ಬೆಂಗಳೂರು : ವ್ಯಕ್ತಿಯ ಸ್ವಭಾವವು ಅವನ ರಾಶಿಗೆ ಅನುಗುಣವಾಗಿರುತ್ತದೆ. ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ಅಥವಾ ಅವರು ಯಾವ ವಿಚಾರಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದು ಅವರ ರಾಶಿಯಾ ಮೇಲೆ ಅವಲಂಬಿಸಿರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೆಲವು ರಾಶಿಯವರು ತುಂಬಾ ಗೊಂದಲಕ್ಕೊಳಗಾಗುತ್ತಾರೆ. ಸಂಬಂಧವನ್ನು ಸರಿಯಾಗಿ ನಿಭಾಯಿಸಲು ಅವರಿಗೆ ಸಾಧ್ಯವಾಗುವುದಿಲ್ಲ. 


COMMERCIAL BREAK
SCROLL TO CONTINUE READING

ಮೇಷ ರಾಶಿ :
ಮೇಷ ರಾಶಿಯವರದ್ದು ಮೊಂಡುತನದ ಸ್ವಭಾವ. ಈ ರಾಶಿಯವರು ತಾವುಹೆಲಿದಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ಬಯಸುತ್ತಾರೆ. ಇವರಿಗೆ ತಾಳ್ಮೆ ಇರುವುದಿಲ್ಲ. ಈ ರಾಶಿಯವರು ತಮ್ಮ ತಪ್ಪನ್ನು ಸರಿ ಎಂದು ವದಿಸುವುದೇ ಹೆಚ್ಚು.  


ಇದನ್ನೂ ಓದಿ : 27ವರ್ಷಗಳ ಬಳಿಕ ಪಿತೃವಿನ ನಕ್ಷತ್ರದಲ್ಲಿ ಶನಿ ಪ್ರವೇಶ: ಈ ರಾಶಿಯವರಿಗೆ ಸಕಲೈಶ್ವರ್ಯ ಪ್ರಾಪ್ತಿ..!


ವೃಷಭ ರಾಶಿ :
ವೃಷಭ ರಾಶಿಯ ಜನರು ಹಠಮಾರಿ ಸ್ವಭಾವದವರು. ಈ ರಾಶಿಯವರ ಸ್ವಭಾವವೆ ಇವರ ಸಂಬಂಧಗಳಿಗೆ ಮುಳ್ಳಾಗುತ್ತದೆ. ಅವರು ತಮ್ಮ ಪ್ರತಿಯೊಂದು ನಿರ್ಧಾರವನ್ನು ಸಮರ್ಥಿಸಲು ಪ್ರಯತ್ನಿಸುತ್ತಾರೆ. ಈ ರಾಶಿಯವರು ತುಂಬಾ ಸಭ್ಯರು ಮತ್ತು ತಮ್ಮ ಮಾತಿನ ಮೂಲಕ ಸಂಗಾತಿಯ ಹೃದಯವನ್ನು ಗೆಲ್ಲುತ್ತಾರೆ. ಆದರೆ ಕೆಲವೊಮ್ಮೆ ತಮ್ಮ ಮಾತುಗಳಿಂದ ಇನ್ನೊಬ್ಬರ ಹೃದಯವನ್ನು ನೋಯಿಸುತ್ತಾರೆ.
 
ಮಿಥುನ ರಾಶಿ :
ಮಿಥುನ ರಾಶಿಯವರು ಪ್ರೀತಿಯನ್ನು ವ್ಯಕ್ತಪಡಿಸುವ ವಿಷಯದಲ್ಲಿ ಬಹಳ ಮುಂದಿರುತ್ತಾರೆ. ಈ ರಾಶಿಯವರಿಗೆ ಮಾತನಾಡುತ್ತಾ ಇರಬೇಕು. ಇದರಿಂದಾಗಿ ಎದುರಿಗಿರುವವರನ್ನು ಅರ್ಥಮಾಡಿಕೊಳ್ಳುವುದಿಲ್ಲ. ಇದರಿಂದಾಗಿ ಸಂಬಂಧದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.


ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯ ಜನರು ತುಂಬಾ ಭಾವನಾತ್ಮಾಕ. ಮಾತ್ರವಲ್ಲ ಇವರಿಗೆ ಅನುಮಾನ ಹೆಚ್ಚು. ಎಲ್ಲಾ ವಿಷಯವನ್ನು ಅನುಮಾನದ ದೃಷ್ಟಿಯಿಂದಲೇ ನೋಡುತ್ತಾರೆ.   ಕೆಲವೊಮ್ಮೆ ಕೋಪದ ಕೈಗೆ ಬುದ್ದಿ ಕೊಟ್ಟು ಬಿಡುತ್ತಾರೆ. ಇದು ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದಾಗಿ ಸಂಬಂಧವು ಹದಗೆಡುತ್ತದೆ.  


ಇದನ್ನೂ ಓದಿ : ಈ ರಾಶಿಯವರನ್ನು 19 ವರ್ಷ ನಿರಂತರ ಹರಸುವನು ಶನಿ ಮಹಾತ್ಮ ! ಶನಿ ದೇವನ ಕೃಪೆಯಿಂದಲೇ ಪ್ರಾಪ್ತಿಯಾಗುವುದು ಅಷ್ಟೈಶ್ವರ್ಯ! ಒಲಿದು ಬರುವುದು ಕಾರು, ಬಂಗಲೆ ಖರೀದಿ ಯೋಗ !


ಕುಂಭ ರಾಶಿ :
ಕುಂಭ ರಾಶಿಯ ಜನರು ತಮ್ಮ ಸಂಗಾತಿಗಿಂತ ಹೆಚ್ಚು ದೂರವಿರಲು  ಇಷ್ಟಪಡುತ್ತಾರೆ. ಈ ಕಾರಣದಿಂದಾಗಿ ಅವರ ಸಂಗಾತಿಯೊಂದಿಗಿನ ಅಂತರವು ಹೆಚ್ಚಾಗುತ್ತಾ ಹೋಗುತ್ತದೆ. 


( ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ.  ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ. ) 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.