ನೀರಿಗೆ ಇವುಗಳನ್ನು ಸೇರಿಸಿ ಸ್ನಾನ ಮಾಡಿ..ಇದರಿಂದ ಅದೃಷ್ಟ, ಪ್ರೀತಿ ಮತ್ತು ಯಶಸ್ಸು ನಿಮ್ಮದಾಗುತ್ತದೆ..!
Bath rituals: ಸ್ನಾನ ಮಾಡುವುದು ದಿನಚರಿಯ ಒಂದು ಭಾಗವೆಂದು ನಾವು ಊಹಿಸಿದ್ದೇವೆ ಆದರೆ, ಪ್ರಾಚೀನ ಸಂಪ್ರದಾಯಗಳ ಪ್ರಕಾರ ಸ್ನಾನ ಎನ್ನುವುದು ಆತ್ಮಾವಲೋಕನಕ್ಕೆ ಸಹಾಯ ಮಾಡುತ್ತದೆ. ನಿಮ್ಮ ಸ್ನಾನದ ನೀರಿಗೆ ಕೆಲವೊಂದು ಪದಾರ್ಥಗಳನ್ನು ಬೆರಸುವುದರಿಂದ ಇದು ನಿಮ್ಮ ಜೀವನವನ್ನು ಬದಲಾಯಿಸಬಹುದು. ಇದರಿಂದ ಮನಸ್ಸು ಶಾಂತಿಯುತವಾಗಿರುವುದು ಅಷ್ಟೆ ಅಲ್ಲದೆ, ನಿಮಗೆ ಅದೃಷ್ಟ ಒಲಿದು ಬರುತ್ತದೆ.
Bath rituals: ಸ್ನಾನ ಮಾಡುವುದು ದಿನಚರಿಯ ಒಂದು ಭಾಗವೆಂದು ನಾವು ಊಹಿಸಿದ್ದೇವೆ ಆದರೆ, ಪ್ರಾಚೀನ ಸಂಪ್ರದಾಯಗಳ ಪ್ರಕಾರ ಸ್ನಾನ ಎನ್ನುವುದು ಆತ್ಮಾವಲೋಕನಕ್ಕೆ ಸಹಾಯ ಮಾಡುತ್ತದೆ. ನಿಮ್ಮ ಸ್ನಾನದ ನೀರಿಗೆ ಕೆಲವೊಂದು ಪದಾರ್ಥಗಳನ್ನು ಬೆರಸುವುದರಿಂದ ಇದು ನಿಮ್ಮ ಜೀವನವನ್ನು ಬದಲಾಯಿಸಬಹುದು. ಇದರಿಂದ ಮನಸ್ಸು ಶಾಂತಿಯುತವಾಗಿರುವುದು ಅಷ್ಟೆ ಅಲ್ಲದೆ, ನಿಮಗೆ ಅದೃಷ್ಟ ಒಲಿದು ಬರುತ್ತದೆ.
ಉಪ್ಪು
ಉಪ್ಪು ಉತ್ತಮ ಶುದ್ಧೀಕರಣ ಗುಣಗಳನ್ನು ಹೊಂದಿದೆ. ಸ್ನಾನದ ನೀರಿಗೆ ಉಪ್ಪನ್ನು ಸೇರಿಸುವುದರಿಂದ ದೇಹದಿಂದ ನಕಾರಾತ್ಮಕ ಶಕ್ತಿಗಳು ಮತ್ತು ಕಲ್ಮಶಗಳನ್ನು ತೆಗೆದುಹಾಕುತ್ತದೆ.ಸ್ಪಷ್ಟತೆ, ಶಾಂತಿ ಮತ್ತು ರಕ್ಷಣೆಯ ಪ್ರಜ್ಞೆಯನ್ನು ಉತ್ತೇಜಿಸಲು ಉಪ್ಪು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಸ್ನಾನದ ನೀರಿಗೆ ಒಂದು ಕಪ್ ಉಪ್ಪನ್ನು ಬೆರಸಿ ಸ್ನಾನ ಮಾಡುವುದರಿಂದ ನಿಮ್ಮ ದೇಹದಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.
ಏಲಕ್ಕಿ
ಏಲಕ್ಕಿಗಳು ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತವೆ ಎಂದು ನಂಬಲಾಗಿದೆ. ಸ್ನಾನದ ನೀರಿಗೆ ಏಲಕ್ಕಿಯನ್ನು ಸೇರಿಸುವುದರಿಂದ ಜೀವನದಲ್ಲಿ ಅದೃಷ್ಟ ಮತ್ತು ಧನಾತ್ಮಕ ಶಕ್ತಿ ಬರುತ್ತದೆ. ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಹಾಲು
ಸ್ನಾನದ ನೀರಿಗೆ ಹಾಲು ಸೇರಿಸುವುದರಿಂದ ಚರ್ಮ ಮೃದುವಾಗುತ್ತದೆ. ಇದು ಪುರಾತನ ಸಂಪ್ರದಾಯ. ಅಷ್ಟೇ ಅಲ್ಲ, ಹಾಲು ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಪ್ರಾಚೀನ ಕಾಲದಲ್ಲಿ ನಂಬಲಾಗಿದೆ.
ಹರಿಶಿನ
ಸ್ನಾನದ ನೀರಿಗೆ ಅರಿಶಿನವನ್ನು ಸೇರಿಸುವುದರಿಂದ ಜೀವನದಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಒಂದು ಬಕೆಟ್ ನೀರಿಗೆ ಒಂದು ಚಮಚ ಅರಿಶಿನ ಪುಡಿಯನ್ನು ಸೇರಿಸಿ ಮತ್ತು 15 ನಿಮಿಷಗಳ ಕಾಲ ಇರಿಸಿ. ನಂತರ ಆ ನೀರಿನಿಂದ ಸ್ನಾನ ಮಾಡಿ.
ಶ್ರೀಗಂದ
ಅನೇಕರು ಸ್ನಾನ ಮಾಡುವ ಮೊದಲು ಶ್ರೀಗಂಧವನ್ನು ಮೈಮೇಲೆ ಹಚ್ಚಿಕೊಳ್ಳುತ್ತಾರೆ . ಆದರೆ ಸ್ನಾನದ ನೀರಿನಲ್ಲಿ ಶ್ರೀಗಂಧವನ್ನು ಸೇರಿಸುವುದು ಆಂತರಿಕ ಶಾಂತಿ ಮತ್ತು ಆಧ್ಯಾತ್ಮಿಕ ಅಭ್ಯಾಸವನ್ನು ಅಭಿವೃದ್ಧಿಪಡಿಸಲು ಬಹಳಷ್ಟು ಸಹಾಯಕಾರಿ.
ಗುಲಾಬಿ ದಳ
ಸ್ನಾನದ ನೀರಿಗೆ ಗುಲಾಬಿ ದಳಗಳನ್ನು ಸೇರಿಸುವುದರಿಂದ ನಿಮ್ಮ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯ ತುಂಬಿರುವಂತೆ ಮಾಡುತ್ತದೆ. ಗುಲಾಬಿ ದಳದ ಸೌಮ್ಯವಾದ ಸುಗಂಧವು ಮನಸ್ಥಿತಿಯನ್ನು ಸುಧಾರಿಸುತ್ತದು ಅಷ್ಟೆ ಅಲ್ಲದೆ ಇದರಿಂದ ಸ್ನಾನ ಮಾಡುವುದರಿಂದ ಚರ್ಮ ಮೃದುವಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee ಮಾಧ್ಯಮವು ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.