ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಹಿಮ್ಮುಖ ಚಲನೆಯ ಪರಿಣಾಮ  ಎಲ್ಲಾ 12 ರಾಶಿಯವರ ಜೀವನದ ಮೇಲೆ ಬೀರುತ್ತದೆ. ಆಗಸ್ಟ್ 24 ರಂದು, ಸಿಂಹ ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಿದ ಬುಧ, ಸೆಪ್ಟೆಂಬರ್ 15 ರವರೆಗೆ ಹಾಗೆಯೇ ಇರಲಿದೆ. ಬುದ್ಧನನ್ನು ಬುದ್ಧಿವಂತಿಕೆ, ವ್ಯವಹಾರ ಮತ್ತು ಮಾತಿನ ಅಂಶವೆಂದು ಪರಿಗಣಿಸಲಾಗಿದೆ. ಬುಧನ ಹಿಮ್ಮುಖ ಚಲನೆಯ ಪರಿಣಾಮ ಕೆಲವು ರಾಶಿಯವರಿಗೆ ಶುಭವಾಗಿದ್ದರೆ, ಇನ್ನು ಕೆಲವರಿಗೆ ಅಶುಭ ಫಲ ನೀಡಲಿದೆ.   


COMMERCIAL BREAK
SCROLL TO CONTINUE READING

ಈ ರಾಶಿಯವರಿಗೆ ಶುಭ ಫಲ ನೀಡಲಿದ್ದಾನೆ ಬುಧ : 
ಕಟಕ ರಾಶಿ : 
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೆಪ್ಟೆಂಬರ್ 15 ರ ಹೊತ್ತಿಗೆ, ಕರ್ಕಾಟಕ ರಾಶಿಯವರು ಅದ್ಭುತವಾದ ಪ್ರಯೋಜನಗಳನ್ನು ಪಡೆಯುತ್ತಾರೆ. ಆಸ್ತಿ ಇತ್ಯಾದಿಗಳಲ್ಲಿ ಹೂಡಿಕೆ ಮಾಡುವ ಯೋಚನೆ ಇದ್ದರೆ ಈ ಸಮಯವು ಅನುಕೂಲಕರವಾಗಿರುತ್ತದೆ. ವ್ಯಾಪಾರದಲ್ಲಿ ಸಾಕಷ್ಟು ಲಾಭವಾಗಲಿದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ಉದ್ಯೋಗ ಮಾಡುವವರು ಈ ಸಮಯದಲ್ಲಿ ಹೊಸ  ಸ್ಥಾನಕ್ಕೆ ಏರುವ ಸಾಧ್ಯತೆ ಇದೆ. 


ಇದನ್ನೂ ಓದಿ : ಶ್ರಾವಣ ಹುಣ್ಣಿಮೆಯಂದು ಈ ಮಂತ್ರ ಪಠಿಸಿದರೆ ಸಮೃದ್ಧಿ ಜೊತೆ ಅಖಂಡ ವರವನ್ನೇ ಕರುಣಿಸುವರು ತಾಯಿ ಮಹಾಲಕ್ಷ್ಮೀ


ವೃಷಭ ರಾಶಿ  :
ಬುಧನ ಈ ಸಂಚಾರವು ವೃಷಭ ರಾಶಿಯವರಿಗೆ ವಿಶೇಷವಾಗಿ ಫಲಕಾರಿಯಾಗಲಿದೆ. ಬುಧ ಗ್ರಹದ ಹಿಮ್ಮುಖ ಚಲನೆಯಿಂದಾಗಿ ಹಣಕಾಸಿನ ಲಾಭವಾಗಬಹುದು. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಅಷ್ಟೇ ಅಲ್ಲ, ಈ ಸಮಯದಲ್ಲಿ ಸಾಕಷ್ಟು ಖ್ಯಾತಿ ಗಳಿಸುವುದು ಸಾಧ್ಯವಾಗುತ್ತದೆ. ವೃತ್ತಿ ಬದಲಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈ ಸಮಯವು ತುಂಬಾ ಮಂಗಳಕರವಾಗಿರುತ್ತದೆ. 


ತುಲಾ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತುಲಾ ರಾಶಿಯವರಿಗೆ ಈ ಸಮಯವು ಪ್ರಯೋಜನಕಾರಿಯಾಗಿರಲಿದೆ. ಬುಧನ ಹಿಮ್ಮುಖ ಚಲನೆಯು ಈ ರಾಶಿಯ  ಜನರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಈ ಸಮಯದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಜನರು ಯಶಸ್ಸು  ಪಡೆಯುವ ಸಾಧ್ಯತೆಯಿದೆ. ವ್ಯಾಪಾರದಲ್ಲಿ ಹೊಸ ಯೋಜನೆಯನ್ನು ರೂಪಿಸುವಲ್ಲಿ ಯಶಸ್ವಿಯಾಗುವಿರಿ. ಸ್ನೇಹಿತರಿಂದ ವಿಶೇಷ ಉಡುಗೊರೆ ಸಿಗುವ ಸಾಧ್ಯತೆ ಇದೆ. 


ಇದನ್ನೂ ಓದಿ : ಇಂದು ರಕ್ಷಾ ಬಂಧನ, ಶನಿ-ಗುರುವಿನ ಅಪರೂಪದ ಯೋಗ, ಶ್ರೀಹರಿ ಲಕ್ಷ್ಮಿ ಕೃಪೆಯಿಂದ ಈ ಜನರ ಮೇಲೆ ಭಾರಿ ಧನವೃಷ್ಟಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.