅರ್ಧಶತಕಗಳೊಂದಿಗೆ 1813 ರನ್ ಗಳಿಸಿದ್ದಾರೆ. ಅವರ ಸರಾಸರಿ 24.5 ಮತ್ತು ಸ್ಟ್ರೈಕ್ ರೇಟ್ 146.68 ಆಗಿದೆ.
ಪೃಥ್ವಿ ಶಾ 2018 ರಲ್ಲಿ ಭಾರತಕ್ಕಾಗಿ ತಮ್ಮ ಮೊದಲ ಟೆಸ್ಟ್ ಆಡಿದ್ದರು. 2021 ರಲ್ಲಿ, ಅವರು ಏಕದಿನ ಅಂತರಾಷ್ಟ್ರೀಯ ಮತ್ತು ಟಿ20ಗೆ ಪದಾರ್ಪಣೆ ಮಾಡಿದರು. 23 ಜುಲೈ 2021 ರಂದು ಪೃಥ್ವಿ ಶಾ ಕೊನೆಯದ್ದಾಗಿ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದಾರೆ. ಅಂದಿನಿಂದ ಪೃಥ್ವಿ ರಾಷ್ಟ್ರೀಯ ತಂಡಕ್ಕೆ ಮರಳಲು ಸಾಧ್ಯವಾಗಿಲ್ಲ.