ದಿನಭವಿಷ್ಯ 12-12-2024: ಗುರುವಾರದಂದು ಅಶ್ವಿನಿ ನಕ್ಷತ್ರ, ಪರಿಘ ಯೋಗ: ಈ ರಾಶಿಯವರಿಗೆ ವಾಹನ ಖರೀದಿ ಯೋಗ
Today Horoscope 12th December 2024: ಗುರುವಾರದ ಈ ದಿನ ಅಶ್ವಿನಿ ನಕ್ಷತ್ರ, ಪರಿಘ ಯೋಗ, ಬವ ಕರಣ. ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಗುರುವಾರದ ಈ ದಿನ ಅಶ್ವಿನಿ ನಕ್ಷತ್ರ, ಪರಿಘ ಯೋಗ, ಬವ ಕರಣ. ಮೇಷದಿಂದ ಮೀನ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ನೀವು ಮನೆ, ಕುಟುಂಬ ಮತ್ತು ಗೃಹ ವ್ಯವಹಾರಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿ. ಕಚೇರಿಯಲ್ಲಿ ಪ್ರಮುಖ ಕೆಲಸಗಳಲ್ಲಿ ಆತುರತೆಯನ್ನು ತೋರಬೇಡಿ. ಅಗತ್ಯವಿದ್ದರೆ, ಹಿರಿಯರ ಮಾರ್ಗದರ್ಶನ ಪಡೆಯಲು ಹಿಂಜರಿಯಬೇಡಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ವೃತ್ತಿ ವ್ಯವಹಾರದಲ್ಲಿ ಭಾರೀ ಲಾಭ, ಯಶಸ್ಸನ್ನು ಗಳಿಸುವಿರಿ. ಅಗತ್ಯ ಕಾರ್ಯಗಳನ್ನು ಪೂರ್ಣಗೊಳಿಸಲು ಹಿಂಜರಿಕೆ ಬೇಡ. ವ್ಯಾಪಾರ ಲಾಭಗಳನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗುವಿರಿ. ಹೊಸ ಆದಾಯ ಮೂಲಗಳು ಸೃಷ್ಟಿಯಾಗಲಿವೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ನಿಮ್ಮ ಕಲೆ ಮತ್ತು ಕೌಶಲ್ಯಗಳಿಗೆ ಒತ್ತು ನೀಡಿ. ಪ್ರಮುಖ ವ್ಯವಹಾರಗಳಲ್ಲಿ ನಿರೀಕ್ಷೆಗಿಂತ ಉತ್ತಮ ಫಲ ಪಡೆಯಬಹುದು. ಸರ್ಕಾರಕ್ಕೆ ಸಂಬಂಧಿಸಿದ ವ್ಯವಹಾರಗಳು ವೇಗವನ್ನು ಪಡೆಯಲಿವೆ. ಕೌಟುಂಬಿಕ ವಾತಾವರಣ ಆಹ್ಲಾದಕರವಾಗಿರುತ್ತದೆ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಇಂದು ಅದೃಷ್ಟದ ಸಂಪೂರ್ಣ ಬೆಂಬಲ ಇರಲಿದೆ ವೃತ್ತಿ-ವ್ಯವಹಾರದಲ್ಲಿ ಭರ್ಜರಿ ಲಾಭವನ್ನು ಪಡೆಯುವಿರಿ. ಕೆಲಸ ಕಾರ್ಯಗಳು ನಿಮ್ಮ ನಿರೀಕ್ಷೆಗೂ ಮೀರಿ ನಡೆಯಲಿವೆ. ಯಾರೊಂದಿಗಾದರೂ ಮಾತನಾಡುವಾಗ ಆತ್ಮವಿಶ್ವಾಸದಿಂದ ಇರಿ. ಆತ್ಮಸ್ಥೈರ್ಯ ವೃದ್ಧಿಯಾಗಲಿದೆ. ವಾಹನ ಖರೀದಿ ಯೋಗವೂ ಇದೆ.
ಇದನ್ನೂ ಓದಿ- 2025ರಲ್ಲಿ ಈ ರಾಶಿಯವರ ಮೇಲಿರಲಿದೆ ಸಾಕ್ಷಾತ್ ಲಕ್ಷ್ಮಿ ಅನುಗ್ರಹ, ವರ್ಷಪೂರ್ತಿ ಯಶಸ್ಸು, ಕೈ ಸೇರಲಿದೆ ಕುಬೇರನ ಸಂಪತ್ತು
ಸಿಂಹ ರಾಶಿಯವರ ಭವಿಷ್ಯ (Leo Horoscope):
ಮಹತ್ವದ ಕಾರ್ಯಗಳನ್ನು ಮಾಡುವಾಗ ತಾಳ್ಮೆಯಿಂದ ಇರಿ. ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳಲ್ಲಿ ವೇಗವನ್ನು ಕಾಣಬಹುದು. ಉದ್ಯೋಗಸ್ಥರು ಪ್ರಮುಖ ಪ್ರಾಜೆಕ್ಟ್ ನಲ್ಲಿ ಸಹೋದ್ಯೋಗಿಗಳ ಬೆಂಬಲವನ್ನು ಪಡೆಯುವಿರಿ. ಆದಾಗ್ಯೂ, ಉದ್ಯೋಗ ಸ್ಥಳದಲ್ಲಿ ವೃತ್ತಿಪರತೆಯನ್ನು ಕಾಪಾಡಿಕೊಳ್ಳಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಇಂದು ಕೆಲಸಗಳಲ್ಲಿ ಎಲ್ಲರ ಬೆಂಬಲದಿಂದ ಪ್ರಗತಿಯ ಹೊಸ ಹಾದಿಯನ್ನು ತುಳಿಯುವಿರಿ. ಜಂಟಿ ವ್ಯವಹಾರದಲ್ಲಿ ನಿರೀಕ್ಷಿತ ಯಶಸ್ಸು ಪ್ರಾಪ್ತಿಯಾಗಲಿದೆ. ಯಾವುದೇ ಪ್ರಮುಖ ವಿಚಾರದ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಯೋಚಿಸಿ ನಿರ್ಧರಿಸಿ.
ತುಲಾ ರಾಶಿಯವರ ಭವಿಷ್ಯ (Libra Horoscope):
ನೀವು ಮಾಡುವ ಕೆಲಸಗಳಲ್ಲಿ ದಕ್ಷತೆಯನ್ನು ಕಾಪಾಡಿಕೊಳ್ಳಿ. ನಿಮ್ಮೊಂದಿಗಿದ್ದೇ ನಿಮಗೆ ಕೇಡು ಬಯಸುವವರ ವಿರುದ್ಧ ಎಚ್ಚರಿಕೆಯಿಂದ ನಡೆದುಕೊಳ್ಳಿ. ಉದ್ಯೋಗದಲ್ಲಿ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುವಿರಿ. ಆದಾಗ್ಯೂ, ಇಂದು ನಿಮ್ಮ ಆರೋಗ್ಯವು ಕಾಲಜಿಯ ವಿಚಾರವಾಗಿದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಇಂದು ನಿಮ್ಮ ಹಣಕಾಸಿನ ನಿರ್ವಹಣೆಯ ಮೇಲೆ ಗಮನ ಕೇಂದ್ರೀಕರಿಸಿ. ವೆಚ್ಚಗಳನ್ನು ನಿಯಂತ್ರಿಸಿ. ಕೆಲಸದಲ್ಲಿ ನೀತಿ ನಿಯಮಗಳಿಗೆ ಬದ್ಧರಾಗಿರಿ. ನಿಮ್ಮ ಮಕ್ಕಳಿಂದ ಧನಾತ್ಮಕ ಸುದ್ದಿ ಕೇಳುವ ಸಾಧ್ಯತೆ ಇದು. ಆರ್ಥಿಕ ಹರಿವು ಹೆಚ್ಚಾಗಲಿದೆ.
ಇದನ್ನೂ ಓದಿ- 30ವರ್ಷಗಳ ಬಳಿಕ ಶನಿ-ಬುಧ ಮೈತ್ರಿ: 2025ರಲ್ಲಿ ಈ ರಾಶಿಯವರಿಗೆ ಭಾರೀ ಅದೃಷ್ಟ, ಅರಸಿ ಬರುವುದು ಶ್ರೀಮಂತಿಕೆ, ವೈಭೋಗ
ಧನು ರಾಶಿಯವರ ಭವಿಷ್ಯ (Sagittarius Horoscope):
ನೀವಿಂದು ಕಲಾತ್ಮಕ ಕೌಶಲ್ಯಗಳಿಗೆ ಒಟ್ಟು ನೀಡಿ. ಕುಟುಂಬದಲ್ಲಿ ಮೂಡಿದ್ದ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲು ಪ್ರಯತ್ನಿಸಿ. ಮನೆಯಲ್ಲಿ ಸಂತೋಷ ಹೆಚ್ಚಾಗುತ್ತದೆ. ವೈಯಕ್ತಿಕ ವಿಷಯಗಳು ನಿಮ್ಮ ಪರವಾಗಿ ಇರಲಿದೆ. ವಾಣಿಜ್ಯ ವ್ಯವಹಾರಗಳಲ್ಲಿ ಸಕಾರಾತ್ಮಕ ಫಲ ಪಡೆಯುವಿರಿ.
ಮಕರ ರಾಶಿಯವರ ಭವಿಷ್ಯ (Capricorn Horoscope):
ನಿಮ್ಮ ಕೆಲಸ ಮತ್ತು ವ್ಯವಹಾರದಲ್ಲಿ ಗಂಭೀರತೆಯನ್ನು ಹೆಚ್ಚಿಸುತ್ತೀರಿ. ಇದು ನಿಮ್ಮ ವೃತ್ತಿಪರತೆಯನ್ನು ಯಶಸ್ವಿಗೊಳಿಸುವಲ್ಲಿ ಸಹಕಾರಿ ಆಗಲಿದೆ. ವ್ಯವಹಾರದಲ್ಲಿ ಶುಭ ಪ್ರಸ್ತಾಪಗಳನ್ನು ಸ್ವೀಕರಿಸುವಿರಿ. ಇಂದು ಹಿರಿಯರ ಆಶೀರ್ವಾದದಿಂದ ಮುಂದುವರೆದರೆ ಶುಭವಾಗಲಿದೆ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ನಿಮ್ಮ ಕುಟುಂಬದಲ್ಲಿ ಸಾಮರಸ್ಯ ಇರಲಿದೆ. ಪ್ರೀತಿಪಾತ್ರರೊಂದಿಗೆ ಸಂತೋಷದ ಕ್ಷಣಗಳನ್ನು ಆನಂದಿಸುವಿರಿ. ಉದಾತ್ತ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಪ್ರಯತ್ನಿಸಿ. ಸಂಜೆ ವೇಳೆಗೆ ಮನೆಗೆ ಅತಿಥಿಗಳ ಆಗಮನವಾಗಬಹುದು.
ಮೀನ ರಾಶಿಯವರ ಭವಿಷ್ಯ (Pisces Horoscope):
ನಿಮ್ಮ ಸುತ್ತಲಿನ ವಾತಾವರಣ ಅನುಕೂಲಕರವಾಗಿರುತ್ತದೆ. ವ್ಯವಹಾರದಲ್ಲಿ ಆಕರ್ಷಕ ಪ್ರಸ್ತಾಪಗಳನ್ನು ಪಡೆಯುವಿರಿ. ವೈಯಕ್ತಿಕ ವಿಷಯಗಳು ಸುಧಾರಿಸುತ್ತವೆ. ನೀವು ಹೊಸತನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ಆಡಳಿತಾತ್ಮಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಶುಭ ದಿನ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.