Ram Mandir: ಈಗ ಇಡೀ ದೇಶದ ಚಿತ್ತವೇ ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯತ್ತ  ನೆಟ್ಟಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದ್ದು, ಇದರ ಮಧ್ಯೆ ಪ್ರಭು ಶ್ರೀರಾಮ ಚಂದ್ರನ ಮಂದಿರವೊಂದು ಇದೀಗ ಇಡೀ ರಾಜ್ಯದ ಗಮನಸೆಳೆಯುತ್ತಿದೆ. ಅಂದು ಮಂದಿರ ನಿರ್ಮಾಣಕ್ಕೆ ನಡೆಸಿದ ಜಾಥಾ ಇಂದು ಅದೇ ಮಂದಿರವಾಗಿ ಜನರ ನಡುವೆ ಎದ್ದು ನಿಂತಿದೆ. ಈ ಕುರಿತು ಒಂದು ವರದಿ ಇಲ್ಲಿದೆ... 


COMMERCIAL BREAK
SCROLL TO CONTINUE READING

ಕರ್ನಾಟಕದಲ್ಲೇ ಮೊದಲು ಎಂದು ಹೇಳಲಾಗುವ ಭಾರತ ಮಾತೆಯ ದೇವಸ್ಥಾನವೊಂದು ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದಲ್ಲಿದೆ. ಇಲ್ಲಿಂದಲೇ ಧರ್ಮ ಜಾಗೃತಿ ಕೆಲಸಗಳು ನಡೆಯುತ್ತಿದ್ದವು. ಈ ಭಾರತ ಮಾತೆಯ ದೇವಸ್ಥಾನದಲ್ಲಿ ಪ್ರಭು ಶ್ರೀರಾಮಚಂದ್ರ, ಸೀತಾದೇವಿ ಹಾಗೂ ಆಂಜನೇಯನ ಮೂರ್ತಿ ಇರುವುದು ವಿಶೇಷ. ಈಗ ಇದೇ ಗಮನಸೆಳೆಯುತ್ತಿದೆ.


ಅಂದು ಅಯೋಧ್ಯೆಯಲ್ಲಿ ಶ್ರೀರಾಮ ಚಂದ್ರನ ದೇವಸ್ಥಾನ ನಿರ್ಮಾಣಕ್ಕಾಗಿ ದೊಡ್ಡ ಹೋರಾಟವೇ ನಡೆದಿತ್ತು. ಈ ಹೋರಾಟದಲ್ಲಿ ಧಾರವಾಡದಿಂದ ಅನೇಕ ಕರಸೇವಕರು ಕೂಡ ಪಾಲ್ಗೊಂಡಿದ್ದರು. ದೇವರ ಹುಬ್ಬಳ್ಳಿ ಗ್ರಾಮದಿಂದಲೂ ಇಬ್ಬರು ಕರಸೇವರು ಅಯೋಧ್ಯೆ ಹೋರಾಟದಲ್ಲಿ ಪಾಲ್ಗೊಂಡಿದ್ದರು. 


ಇದನ್ನೂ ಓದಿ- ಅಯೋಧ್ಯೆಯ ಸರಯು ನದಿಯಲ್ಲಿ ಸಂಚರಿಸಲಿದೆ ಭಾರತದ ಮೊದಲ ಸೌರಶಕ್ತಿ ಚಾಲಿತ ದೋಣಿ


1980ರ ದಶಕದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ರಾಮ ರಥಯಾತ್ರೆ ಆರಂಭಿಸಿದ್ದರು. ಈ ರಥಯಾತ್ರೆ ಹಳ್ಳಿ ಹಳ್ಳಿಗಳಲ್ಲೂ ಸಂಚರಿಸಿತ್ತು. ಈ ರಥಯಾತ್ರೆಯಲ್ಲಿ ರಾಮ, ಸೀತೆ ಹಾಗೂ ಆಂಜನೇಯನ ಮೂರ್ತಿಗಳನ್ನು ಮೆರವಣಿಗೆ ಮಾಡಲಾಗಿತ್ತು. ದೇವರ ಹುಬ್ಬಳ್ಳಿ ಗ್ರಾಮದಲ್ಲಿ ಮೊದಲೇ ನಿರ್ಮಾಣವಾಗಿದ್ದ ಭಾರತ ಮಾತೆಯ ದೇವಸ್ಥಾನದಲ್ಲೇ ಈ ರಾಮ, ಸೀತೆ ಹಾಗೂ ಆಂಜನೇಯನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.


80ರ ದಶಕದಲ್ಲಿ ಆರಂಭವಾಗಿದ್ದ ಅಯೋಧ್ಯೆ ಹೋರಾಟದ ಕಿಚ್ಚು ಹಳ್ಳಿ ಹಳ್ಳಿಗಳಿಗೂ ಪಸರಿಸಿತ್ತು. ದೇವರ ಹುಬ್ಬಳ್ಳಿ ಗ್ರಾಮದಲ್ಲೂ ಈ ಹೋರಾಟದ ಕಿಚ್ಚು ಹಬ್ಬಿ ಅದಕ್ಕಾಗಿ ದೇವಸ್ಥಾನವೂ ನಿರ್ಮಾಣವಾಗಿತ್ತು. ಅಂದು ನಡೆದ ಹೋರಾಟ ಇಂದು ಫಲಪ್ರದವಾಗಿದ್ದು, ದೇವರ ಹುಬ್ಬಳ್ಳಿ ಕರಸೇವಕರು ಇದೀಗ ಫುಲ್ ಖುಷಿಯಾಗಿದ್ದಾರೆ, ಅಂದಿನಿಂದ ಇಲ್ಲಿಯವರೆಗೂ ರಾಮನ ಜಪ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಗ್ರಾಮದಲ್ಲಿ ಆಯೋಜಿಸಿ ಜನರನ್ನ ಜಾಗೃತಿ ಮಾಡುವ ಕಾರ್ಯವನ್ನ ಇಲ್ಲಿನ ಗ್ರಾಮಸ್ತರು ಹಾಗೂ ಇಲ್ಲಿನ ಮಠಾಧೀಶರು ಮಾಡುತ್ತಾ ಬಂದಿದ್ದಾರೆ. 


ಇದನ್ನೂ ಓದಿ- ಅಯೋಧ್ಯೆ ರಾಮಮಂದಿರಕ್ಕೆ ಫ್ರೀ ವಿಐಪಿ ಪ್ರವೇಶ ಕೊಡುಗೆ' ಇಂತಾ ನಕಲಿ ವಾಟ್ಸಾಪ್ ಸಂದೇಶದ ಬಗ್ಗೆ ಇರಲಿ ಎಚ್ಚರ!


ವಿಶ್ವ ಹಿಂದೂ ಪರಿಷತ್ ವತಿಯಿಂದ ಆರಂಭವಾಗಿದ್ದ ರಥಯಾತ್ರೆಯನ್ನು ದೇವರ ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಅಂದು ಮೆರವಣಿಗೆ ಮಾಡಲಾಗಿತ್ತು. ಅಯೋಧ್ಯೆ ಹೋರಾಟಕ್ಕೆ ಇದೇ ಭಾರತ ಮಾತೆಯ ದೇವಸ್ಥಾನ ಸ್ಪೂರ್ತಿ ಸಹ ತುಂಬಿತ್ತು. ಒಟ್ಟಾರೆಯಾಗಿ ಇದೀಗ ಅಯೋಧ್ಯೆಯಲ್ಲಿ ಶ್ರೀರಾಮ ವಿರಾಜಮಾನನಾಗುತ್ತಿದ್ದು, ದೇವರ ಹುಬ್ಬಳ್ಳಿಯ ಕರಸೇವಕರು ಇದೀಗ ತೀವ್ರ ಸಂತಸ ವ್ಯಕ್ತಪಡಿಸುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.