Virat Kohli ವಾಸಿಸುವ ಮನೆಗಿಂತ ದುಬಾರಿಯಾಗಿದೆ Yuvraj Singh ವಾಸಿಸುವ ಈ ಅಪಾರ್ಟ್ಮೆಂಟ್

Fri, 22 Oct 2021-7:31 pm,

1. ಓಂಕಾರ್ 1973 ಟವರ್ಸ್ (Omkar 1973 Towers) ನಲ್ಲಿ ವಾಸಿಸುತ್ತಾರೆ ಯುವ್ವಿ  - ಯುವರಾಜ್ ಸಿಂಗ್ (Yuvraj Singh) ತನ್ನ ಪತ್ನಿ ಮತ್ತು ಬಾಲಿವುಡ್ ನಟಿ ಹೇಜಲ್ ಕೀಚ್ (Hazel Keech) ಜೊತೆಯಲ್ಲಿ ಮುಂಬೈನ ವರ್ಲಿಯಲ್ಲಿರುವ ಓಂಕಾರ್ 1973 ಟವರ್ಸ್ ನಲ್ಲಿ ವಾಸಿಸುತ್ತಿದ್ದಾರೆ. ಈ ಅಪಾರ್ಟ್ಮೆಂಟ್  ಅತ್ಯಂತ ಐಷಾರಾಮಿ ಅಪಾರ್ಟ್ಮೆಂಟ್ ಅಗಗಿದ್ದು ನೋಡಲು ಅಷ್ಟೇ ಸುಂದರವಾಗಿದೆ.

2. ವಿರಾಟ್ ಕೊಹ್ಲಿ (Virat Kohli) ಅಪಾರ್ಟ್ಮೆಂಟ್ ಗಿಂತ ದುಬಾರಿಯಾಗಿದೆ - ಒಂದು ಸುದ್ದಿ ನಿಯತಕಾಲಿಕೆಯಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ,  ಪ್ರಕಾರ, ಯುವರಾಜ್ ಸಿಂಗ್ ಅವರು ಈ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು 2013 ರಲ್ಲಿ 64 ಕೋಟಿ ರೂ.ಗೆ ಖರೀದಿಸಿದ್ದಾರೆ. ಯುವರಾಜ್ ಸಿಂಗ್ ಅವರ ಮನೆಯಲ್ಲಿ ಐಷಾರಾಮಿ ಲಿವಿಂಗ್ ರೂಮ್, ವರ್ಲ್ಡ್ ಕ್ಲಾಸ್ ಮೊನೊಕ್ರೋಮ್ ಕಿಚನ್, ಮತ್ತು ಸುಂದರವಾದ ವಾಸದ ಕೋಣೆಗಳಿವೆ. ವಿರಾಟ್ ಕೊಹ್ಲಿಗೆ ಮುಂಬೈನ ವರ್ಲಿಯಲ್ಲಿ ಒಂದು ಫ್ಲಾಟ್ ಇದೆ.

3. ಯುವರಾಜ್ ಸಿಂಗ್ ಅಪಾರ್ಟ್ ಮೆಂಟ್ ಏಕೆ ವಿಶೇಷವಾಗಿದೆ - ನವೆಂಬರ್ 2016 ರಲ್ಲಿ ಯುವರಾಜ್ ಸಿಂಗ್ ಮತ್ತು ಹ್ಯಾಜೆಲ್ ಕೀಚ್ ವಿವಾಹವಾಗಿದ್ದಾರೆ. ದಂಪತಿಗಳು 29 ನೇ ಮಹಡಿಯಲ್ಲಿರುವ ಐಷಾರಾಮಿ 16,000 ಚದರ ಅಡಿ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದಾರೆ. ಈ ಅಪಾರ್ಟ್ಮೆಂಟ್ ಅರೇಬಿಯನ್ ಸಮುದ್ರದ ಅತ್ಯುತ್ತಮ ನೋಟವನ್ನು ಹೊಂದಿದೆ.

4. ಬೆಡ್ ರೂಮ್ ನಲ್ಲಿ ಉತ್ತಮ ದರ್ಜೆಯ ಲೈಟಿಂಗ್ -ಇತ್ತೀಚೆಗೆ, ಯುವರಾಜ್ ಸಿಂಗ್ ಅವರು ತಮ್ಮ ಕೂದಲನ್ನು ಕತ್ತರಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವನು ತಮ್ಮ ಮಲಗುವ ಕೋಣೆಯ ಒಂದು ನೋಟವನ್ನು ಸಹ ತೋರಿಸಿದ್ದಾರೆ. ಯುವರಾಜ್ ಸಿಂಗ್ ಅವರ ಮಲಗುವ ಕೋಣೆಯಲ್ಲಿ ಮಂದ ಬೆಳಕುಗಳು ಇದ್ದು, ಕೊಠಡಿ ತುಂಬಾ ಸುಂದರವಾಗಿದೆ.

5. ವಿರಾಟ್ ಕೊಹ್ಲಿ ಅಪಾರ್ಟ್ಮೆಂಟ್ 34 ಕೋಟಿ ರೂ.ಗಳದ್ದಾಗಿದೆ - ವಿರಾಟ್-ಅನುಷ್ಕಾ 2016 ರಲ್ಲಿ ತಮ್ಮ ಮದುವೆಗೆ ಮುನ್ನ ಅಪಾರ್ಟ್ಮೆಂಟ್ ಖರೀದಿಸಿದ್ದರು. 7, 171 ಚದರ ಅಡಿಗಳಷ್ಟು ವ್ಯಾಪಿಸಿರುವ ಈ ಅಪಾರ್ಟ್ಮೆಂಟ್ ಓಂಕಾರ್ 1973 ರ 35 ನೇ ಮಹಡಿಯಲ್ಲಿದೆ. ಈ ಅಪಾರ್ಟ್ ಮೆಂಟ್ ನಿಂದ ಸಂಪೂರ್ಣ ಮುಂಬೈ ನಗರ ಮತ್ತು ಅರಬ್ಬಿ ಸಮುದ್ರ ಸ್ಪಷ್ಟವಾಗಿ ಗೋಚರಿಸುತ್ತದೆ. ಇದರ ಬೆಲೆ ಸುಮಾರು 34 ಕೋಟಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link