ಎಚ್ಚರ..! WhatsApp ವೆರಿಫೈ ಹೆಸರಿನಲ್ಲಿ ಆಗುತ್ತಿಗೆ Phone Hack
ವರದಿಯ ಪ್ರಕಾರ, ವಿಶ್ವಾದ್ಯಂತ ವಾಟ್ಸಾಪ್ ಬಳಕೆದಾರರಿಗೆ ವೆರಿಫಿಕೆಶನ್ ಕೋಡ್ ಕಳುಹಿಸಲಾಗುತ್ತಿದೆ. ಕೋಡ್‌ನೊಂದಿಗೆ ಲಿಂಕ್ ಅನ್ನು ಸಹ ಕಳುಹಿಸಲಾಗುತ್ತಿದೆ. ಈ ಲಿಂಕ್ ಅನ್ನು ಕ್ಲಿಕ್ ಮಾಡಿ, ಕೋಡ್ ನಮೂದಿಸುವಂತೆ ವಾಟ್ಸಾಪ್ ಬಳಕೆದಾರರಲ್ಲಿ ಕೇಳಲಾಗುತ್ತಿದೆ.
ಹ್ಯಾಕರ್‌ಗಳು ಈ ದಿನಗಳಲ್ಲಿ ಫೋನ್‌ಗಳನ್ನು ಹ್ಯಾಕ್ ಮಾಡಲು ಈ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಕಳುಹಿಸಲಾಗಿರುವ ಲಿಂಕ್ ನ್ನು ಕ್ಲಿಕ್ ಮಾಡಿ ಕೋಡ್ ಎಂಟರ್ ಮಾಡಿದ ತಕ್ಷಣ ಫೋನ್ ಹ್ಯಾಕ್ ಆಗುತ್ತದೆ.
ಈ ಬಗ್ಗೆ ಟೆಕ್ ತಜ್ಞ ಅಲೆಕ್ಸಿಸ್ ಟ್ವೀಟ್ ಮಾಡಿದ್ದಾರೆ. ಮೊದಲಿಗೆ ನಮ್ಮ ಕಾಮನ್ ಫ್ರೆಂಡ್ ನ ಫೋನ್ ಅನ್ನು ಹ್ಯಾಕ್ ಮಾಡಲಾಗುತ್ತದೆ. ನಂತರ ಆ ಫೋನಿನ ಕಾಂಟಾಕ್ಟ್ ಲಿಸ್ಟ್ ನಿಂದ ಎಲ್ಲಾ ಸ್ನೇಹಿತರ ನಂಬರ್ ಅನ್ನು ತೆಗೆಯಲಾಗುತ್ತದೆ. ಆ ಎಲ್ಲಾ ಫೋನ್ ಅನ್ನು ವಾಟ್ಸಾಪ್ ಮೂಲಕ ಹ್ಯಾಕ್ ಮಾಡಲು ಪ್ರಯತ್ನಿಸಲಾಗುತ್ತದೆ.
ನಿಮ್ಮ ವಾಟ್ಸಾಪ್‌ನಲ್ಲಿಯೂ ಹೀಗೆ ಸೆಕ್ಯೂರಿಟಿ ಕೋಡ್ ಬಂದರೆ ಅದನ್ನು ನಿರ್ಲಕ್ಷಿಸಿ ಬಿಡಿ. ತಪ್ಪಿಯೂ ಈ ಲಿಂಕ್ ಓಪನ್ ಮಾಡಿ ಕೋಡ್ ಎಂಟರ್ ಮಾಡಬೇಡಿ.
ಯಾವುದೋ ಕೋಡ್ ತಪ್ಪಾಗಿ ನಿಮ್ಮ ಫೋನ್ ಗೆ ಬಂದಿದೆ ಎಂದು ನಿಮ್ಮ ಸ್ನೇಹಿತರ ಮೊಬೈಲ್ ನಿಂದ ಮೆಸೇಜ್ ಬಂದರೂ ಅದನ್ನ ನಂಬಬೇಡಿ. ಫೋನ್ ಹ್ಯಾಕ್ ಮಾಡಲು ಇಂತಹ ಗಿಮಿಕ್‌ಗಳನ್ನು ಸಹ ಅಳವಡಿಸಿಕೊಳ್ಳಲಾಗುತ್ತಿದೆ.