50 ವರ್ಷಗಳ ನಂತರ ಒಟ್ಟಿಗೆ ಸೇರುತ್ತಿದೆ ಮೂರು ಗ್ರಹಗಳು ! ಮೂರು ರಾಶಿಯವರ ಜೀವನದಲ್ಲಿ ಹರಿಯುವುದು ಹಣದ ಹೊಳೆ
ಇದೀಗ 50 ವರ್ಷಗಳ ನಂತರ ಸಿಂಹ ರಾಶಿಯಲ್ಲಿ ಮಂಗಳ ಶುಕ್ರ ಬುಧ ಒಟ್ಟಿಗೆ ಸೇರುತ್ತಿದ್ದಾರೆ. ಇದು ಎಲ್ಲಾ ರಾಶಿಯವರ ಮೇಲೂ ಪರಿಣಾಮ ಬೀರುತ್ತದೆ. ಅದರಲ್ಲೂ ಮೂರು ರಾಶಿಯವರಿಗೆ ಇದು ವಿಶೇಷ ಲಾಭ ನೀಡಲಿದೆ.
ಸಿಂಹ ರಾಶಿ : ಈ ಮೈತ್ರಿಯ ಪ್ರಭಾವದಿಂದ ಉದ್ಯೋಗ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಕನಸುಗಳನ್ನು ನನಸಾಗಿಸಲು ಇದು ಉತ್ತಮ ಅವಕಾಶ. ಜೀವನದಲ್ಲಿ ಸಂತೋಷ ಮರಳುತ್ತದೆ. ಯಾವುದೇ ನಷ್ಟವಿಲ್ಲದೆ ಸಂಪತ್ತನ್ನು ಹೆಚ್ಚಿಸಲು ಇದು ಸರಿಯಾದ ಸಮಯ.
ತುಲಾ ರಾಶಿ - ತುಲಾ ರಾಶಿಯವರ ಜೀವನದಿಂದ ಕಷ್ಟಗಳು ಕಳೆದು ಸುಖ ಸಂತೋಷದ ಹೊನಲು ಮೂಡುತ್ತದೆ. ಆದಾಯ ವೃದ್ಧಿಯಾಗಲಿದ್ದು, ಬಡ್ತಿ ದೊರೆಯಲಿದೆ. ನಿಮ್ಮ ಭವಿಷ್ಯದ ಹಾದಿ ಸುಖಮಯವಾಗಿ ಸಾಗುತ್ತದೆ.
ಕುಂಭ ರಾಶಿ : ವೃತ್ತಿಜೀವನದಲ್ಲಿ ಪ್ರಗತಿ ಕಾಣಲು ಆರಂಭವಾಗುತ್ತದೆ. ಆದಾಯದ ಮಟ್ಟವು ಹೆಚ್ಚಾಗುತ್ತದೆ. ಆರೋಗ್ಯ ಸಮಸ್ಯೆಗಳೆಲ್ಲವೂ ಪರಿಹಾರವಾಗುತ್ತದೆ. ಈ ರಾಶಿಯವರ ಆತ್ಮವಿಶ್ವಾಸದ ಮಟ್ಟವು ಅಧಿಕವಾಗಿರುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.