ಹೊಸ ವರ್ಷದಲ್ಲಿ ಶನಿ ದೆಸೆಯಿಂದ ಮುಕ್ತಿ ಪಡೆಯುವ ರಾಶಿಗಳಿವು !ಏಳೂವರೆ ವರ್ಷದಿಂದ ಅನುಭವಿಸುತ್ತಿದ್ದ ಕಷ್ಟ,ನೋವುಗಳಿಗೆ ಬೀಳುವುದು ಸಂಪೂರ್ಣ ತೆರೆ

Wed, 25 Dec 2024-8:50 am,

ಶನಿದೇವನು ರಾಶಿಯನ್ನು ಬದಲಾಯಿಸಿದಾಗ, ಕೆಲವು ರಾಶಿಯವರಿಗೆ ಶನಿ ಧೈಯ್ಯಾ ಅಥವಾ ಎರಡೂವರೆ ವರ್ಷದ ಶನಿ ದೆಸೆ ಆರಂಭವಾಗುತ್ತದೆ. ಇನ್ನು ಕೆಲವು ರಾಶಿಯವರಿಗೆ ಶನಿ ಸಾಡೇ ಸಾತಿ ಅಥವಾ ಏಳೂವರೆ  ವರ್ಷದ ಶನಿ ದೆಸೆ ಶುರುವಾಗುತ್ತದೆ.

ಯಾರ ಜೀವನದಲ್ಲಿ ಶನಿ ದೆಸೆ ಆರಂಭವಾಗುತ್ತದೆಯೋ ಅಲ್ಲಿ ಕಷ್ಟ-ನಷ್ಟ ನೋವುಗಳು ಕೂಡಾ  ಆರಂಭ ಎಂದೇ ಹೇಳಲಾಗುತ್ತದೆ.ಈ ಬಾರಿ ಶನಿ ಸಂಕ್ರಮಣದ ನಂತರ ಕೆಲವು ರಾಶಿಗಳು ಶನಿ ಮಹಾ ದೆಸೆಯಿಂದ ಸಂಪೂರ್ಣ ಮುಕ್ತಿ ಪಡೆಯಲಿದೆ. 

ಶನಿದೇವನು 2025ರ ಮಾರ್ಚ್ 29ರಂದು ಕುಂಭ ರಾಶಿಯಿಂದ ಮೀನ ರಾಶಿಗೆ ತನ್ನ ರಾಶಿ ಪರಿವರ್ತನೆ ಮಾಡುವ ಮೂಲಕ ಎರಡು ರಾಶಿಯವರ ಜಾತಕದಲ್ಲಿ ಶನಿಯ ದೈಯ್ಯಾ ಹಾಗೂ ಒಂದು ರಾಶಿಯವರ ಜಾತಕದಲ್ಲಿ ಸಾಡೇಸಾತಿ ಮುಕ್ತವಾಗಲಿದೆ.

ಶನಿದೇವನು ಮೀನ ರಾಶಿಗೆ ಕಾಲಿಡುತ್ತಿದ್ದಂತೆ ಮಕರ ರಾಶಿಯವರಿಗೆ ಶನಿ ದೆಸೆಯಿಂದ ಸಂಪೂರ್ಣ ಮುಕ್ತಿ ಸಿಗಲಿದೆ. ಏಳೂವರೆ ವರ್ಷದಿಂದ ಅನುಭವಿಸುತ್ತಿದ್ದ ನೋವು ಕಷ್ಟಗಳಿಗೆ ತೆರೆ ಬೀಳಲಿದೆ. ಇದರ ಜೊತೆಗೆ ಕುಂಭ ರಾಶಿಯವರ ಜಾತಕದಲ್ಲಿ ಸಾಡೇಸಾತಿಯ ಅಂತಿಮ ಚರಣ ಆರಂಭವಾಗಲಿದೆ. 

ಇನ್ನು ವೃಶ್ಚಿಕ ರಾಶಿಯವರ ಜಾತಕದಲ್ಲಿ ನಡೆಯುತ್ತಿದ್ದ ಶನಿ ಧೈಯ್ಯಾ ಅಥವಾ ಎರಡೂವರೆ ವರ್ಷದ ಶನಿ ದೆಸೆ ಕೂಡಾ ಅಂತ್ಯವಾಗಲಿದೆ. ಇದರೊಂದಿಗೆ ಇವರನ್ನು ಕಾಡುತ್ತಿದ್ದ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಸಿಗಲಿದೆ. 

ಹಾಗೆಯೇ ಮೀನ ರಾಶಿಯ ಜಾತಕದವರ ಮೇಲೆ ಮೊದಲನೇ ಹಂತ ಪ್ರಾರಂಭವಾಗಲಿದೆ. ಆ ಅರ್ಥದಲ್ಲಿ 2025 ರಲ್ಲಿ ಕುಂಭ ಮೀನ ಹಾಗೂ ಮೇಷ ರಾಶಿಯವರ ಮೇಲೆ ಶನಿಯ ಸಾಡೇಸಾತಿ ಪ್ರಭಾವ ಕಂಡು ಬರಲಿದೆ.

ಇನ್ನು ಶನಿದೇವನ ರಾಶಿ ಪರಿವರ್ತನೆಯಿಂದ ಮೇಷ ಮತ್ತು ಮೀನ ರಾಶಿಯವರಿಗೆ ಏಳೂವರೆ ಶನಿ ದೆಸೆ ಆರಂಭವಾದರೆ, ಸಿಂಹ ಮಾತು ಧನು ರಾಶಿಯವರಿಗೆ ಶನಿ ಧೈಯ್ಯಾ ಅಥವಾ ಎರಡೂವರೆ ವರ್ಷದ ಶನಿ ಕಾಟ ಆರಂಭವಾಗಲಿದೆ. 

ಸೂಚನೆ :  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link