Akshaya Tritiya 2024: ಅಕ್ಷಯ ತೃತೀಯದಂದು ಚಿನ್ನವನ್ನು ಏಕೆ ಖರೀದಿಸಬೇಕು? ಬಂಗಾರ ಖರೀದಿಗೆ ಶುಭ ಸಮಯ ಯಾವುದು?
akshaya tritiya 2024 importance: ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿಸಲು ಶುಭ ಸಮಯ ಯಾವುದು? ಇದರ ಹಿಂದಿನ ಮಹತ್ವವೇನು ತಿಳಿಯಿರಿ.
Akshaya Tritiya 2024: ಈ ವರ್ಷ ಅಕ್ಷಯ ತೃತೀಯವನ್ನು ಮೇ 10 ರಂದು ಆಚರಿಸಲಾಗುತ್ತಿದೆ. ಅಕ್ಷಯ ತೃತೀಯ ಸಂದರ್ಭದಲ್ಲಿ ಚಿನ್ನ, ಬೆಳ್ಳಿ, ಆಭರಣಗಳು, ವಾಹನಗಳು, ಮನೆಗಳು, ಅಂಗಡಿಗಳು, ಫ್ಲಾಟ್‌ಗಳು, ನಿವೇಶನಗಳು ಇತ್ಯಾದಿಗಳನ್ನು ಖರೀದಿಸಲಾಗುತ್ತದೆ. ಅಕ್ಷಯ ತೃತೀಯ ದಿನ ಶುಭ ಕಾರ್ಯಗಳನ್ನು ಸಹ ಮಾಡಲಾಗುತ್ತದೆ. ಅಕ್ಷಯ ತೃತೀಯ ಅಥವಾ ಅಖ ತೀಜ್ ಅನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಅಕ್ಷಯ ತೃತೀಯದಂದು ಭಾರತದಾದ್ಯಂತ ಹೆಚ್ಚಿನ ಜನರು ಚಿನ್ನವನ್ನು ಖರೀದಿಸುತ್ತಾರೆ. ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿಸಲು ಶುಭ ಸಮಯ ಯಾವುದು? ಇದರ ಹಿಂದಿನ ಮಹತ್ವವೇನು ತಿಳಿಯಿರಿ.
ಅಕ್ಷಯ ತೃತೀಯದಂದು ಚಿನ್ನವನ್ನು ಏಕೆ ಖರೀದಿಸಬೇಕು?
ಪುರಾಣಗಳ ಪ್ರಕಾರ, ಬ್ರಹ್ಮ ದೇವನ ಮಗ ಅಕ್ಷಯ್ ಕುಮಾರ್ ವೈಶಾಖ ಶುಕ್ಲ ತೃತೀಯ ದಿನದಂದು ಜನಿಸಿದರು. ಆದ್ದರಿಂದ ಈ ದಿನದಂದು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ. ಈ ದಿನದಂದು ಯಾವುದೇ ಶುಭ ಕಾರ್ಯವನ್ನು ಮಾಡಿದರೂ ಅದು ಉತ್ತಮ ಫಲವನ್ನು ನೀಡುತ್ತದೆ. ಚಿನ್ನ, ಬೆಳ್ಳಿ, ಆಭರಣ ಅಥವಾ ಆಸ್ತಿಯನ್ನು ಲಕ್ಷ್ಮಿ ದೇವಿಯ ಭೌತಿಕ ರೂಪವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ನಿರ್ಮಾಣಗೊಳ್ಳಲಿದೆ ಪಂಚ ಮಹಾಯೋಗ
ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದವನಿಗೆ ಎಂದಿಗೂ ಸಂಪತ್ತಿನ ಕೊರತೆ ಆಗುವುದಿಲ್ಲ. ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ ಅಥವಾ ಇತರ ಅಮೂಲ್ಯ ವಸ್ತುಗಳನ್ನು ಖರೀದಿಸುವ ಮೂಲಕ, ನಾವು ಲಕ್ಷ್ಮಿ ದೇವಿಯನ್ನು ಮನೆಗೆ ಕರೆತಂದಂತೆ. ಸಂಪತ್ತಿನ ರೂಪದಲ್ಲಿ ಲಕ್ಷ್ಮಿ ದೇವಿ ಮನೆಗೆ ಬರುತ್ತಾಳೆಂಬ ನಂಬಿಕೆಯಿದೆ. ಈ ಕಾರಣದಿಂದಾಗಿ ಅಕ್ಷಯ ತೃತೀಯ ದಿನದಂದು ಪಡೆದ ಸಂಪತ್ತು ಶಾಶ್ವತವಾಗಿರುತ್ತದೆ. ಈ ಕಾರಣಕ್ಕಾಗಿ ಜನರು ಅಕ್ಷಯ ತೃತೀಯದಂದು ಚಿನ್ನ ಅಥವಾ ಆಸ್ತಿಯನ್ನು ಖರೀದಿಸುತ್ತಾರೆ.
ಅಕ್ಷಯ ತೃತೀಯ ಮಹಿಮೆ
ಪದ್ಮ ಪುರಾಣದ ಪ್ರಕಾರ, ಭಗವಾನ್ ವಿಷ್ಣುವು ನಾರದರಿಗೆ ಅಕ್ಷಯ ತೃತೀಯ ಮಹತ್ವವನ್ನು ತಿಳಿಸಿದ್ದಾನೆ. ಅಕ್ಷಯ ತೃತೀಯ ಸಂದರ್ಭದಲ್ಲಿ ಯಾವ ಕೆಲಸ ಮಾಡಿದರೂ ಅದರಿಂದ ಶುಭ ಫಲ ಸಿಗುತ್ತದೆ ಎಂದು ಹೇಳಿದ್ದಾರೆ. ಆ ಫಲ ಶಾಶ್ವತವಾಗಿ ಉಳಿಯುತ್ತದೆ. ಈ ದಿನ ಕೆಟ್ಟ ಕೆಲಸಗಳನ್ನು ಮಾಡಬೇಡಿ ಮತ್ತು ಸುಳ್ಳು ಹೇಳಬಾರದು.
ಅಕ್ಷಯ ತೃತೀಯದಂದು ಚಿನ್ನದ ಬದಲು ಏನು ಖರೀದಿಸಬಹುದು?
ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಲು ಸಾಧ್ಯವಾಗದವರು ಬಾರ್ಲಿಯನ್ನು ಖರೀದಿಸಬೇಕು. ಬಾರ್ಲಿಯನ್ನು ಖರೀದಿಸುವುದರಿಂದ ನೀವು ಪುಣ್ಯದ ಫಲವನ್ನು ಪಡೆಯುತ್ತೀರಿ. ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತೀರಿ. ಮನೆ ಸಂಪತ್ತಿನಿಂದ ತುಂಬಿರುತ್ತದೆ.
ಅಕ್ಷಯ ತೃತೀಯ 2024 ಚಿನ್ನ ಖರೀದಿಸಲು ಶುಭ ಸಮಯ
- ಅಕ್ಷಯ ತೃತೀಯ 2024 ಪೂಜೆ ಮುಹೂರ್ತ: 2024 ರ ಮೇ 10 ರಂದು ಮುಂಜಾನೆ 05:33 ರಿಂದ ಮಧ್ಯಾಹ್ನ 12:18 ರವರೆಗೆ ಇರುತ್ತದೆ.
- ಅಕ್ಷಯ ತೃತೀಯ ತಿಥಿ ಅವಧಿ: ತೃತೀಯಾ ತಿಥಿಯು ಮೇ 10 ರಂದು ಮುಂಜಾನೆ 04:17 ಪ್ರಾರಂಭವಾಗಿ, ಮೇ 11 ರಂದು ಮಧ್ಯರಾತ್ರಿ 02:50 ಕ್ಕೆ ಕೊನೆಗೊಳ್ಳುತ್ತದೆ.
- ಅಕ್ಷಯ ತೃತೀಯ 2024 ಬಂಗಾರ ಖರೀದಿಗೆ ಶುಭ ಮುಹೂರ್ತ: 2024 ರ ಅಕ್ಷಯ ತೃತೀಯ ದಿನದಂದು ಬಂಗಾರ ಖರೀದಿ ಮಾಡಲು ಮೇ 09 ರಂದು ಮುಂಜಾನೆ 04:17 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮೇ 11 ರಂದು ತೃತೀಯ ತಿಥಿಯ ಅಂತ್ಯದವರೆಗೆ ಮುಂದುವರಿಯುತ್ತದೆ. ಅಂದರೆ ಮೇ 11 ರಂದು ಮಧ್ಯರಾತ್ರಿ 2:50 ರವರೆಗೆ ಬಂಗಾರ ಖರೀದಿಸಬಹುದು.
ಇದನ್ನೂ ಓದಿ: Kuber Yoga: ಮೇ ತಿಂಗಳಲ್ಲಿ ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ, ಸಿರಿವಂತರಾಗುವ ಯೋಗ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.