ಪಿತಾ-ಪುತ್ರರ ಮುಖಾಮುಖಿಯಿಂದ ಅಪಾಯಕಾರಿ ಸಂಸಪ್ತಕ ಯೋಗ ನಿರ್ಮಾಣ: ಈ ರಾಶಿಯವರಿಗೆ ಧನಹಾನಿ
Samsaptaka Yoga: ಇಂದು ಗ್ರಹಗಳ ರಾಜ ಸೂರ್ಯ ತನ್ನದೇ ಆದ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. ಇದಲ್ಲದೆ, ಮೂರು ದಶಕಗಳ ಬಳಿಕ ನ್ಯಾಯದ ದೇವರು ಶನಿ ದೇವ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದರಿಂದಾಗಿ ಅಪಾಯಕಾರಿ ಸಂಸಪ್ತಕ ಯೋಗ ನಿರ್ಮಾಣವಾಗಲಿದೆ. ಇದರ ಪರಿಣಾಮದಿಂದಾಗಿ ಕೆಲವು ರಾಶಿಯವರ ಜೀವನದಲ್ಲಿ ಭಾರೀ ಧನ ಹಾನಿಯಾಗಲಿದೆ.
Surya Shani Gochar Samsaptaka Yoga: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜ ಎಂದು ಬಣ್ಣಿಸಲ್ಪಡುವ ಸೂರ್ಯ ಗ್ರಹ ಇಂದು ಎಂದರೆ 17 ಆಗಸ್ಟ್ 2023ರಂದು ವರ್ಷದ ಬಳಿಕ ತನ್ನದೇ ಆದ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. ಇನ್ನೂ ಸೂರ್ಯ ಪುತ್ರ ಶನಿ ದೇವ ಬರೋಬ್ಬರಿ ಮೂವತ್ತು ವರ್ಷಗಳ ಬಳಿಕ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದರೊಂದಿಗೆ ಸೂರ್ಯ ಮತ್ತು ಶನಿ ಪರಸ್ಪರ ಮುಖಾಮುಖಿಯಾಗಿದ್ದಾರೆ.
ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಸೂರ್ಯನು ಸಿಂಹ ರಾಶಿಯಲ್ಲಿದ್ದು, ಸೂರ್ಯ ಪುತ್ರ ಶನಿ ಕುಂಭ ರಾಶಿಯಲ್ಲಿದ್ದಾಗ ಅಪಾಯಕಾರಿ ಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಸಂಸಪ್ತಕ ಯೋಗ ನಿರ್ಮಾಣವಾಗಲಿದೆ. ಶನಿ ಸೂರ್ಯರ ಮುಖಾಮುಖಿಯಿಂದ ನಿರ್ಮಾಣವಾಗಿರುವ ಈ ಅಪಾಯಕಾರಿ ಯೋಗವು ಎಲ್ಲಾ ರಾಶಿಯವರ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಆದರೂ, ನಾಲ್ಕು ರಾಶಿಯವರ ಜೀವನದಲ್ಲಿ ಇದರ ಋಣಾತ್ಮಕ ಪರಿಣಾಮಗಳು ಕಂಡು ಬರುತ್ತವೆ ಎಂದು ಹೇಳಲಾಗುತ್ತಿದೆ.
ಹೌದು, ಪಿತಾ ಪುತ್ರರ ಮುಖಾಮುಖಿಯಿಂದಾಗಿ ರೂಪುಗೊಂಡಿರುವ ಅಪಾಯಕಾರಿ ಸಂಸಪ್ತಕ ಯೋಗವು ಮುಂದಿನ ಒಂದು ತಿಂಗಳುಗಳ ಕಾಲ ನಾಲ್ಕು ರಾಶಿಯವರ ಜೀವನದಲ್ಲಿ ಭಾರೀ ಧನ ಹಾನಿಯನ್ನು ಉಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಈ ಸಮಯದಲ್ಲಿ ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂದು ತಿಳಿಯೋಣ...
ಇದನ್ನೂ ಓದಿ- ಮೇಷ ರಾಶಿಯಲ್ಲಿ ಗುರು-ರಾಹು ಯುತಿ: ಈ ಮೂರು ರಾಶಿಯವರ ಜೀವನದಲ್ಲಿ ಎದುರಾಗಲಿದೆ ಸಂಕಷ್ಟ
ಪಿತಾ-ಪುತ್ರರ ಮುಖಾಮುಖಿಯಿಂದ ಅಪಾಯಕಾರಿ ಸಂಸಪ್ತಕ ಯೋಗ ನಿರ್ಮಾಣ: ಈ ರಾಶಿಯವರಿಗೆ ಧನಹಾನಿ: -
ಸಿಂಹ ರಾಶಿ:
ಸ್ವ ರಾಶಿಯಲ್ಲಿಯೇ ರಾಶಿಯಾಧಿಪತಿ ಸೂರ್ಯನ ಪ್ರವೇಶದಿಂದ ನಿರ್ಮಾಣವಾಗಿರುವ ಸಂಸಪ್ತಕ ಯೋಗದಿಂದ ಈ ರಾಶಿಯವರು ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಮುಂಡಿಣ ಒಂದು ತಿಂಗಳ ಕಾಲ ಹಣಕಾಸಿನ ವಿಷಯದಲ್ಲಿ ತುಂಬಾ ಎಚ್ಚರಿಕೆ ಅಗತ್ಯವಾಗಿರುತ್ತದೆ. ಅಷ್ಟೇ ಅಲ್ಲದೆ, ಮನೆಯಲ್ಲಿ ತಂದೆಯಿಂದ ಕಿರಿ ಕಿರಿ ಉಂಟಾಗುವ ಸಾಧ್ಯತೆ ಇರುವುದರಿಂದ ನಿಮ್ಮ ಕೋಪವನ್ನು ನಿಯಂತ್ರಿಸಿ, ಸಾಧ್ಯವಾದಷ್ಟು ಅನಾವಶ್ಯಕ ವಾದಗಳನ್ನು ತಪ್ಪಿಸಿ. ಇಲ್ಲದಿದ್ದರೆ, ಕೌಟುಂಬಿಕ ಕಲಹಗಳು ಹೆಚ್ಚಾಗುವ ಸಾಧ್ಯತೆ ಇದೆ.
ಕನ್ಯಾ ರಾಶಿ:
ಸೂರ್ಯ ಶನಿ ಮುಖಾಮುಖಿಯಿಂದ ನಿರ್ಮಾಣಗೊಂಡಿರುವ ಅಪಾಯಕಾರಿ ಸಂಸಪ್ತಕ ಯೋಗವು ಈ ರಾಶಿಯವರ ಜೀವನದಲ್ಲಿ ಭಾರೀ ಆರ್ಥಿಕ ಸಂಕಷ್ಟಗಳನ್ನು ತಂದೊಡ್ಡಲಿದೆ. ಹಾಗಾಗಿ, ನೀವು ಯಾವುದೇ ರೀತಿಯ ಹೊಸ ವ್ಯವಹಾರಗಳಿಗೆ ಕೈ ಹಾಕದೇ ಇರುವುದು ಉತ್ತಮ. ಆರೋಗ್ಯದ ದೃಷ್ಟಿಯಿಂದಲೂ ಸಮಯ ಅಷ್ಟು ಉತ್ತಮವಾಗಿರದ ಕಾರಣ ಯಾವುದೇ ರೀತಿಯ ಸಣ್ಣ ನಿರ್ಲಕ್ಷವೂ ಒಳ್ಳೆಯದಲ್ಲ.
ಮಕರ ರಾಶಿ:
ಪಿತಾ ಪುತ್ರರ ಮುಖಾಮುಖಿಯಿಂದಾಗಿ ರೂಪುಗೊಂಡಿರುವ ಅಪಾಯಕಾರಿ ಸಂಸಪ್ತಕ ಯೋಗವು ಮಕರ ರಾಶಿಯವರ ಜೀವನದಲ್ಲಿಯೂ ನಕಾರಾತ್ಮಕ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ನೀವು ಅನಾವಶ್ಯಕ ವಾದಗಳಲ್ಲಿ ಸಿಲುಕುವ ಸಾಧ್ಯತೆ ಇರುವುದರಿಂದ ಸುಖಾ ಸುಮ್ಮನೆ ಮಾತನಾಡುವುದನ್ನು ತಪ್ಪಿಸಿ. ಇಲ್ಲದಿದ್ದರೆ, ನಿಮ್ಮ ಮಕ್ಕಳ ದೃಷ್ಟಿಯಲ್ಲಿಯೇ ನೀವು ಕೀಳಾಗಬಹುದು.
ಇದನ್ನೂ ಓದಿ- Surya Gochar 2023: ಸಿಂಹ ರಾಶಿಗೆ ಸೂರ್ಯನ ಪ್ರವೇಶ, ಈ ರಾಶಿಯವರಿಗೆ ಕಷ್ಟದ ದಿನಗಳು ಆರಂಭ
ಕುಂಭ ರಾಶಿ:
ಸ್ವ ರಾಶಿಯಲ್ಲಿ ಶನಿ ಸಿಂಹ ರಾಶಿಯಲ್ಲಿ ಸೂರ್ಯನ ಉಪಸ್ಥಿತಿಯಿಂದ ನಿರ್ಮಾಣವಾಗಿರುವ ಅಪಾಯಕಾರಿ ಸಂಸಪ್ತಕ ಯೋಗವು ಈ ರಾಶಿಯವರ ಜೀವನದಲ್ಲಿ ಒಂದು ತಿಂಗಳುಗಳ ಕಾಲ ಉದ್ವೇಗವನ್ನು ಹೆಚ್ಚಿಸಲಿದೆ. ಈ ಸಂದರ್ಭದಲ್ಲಿ ಅನವಶ್ಯಕ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದ್ದು ಇದು ನಿಮ್ಮ ಒತ್ತಡಕ್ಕೂ ಕಾರಣವಾಗಬಹುದು. ಇದಲ್ಲದೆ, ಪ್ರಯಾಣದಲ್ಲಿ ತೊಂದರೆ ಇರುವುದರಿಂದ ಸಾಧ್ಯವಾದರೆ ಪ್ರಯಾಣವನ್ನು ತಪ್ಪಿಸಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.