ಇಂದಿನಿಂದ ಈ ರಾಶಿಯವರಿಗೆ ಶುಕ್ರ ದೆಸೆ !ಒಲಿದು ಬರುವುದು ಕಾರು, ಬಂಗಲೆ, ಉನ್ನತ ಸ್ಥಾನಮಾನದ ಯೋಗ !ಕಷ್ಟಗಳಿಗೆ ಬೀಳುವುದು ಪೂರ್ಣ ವಿರಾಮ
ಶುಕ್ರ ಇಂದು ಬೆಳಿಗ್ಗೆ 3.27ಕ್ಕೆ ತನ್ನ ನಕ್ಷತ್ರವನ್ನು ಬದಲಿಸುವ ಮೂಲಕ ಶ್ರವಣ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಶ್ರವಣ ನಕ್ಷತ್ರದಲ್ಲಿ ಶುಕ್ರನ ಪ್ರವೇಶದಿಂದಾಗಿ ಕೆಲವು ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಲಿದೆ.
ಶ್ರವಣ ನಕ್ಷತ್ರವು 27 ನಕ್ಷತ್ರಗಳಲ್ಲಿ 22 ನೇ ನಕ್ಷತ್ರವಾಗಿದೆ.ಈ ನಕ್ಷತ್ರದ ಅಧಿಪತಿ ಚಂದ್ರ. ಈ ನಕ್ಷತ್ರವನ್ನು ವಿಷ್ಣುವು ಆಳುತ್ತಾನೆ.ಇದೀಗ ಶುಕ್ರನು ಈ ನಕ್ಷತ್ರಕ್ಕೆ ಪ್ರವೇಶ ಮಾಡಿರುವುದರಿಂದ 3 ರಾಶಿಯವರಿಗೆ ಆರ್ಥಿಕ ಲಾಭವಾಗುವುದು.
ಶುಕ್ರ ದೆಸೆ ಆರಂಭವಾಗುತ್ತಿದ್ದ ಹಾಗೆ ಈ ರಾಶಿಯವರ ಜೀವನದಲ್ಲಿ ಸಂತಸದ ಹೊಳೆ ಹರಿಯುತ್ತದೆ. ಬಂಗಲೆ, ಕಾರು, ಉದ್ಯೋಗದಲ್ಲಿ ಪದೋನ್ನತಿ, ವ್ಯಾಪಾರದಲ್ಲಿ ಯಶಸ್ಸು ಎಲ್ಲವೂ ಪ್ರಾಪ್ತಿಯಾಗುವುದು.
ವೃಷಭ ರಾಶಿ : ಶ್ರವಣ ನಕ್ಷತ್ರದಲ್ಲಿ ಶುಕ್ರನ ಪ್ರವೇಶವು ವೃಷಭ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಈ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಬಹಳಷ್ಟು ಹಣವನ್ನು ಗಳಿಸಬಹುದು.ಉದ್ಯೋಗದಲ್ಲಿ ಉತ್ತಮ ಅವಕಾಶ ದೊರೆಯಲಿದೆ. ಈ ಸಮಯದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ಧನು ರಾಶಿ : ಆರ್ಥಿಕವಾಗಿ ಲಾಭ ಪಡೆಯಬಹುದು.ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ವೃತ್ತಿಯಲ್ಲಿ ಲಾಭವಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
ಮಕರ ರಾಶಿ :ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸ ಪೂರ್ಣಗೊಳ್ಳುವುದು. ಜೀವನದಲ್ಲಿ ಅನುಕೂಲತೆ ಹೆಚ್ಚಲಿದೆ. ಭೌತಿಕ ಸುಖ ಪ್ರಾಪ್ತಿಯಾಗುವುದು. ವೃತ್ತಿ ಕ್ಷೇತ್ರದಲ್ಲಿ ಲಾಭವಾಗಲಿದೆ. ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿದ್ದು, ಮಾಡಿದ ಕೆಲಸಗಳಿಗೆ ಪ್ರಶಂಸೆ ದೊರೆಯಲಿದೆ. ಉದ್ಯೋಗ ಸ್ಥಾನ ಮತ್ತು ಸಂಬಳ ಹೆಚ್ಚಾಗಬಹುದು.
ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.