Birds Vastu Tips ಈ ಹಕ್ಕಿಗಳು ನಿಮ್ಮ ಮನೆಗೆ ಬಂದರೆ, ನಿಮ್ಮ ಅದೃಷ್ಟ ಹೊಳೆಯುವುದು ಗ್ಯಾರಂಟಿ!

Wed, 14 Jun 2023-11:14 pm,

1. ವಾಸ್ತು ಶಾಸ್ತ್ರದ ಪ್ರಕಾರ, ಈ ಪಕ್ಷಿಗಳು ನಮ್ಮ ಮನೆಗೆ ಬರುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ನೀಲಕಂಠ ಪಕ್ಷಿಯ ಬಗ್ಗೆ ಹೇಳುವುದಾದರೆ, ವಿಶೇಷವಾಗಿ ದಸರಾ ದಿನದಂದು ಅದನ್ನು ನೋಡುವುದರಿಂದ, ಅದೃಷ್ಟ ಹೆಚ್ಚಾಗುತ್ತದೆ.  

2. ಸಾಮಾನ್ಯವಾಗಿ ಗೂಬೆಯನ್ನು ತಾಯಿ ಲಕ್ಷ್ಮಿಯ ವಾಹನ ಎಂದು ಪರಿಗಣಿಸಲಾಗುತ್ತದೆ. ಅಂದರೆ ನಿಮ್ಮ ಮನೆ, ಅಂಗಡಿ ಅಥವಾ ಇನ್ನಾವುದೇ ಆಸ್ತಿಯ ಬಳಿ ನೀವು ಗೂಬೆಯನ್ನು ಕಂಡರೆ, ನಿಮಗೆ ಏನಾದರೂ ಒಳ್ಳೆಯದು ಕಾದಿದೆ ಎಂಬುದರ ಸಂಕೇತವಾಗಿದೆ.  

3. ವಾಸ್ತು ಶಾಸ್ತ್ರದ ಪಂಡಿತರ ಪ್ರಕಾರ ನಿಮ್ಮ ಮನೆಗೆ ಗಿಳಿ ಆಕಸ್ಮಿಕವಾಗಿ ಬಂದು ಕೆಲಕಾಲ ಕುಳಿತುಕೊಂಡರೆ ಅದು ನಿಮಗೆ ಎಲ್ಲಿಂದಲೋ ಆಕಸ್ಮಿಕ ಧನಲಾಭವಾಗಲಿದೆ ಎಂಬುದರ ಸಂಕೇತವಾಗಿದೆ.   

4. ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯಲ್ಲಿ ಒಂದು ಹಕ್ಕಿ ಗೂಡು ಕಟ್ಟಿದ್ದರೆ, ಮನೆಯಲ್ಲಿ ಶೀಘ್ರದಲ್ಲಿಯೇ ಸಂತಸದ ವಾತಾವರಣ ನಿರ್ಮಾಣಗೊಳ್ಳಲಿದೆ ಎಂಬುದರ ಸಂಕೇತವಾಗಿದೆ. ಇದೆ ವೇಳೆ ಗೂಡಿನಲ್ಲಿ ಹಕ್ಕಿಯ ಆಗಮನವು ಯಾವುದೇ ರೀತಿಯ ಅಡಚಣೆಯನ್ನು ನಿವಾರಿಸುವ ಸಂಕೇತವಾಗಿದೆ.  

5. ಕಾಗೆ ಮನೆಗೆ ಅತಿಥಿಗಳ ಆಗಮನವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಇದೇ ವೇಳೆ, ಕೆಲವು ಜ್ಯೋತಿಷಿಗಳ ಪ್ರಕಾರ, ಮನೆಗೆ ಕಾಗೆಗಳ ಆಗಮನವನ್ನು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ.  

6. ಗ್ರಾಮದಲ್ಲಿ ವಾಸಿಸುವ ಹಿರಿಯರು ಹೇಳುವ ಪ್ರಕಾರ ಮತ್ತು  ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆ ಬಳಿ ಅಥವಾ ನಿಮ್ಮ ಮನೆಯ ಮಾಳಿಗೆಯ ಮೇಲೆ ಹುಂಜ ಬಂದರೆ ಅಥವಾ ಅದರ ಕೂಗು ಕೇಳಿಸಿದರೆ ನೀವು ಶೀಘ್ರದಲ್ಲಿಯೇ ನಿಮ್ಮ ಹಳೆ ಸ್ನೇಹಿತರು ಮತ್ತು ಹಳೆ ಸಹೋದ್ಯೋಗಿಗಳನ್ನು ಭೇಟಿಯಾಗುವಿರಿ ಎಂಬುದರ ಸಂಕೇತವಾಗಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link