Zee News Sting operation: ನಕಲಿ ಫಿಟ್ನೆಸ್ ಗಾಗಿ ಇಂಜೆಕ್ಷನ್ ತೆಗೆದುಕೊಳ್ತಾರೆ ಟೀಂ ಇಂಡಿಯಾದ ಆಟಗಾರರು: ಚೇತನ್ ಶರ್ಮಾ ಶಾಕಿಂಗ್ ಹೇಳಿಕೆ

Fri, 17 Feb 2023-6:48 pm,

ಟೀಂ ಇಂಡಿಯಾದಲ್ಲಿ ಚುಚ್ಚುಮದ್ದಿನ ಸಹಾಯದಿಂದ ಅನ್ ಫಿಟ್ ಆಟಗಾರರೂ ಫಿಟ್ ಆಗುತ್ತಿದ್ದಾರೆ ಎಂದು ಚೇತನ್ ಶರ್ಮಾ ಹೇಳಿಕೊಂಡಿದ್ದಾರೆ. ಶೇ.100ರಷ್ಟು ಫಿಟ್ ಆಗದ ಕ್ರಿಕೆಟಿಗ ಕೂಡ ತಂಡದಲ್ಲಿ ಉಳಿಯಲು ಚುಚ್ಚುಮದ್ದು ತೆಗೆದುಕೊಳ್ಳುವ ಮೂಲಕ ಶೇ.100ರಷ್ಟು ಫಿಟ್ ನೆಸ್ ಸಾಬೀತುಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಚೇತನ್ ಶರ್ಮಾ ಪ್ರಕಾರ, ಟೀಂ ಇಂಡಿಯಾದ ನಕಲಿ ಫಿಟ್‌ನೆಸ್ ಆಟದಲ್ಲಿ ದೊಡ್ಡ ಕ್ರಿಕೆಟ್ ಸೂಪರ್‌ಸ್ಟಾರ್‌ಗಳು ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಡೋಪ್ ಟೆಸ್ಟ್ ನಲ್ಲೂ ಸಿಕ್ಕಿಹಾಕಿಕೊಳ್ಳದ, ಫಿಟ್ ನೆಸ್ ಸಾಧಿಸುವ ಇಂತಹ ಚುಚ್ಚುಮದ್ದನ್ನು ಟೀಂ ಇಂಡಿಯಾ ಆಟಗಾರರು ಬಳಸುತ್ತಿದ್ದಾರೆ ಎಂಬ ಶಾಕಿಂಗ್ ಸಂಗತಿಯನ್ನು ಹೊರಹಾಕಿದ್ದಾರೆ.

ಚೇತನ್ ಶರ್ಮಾ ಟೀಂ ಇಂಡಿಯಾ ಆಟಗಾರರ ಮೇಲೆ 'ಈ ಕಿಡಿಗೇಡಿಗಳು ಹೀಗಿದ್ದಾರೆ, ಮೌನವಾಗಿ ಮೂಲೆಗೆ ಹೋಗಿ ಚುಚ್ಚುಮದ್ದು ತೆಗೆದುಕೊಳ್ಳುತ್ತಾರೆ, ಬಳಿಕ ನಾವು ಫಿಟ್ ಆಗಿದ್ದೇವೆ ಸಾರ್ ಎಂದು ಹೇಳುತ್ತಾರೆ’ ಎಂದು ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು.

ಅದೇನೆಂದರೆ, ಟೀಂ ಇಂಡಿಯಾದ ಪ್ಲೇಯಿಂಗ್ XI ನಲ್ಲಿ ಉಳಿಯಲು, ಆಟಗಾರರು ಆಟದ ನಿಯಮಗಳ ಪ್ರಕಾರ ಮಾನ್ಯವಾಗಿಲ್ಲದ ಎಲ್ಲವನ್ನೂ ಮಾಡುತ್ತಿದ್ದಾರೆ. ಇದು ಕ್ರೀಡಾ ಮನೋಭಾವದಿಂದ ದೂರವಿದೆ. ಇದನ್ನು ಕ್ರೀಡಾ ಜಗತ್ತಿನಲ್ಲಿ ಮೋಸ ಎಂದು ಪರಿಗಣಿಸಲಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link