ಮಾನಸ ಬೆನ್ನಲ್ಲೇ ದೊಡ್ಮನೆಯಿಂದ ಪ್ರಬಲ ಕಂಟೆಸ್ಟೆಂಟ್ ಹೊರಕ್ಕೆ..! ಬಿಗ್‌ಬಾಸ್‌ಗಿಂತ ನನಗೆ ಅದೇ ಮುಖ್ಯ ಎನ್ನುತ್ತಾ ತನ್ನನ್ನು ತಾನೇ ಸೆಲ್ಫ್ ಎಲಿಮಿನೇಟ್ ಮಾಡಿಕೊಂಡ ಸ್ಪರ್ಧಿ!
ಬಿಗ್ ಬಾಸ್ ತೆಲುಗು ಸೀಸನ್ 8 ಹತ್ತನೇ ವಾರಕ್ಕೆ ಕಾಲಿಟ್ಟಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳು ಆಗಮಿಸಿ ಐದು ವಾರಗಳು ಕಳೆದಿವೆ. ಇದೇ ವೇಳೆ ಮೈ ವಿಲೇಜ್ ಶೋ ಖ್ಯಾತಿಯ ಯೂಟ್ಯೂಬರ್ ಗಂಗವ್ವ ಕೂಡ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು.
ಹಿಂದಿನ ಸೀಸನ್‌ನಲ್ಲಿ ಮುಖ್ಯ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಆ ಸ್ಪರ್ಧಿ ಮನೆಯ ವಾತಾವರಣಕ್ಕೆ ಒಗ್ಗಿಕೊಳ್ಳಲಾಗಲಿಲ್ಲ. ಇದರ ಜೊತೆಗೆ ಆರೋಗ್ಯ ಸಮಸ್ಯೆಗಳೂ ಆಕೆಯನ್ನು ಕಾಡುತ್ತಿದ್ದವು. ಐದು ವಾರ ಮಾತ್ರ ಮನೆಯಲ್ಲಿದ್ದು, ಆಮೇಲೆ ಇರಲು ಸಾಧ್ಯವಿಲ್ಲ ಎಂದು ಹೊರಗೆ ಬಂದರು. ಅದಾದ ನಂತರ ಸೀಸನ್ 8ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಗಂಗವ್ವ ಮತ್ತೆ ಮನೆ ಪ್ರವೇಶಿಸಿದ್ದರು.
ಆದರೆ ಇದು ಅನೇಕರನ್ನು ಅಚ್ಚರಿಗೊಳಿಸಿದೆ. ಏಕೆಂದರೆ ಅವರು ಈಗಾಗಲೇ ವೃದ್ಧಾಪ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮೊದಮೊದಲು ಕಂಬ್ಯಾಕ್ ಮಾಡಿದ್ದ ಗಂಗವ್ವ, ಆ ಬಳಿಕ ಕೇವಲ ಮಾತಿಗಷ್ಟೇ ಸೀಮಿತವಾದರು. ಇದೀಗ ವಯಸ್ಸಿನ ಕಾರಣದಿಂದಾಗಿ ದೈಹಿಕ ಕಾರ್ಯಗಳು ಮತ್ತು ಆಟಗಳಲ್ಲಿ ಭಾಗವಹಿಸಲಾಗುತ್ತಿಲ್ಲ.
ಇದೀಗ ಬಿಗ್ ಬಾಸ್ ಮನೆಯಲ್ಲಿ ಗಂಗವ್ವ ಅವರಿಗೆ ಮತ್ತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆಯಂತೆ. ಸದ್ಯದ ಪರಿಸ್ಥಿತಿ ನೋಡಿದರೆ ಗಂಗವ್ವ ತಾನಾಗಿಯೇ ಮನೆಯಿಂದ ಹೊರ ಹೋಗುತ್ತಾರೆ ಎಂದೆನಿಸುತ್ತದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ತನ್ನನ್ನು ತಾನೇ ಸೆಲ್ಫ್ ಎಲಿಮಿನೇಷನ್ ಮಾಡಿಕೊಂಡ ಗಂಗವ್ವ ಬಿಗ್ ಬಾಸ್ ತೊರೆಯಲು ಬಯಸಿದ್ದಾರೆ ಎಂದು ವರದಿಯಾಗಿದೆ. ಒಂದು ವೇಳೆ ಗಂಗವ್ವ ಈ ವಾರಾಂತ್ಯದಲ್ಲಿ ಹೋದರೆ, ಈ ವಾರ ಯಾವುದೇ ಎಲಿಮಿನೇಷನ್ ನಡೆಯಲಿಕ್ಕಿಲ್ಲ ಎಂದು ಅಂದಾಜಿಸಲಾಗಿದೆ.