ಯುವರಾಜ್‌ ಕುಮಾರ್‌ ಶ್ರೀದೇವಿ ಮೊದಲು ಭೇಟಿಯಾಗಿದ್ದೆಲ್ಲಿ.. ಪ್ರೀತಿ ಮೂಡಿದ್ದು ಹೇಗೆ?

Mon, 10 Jun 2024-2:53 pm,

ದೊಡ್ಮನೆ ಕುಡಿ ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ ಯುವ ರಾಜಕುಮಾರ್‌ 2019 ರಲ್ಲಿ ಶ್ರೀದೇವಿಯವರನ್ನ ಗ್ರಾಂಡ್‌ ಆಗಿ ಮದುವೆಯಾಗಿದ್ದರು.   

ಮೈಸೂರು ಮೂಲದ ಶ್ರೀದೇವಿ ಭೈರಪ್ಪ ಅವರನ್ನು ಯುವ ರಾಜ್‌ಕುಮಾರ್‌ ಪ್ರೀತಿಸಿ ಮದುವೆಯಾಗಿದ್ದರು. ಮೈಸೂರಿನಲ್ಲೆ ಹುಟ್ಟಿ ಬೆಳೆದ ಶ್ರೀದೇವಿ ಉನ್ನತ ವಿದ್ಯಾಭ್ಯಾಸ ಮುಗಿಸಿದ್ದಾರೆ.   

26 ಮೇ 2019 ರಲ್ಲಿ ಶ್ರೀದೇವಿ ಹಾಗೂ ಯುವ ರಾಜ್‌ಕುಮಾರ್‌ ಜೋಡಿ ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ಮಾದುವೆ ಮಾಡಿಕೊಂಡಿದ್ದರು.  

7 ವರ್ಷಗಳ ಕಾಲ ಪ್ರೀತಿ ಮಾಡಿ, ಮನೆಯವರನ್ನ ಒಪ್ಪಿಸಿ ಈ ಜೋಡಿ ಮದುವೆ ಮಾಡಿಕೊಂಡಿತ್ತು.  

ಈ ಜೋಡಿಯ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಗೆ ತಿರುಗಿತ್ತು. ಪ್ರೀತಿಯ ವಿಷಯವನ್ನ ಯುವ ರಾಝ್‌ಕುಮಾರ್‌ ಮನೆಯವರ ಮುಂದಿಟ್ಟಿದ್ದರು. ಮೊದಲಿನಲ್ಲಿ ರಾಘವೇಂದ್ರ ರಾಜ್‌ಕುಮಾರ್ ಈ ಮದುವೆಗೆ ಒಪ್ಪಿರಲಿಲ್ಲ, ಆದರೆ ಪುನೀತ್‌ ರಾಜ್‌ಕುಮಾರ್‌ ಮಧ್ಯಸ್ತಿಕೆ ವಹಿಸಿ ಇಬ್ಬರಿಗೂ ಮದುವೆ ಮಾಡಿಸಿದ್ದರು.  

ಪ್ರೀತಿಯಲ್ಲಿದ್ದ ಜೋಡಿ ಮನೆಯವರವನ್ನು ಒಪ್ಪಿಸಿ ಲವ್‌ ಕಮ್‌ ಅರೇಂಜಡ್‌ ಮ್ಯಾರೇಜ್‌ ಮಾಡಿಕೊಂಡಿದ್ದರು.  

ಆದರೆ ಇದೀಗ ಈ ಜೋಡಿಯ ಮಧ್ಯೆ ಮನಸ್ತಾಪ ಉಂಟಾಗಿದ್ದು, ದಾಂಪತ್ಯದಲ್ಲಿ ಬಿರುಕು ಮೂಡಿದೆ. ತಮ್ಮ ಪತ್ನಿ ಮೇಲೆ ಟಾರ್ಚರ್‌ ಆರೋಪ ಮಾಡಿ ಯುವ ರಾಜ್‌ಕುಮಾರ್‌ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link