Cholesterol symptoms on hand : ನರ ನಾಡಿಗಳಲ್ಲಿ ಕೊಲೆಸ್ಟ್ರಾಲ್ ತುಬಿಕೊಂಡಿದ್ದರೆ ನಿಮ್ಮ ಕೈ ತೋರಿಸುತ್ತದೆ ಈ ಲಕ್ಷಣ !
ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳು ಕಣ್ಣು, ಚರ್ಮ ಮತ್ತು ಉಗುರುಗಳಲ್ಲಿ ಕಾಣಿಸಿಕೊಳ್ಳಬಹುದು. ಕೈ ಮತ್ತು ಪಾದಗಳ ಉಗುರುಗಳ ಮೇಲೆ ಕೊಲೆಸ್ಟ್ರಾಲ್ ನ ಪ್ರಮುಖ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಕೆಲವೊಮ್ಮೆ ಉಗುರುಗಳಲ್ಲಿ ಉದ್ದವಾದ ಗೆರೆಗಳು ಕಾಣಿಸಿಕೊಳ್ಳಬಹುದು. ಈ ಗೆರೆಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಈ ಗೆರೆಗಳಿಂದಾಗಿ ಉಗುರುಗಳು ಸರಿಯಾಗಿ ಬೆಳೆಯಲು ಕೂಡಾ ಸಾಧ್ಯವಾಗುವುದಿಲ್ಲ.
ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ರಕ್ತ ಪರಿಚಲನೆಯನ್ನು ತಡೆಯುತ್ತದೆ. ಕಳಪೆ ರಕ್ತ ಪರಿಚಲನೆಯಿಂದಾಗಿ, ಕೈ ಮತ್ತು ಕಾಲುಗಳ ನರಗಳು ಹಾನಿಗೊಳಗಾಗಬಹುದು. ಇದು ಕೈ ಮತ್ತು ಪಾದಗಳು ಮರಗಟ್ಟುವುದಕ್ಕೆ ಕಾರಣವಾಗುತ್ತದೆ.
ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟದಿಂದಾಗಿ, ನರಗಳು ಹಾನಿಗೊಳಗಾಗಬಹುದು. ಇದು ಕೈಯಲ್ಲಿ ಗಾಯಗಳು ಕಾಣಿಸಿಕೊಳ್ಳುವುದಕ್ಕೆ ಕಾರಣವಾಗಬಹುದು. ಅದೇ ರೀತಿ ಕೆಟ್ಟ ಕೊಲೆಸ್ಟ್ರಾಲ್ ನಿಂದಾಗಿ ಫಂಗಲ್ ಸೋಂಕಿನ ಸಮಸ್ಯೆಯೂ ಹೆಚ್ಚಾಗಬಹುದು
ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ಉಗುರುಗಳ ಬಣ್ಣ ಹಳದಿ ಬಣ್ಣಕ್ಕೆ ತಿರುಗುತ್ತದೆ. ದೇಹದಲ್ಲಿನ ಕಳಪೆ ರಕ್ತ ಪರಿಚಲನೆಯಿಂದಾಗಿ ಉಗುರುಗಳ ಬಣ್ಣ ಹಳದಿಯಾಗುತ್ತದೆ. ಆದರೆ, ಕೆಟ್ಟ ಕೊಲೆಸ್ಟ್ರಾಲ್‌ನಿಂದ ಉಗುರುಗಳು ಹಳದಿಯಾಗುವುದು ಗಂಭೀರ ಸಮಸ್ಯೆಯಾಗಿದೆ.