Astro Tips: ಇನ್ನೇನು 2023ರ ವರ್ಷ ಮುಗಿಯುತ್ತಾ ಬಂದಿದೆ. ಹೊಸ ವರ್ಷದ ಸ್ವಾಗತಕ್ಕಾಗಿ ಅದ್ಧೂರಿ ಸಿದ್ಧತೆ ಕೂಡ ಭರದಿಂದ ಸಾಗಿದೆ. ಹೊಸ ವರ್ಷದಲ್ಲಿ ಕೆಲವರು ತಮ್ಮ ಸ್ನೇಹಿತರು, ಪ್ರೀತಿ ಪಾತ್ರರಿಗೆ ಉಡುಗೊರೆಗಳನ್ನು ನೀಡುವ ಅಭ್ಯಾಸ ಹೊಂದಿರುತ್ತಾರೆ. ಉಡುಗೊರೆ ಕೊಡುವುದು, ಇಲ್ಲವೇ ತೆಗೆದುಕೊಳ್ಳುವುದು ಒಂದು ಆಚರಣೆಯಷ್ಟೇ ಅಲ್ಲ ಇದು ಸಂಬಂಧಗಳ ನಡುವೆ ಬಾಂಧವ್ಯವನ್ನು ಕೂಡ ಹೆಚ್ಚಿಸುತ್ತದೆ ಎನ್ನಲಾಗುತ್ತದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾವು ಯಾರಿಗಾದರೂ ಉಡುಗೊರೆ ನೀಡುವಾಗ ವಿಶೇಷ ಗಮನ ಹರಿಸಬೇಕು. ಒಬ್ಬರು ಇನ್ನೊಬ್ಬರಿಗೆ ಕೊಡುವ ಉಡುಗೊರೆಯು ಸಕಾರಾತ್ಮಕ ಸಂಕೇತವಾಗಿದ್ದು, ಇದು ಅದೃಷ್ಟಕ್ಕೂ ಸಂಬಂಧಿಸಿದೆ. 


ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ, ಕೆಲವು ವಸ್ತುಗಳನ್ನು ಬೇರೆಯವರಿಗೆ ಉಡುಗೊರೆಯಾಗಿ ನೀಡಲೇಬಾರದು. ಇದರಿಂದ ಸಂಪತ್ತಿನ ಅಧಿದೇವತೆ ಮಾತೆ ಲಕ್ಷ್ಮಿ ಕೋಪಗೊಳ್ಳುವುದರ ಜೊತೆಗೆ ಮನೆಯನ್ನೇ ಬಿಟ್ಟು ಹೊರನಡೆಯಬಹುದು ಎನ್ನಲಾಗುತ್ತದೆ. ಈ ಕಾರಣದಿಂದಾಗಿ ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ಇದನ್ನು ತಪ್ಪಿಸಲು ಯಾವ ವಸ್ತುಗಳನ್ನು ಗಿಫ್ಟ್ ಆಗಿ ನೀಡುವುದನ್ನು ತಪ್ಪಿಸಬೇಕು ಎಂಬುದನ್ನು ಮೊದಲು ತಿಳಿಯೋಣ... 


ಇದನ್ನೂ ಓದಿ- Shukra Gochar 2023: ಐದು ದಿನಗಳ ಬಳಿಕ ವೃಶ್ಚಿಕ ರಾಶಿಯಲ್ಲಿ ಶುಕ್ರ ಸಂಚಾರ, 4 ರಾಶಿಯವರಿಗೆ ಧನ-ಸಂಪತ್ತು


ಅಪ್ಪಿತಪ್ಪಿಯೂ ಯಾರಿಗೂ ಈ ವಸ್ತುಗಳನ್ನು ಗಿಫ್ಟ್ ಆಗಿ ನೀಡಲೇಬಾರದು:- 
ಕಪ್ಪು ವಸ್ತುಗಳು: 

ಹೊಸ ವರ್ಷದಲ್ಲಾಗಲಿ ಇಲ್ಲವೇ ಯಾವುದೇ ಸಂದರ್ಭದಲ್ಲಾಗಲಿ ಯಾರಿಗೂ ಸಹ ಕಪ್ಪು ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು. ಕಪ್ಪು ಬಣ್ಣದ ಉಡುಗೊರೆಯು ನಕಾರಾತ್ಮಕತೆಯ ಪ್ರತೀಕ ಎನ್ನಲಾಗುತ್ತದೆ. ಹಾಗಾಗಿ, ಕಪ್ಪು ಬಣ್ಣದ ಉಡುಗೊರೆಯನ್ನು ನೀಡದಂತೆ ವಿಶೇಷ ಕಾಳಜಿವಹಿಸಿ. 


ಚೂಪಾದ ವಸ್ತುಗಳು: 
ನೀವು ನೀಡುವ ಗಿಫ್ಟ್ ಅಪ್ಪಿತಪ್ಪಿಯೂ ಕೂಡ ತೀಕ್ಷ್ಣವಾಗಿ, ಮೊನಚಾಗಿರಬಾರದು ಎಂಬುದನ್ನೂ ನೆನಪಿನಲ್ಲಿಡಿ. 


ವಿಗ್ರಹ: 
ಕೆಲವರು ವಿಶೇಷ ಸಂದರ್ಭದಲ್ಲಿ ದೇವ-ದೇವತೆಗಳ ವಿಗ್ರಹವನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ, ಇದು ನಿಮ್ಮ ಅದೃಷ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು, ಎಚ್ಚರ. 


ಕರವಸ್ತ್ರ: 
ಪ್ರೀತಿ ಪಾತ್ರರಿಗೆ ಕರವಸ್ತ್ರದಲ್ಲಿ ವಿಶೇಷ ಡಿಸೈನ್ ಮಾಡಿ ಅದನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ, ಇದು ನಿಮ್ಮ ಸಂಬಂಧವನ್ನು ಹದಗೆಡಿಸಬಹುದು. ಹಾಗಾಗಿ ಯಾರಿಗೂ ಸಹ ಕರವಸ್ತ್ರವನ್ನು ಗಿಫ್ಟ್ ಆಗಿ ನೀಡಬೇಡಿ. 


ಇದನ್ನೂ ಓದಿ- 30 ವರ್ಷಗಳ ನಂತರ ಶನಿ-ಶುಕ್ರ ಸಂಯೋಗ! ಶರ ವೇಗದಲ್ಲಿ ಹೆಚ್ಚುವುದು ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ! 


ಸಾಲ ಮಾಡಿ ಗಿಫ್ಟ್: 
ನೀವು ನಿಮ್ಮ ಖುಷಿಯಿಂದ ನಿಮಗೆ ಅನುಕೂಲವಿದ್ದಾಗ ಉಡುಗೊರೆ ನಿಡುವುದರಲ್ಲಿ ಖಂಡಿತ ತಪ್ಪಿಲ್ಲ. ಆದರೆ ಉಡುಗೊರೆ ನೀಡುವ ಸಲುವಾಗಿ ಸಾಲ ಮಾಡುವುದು ಅರ್ಥಾತ್ ಸಾಲ ಮಾಡಿ ಗಿಫ್ಟ್ ನೀಡಬಾರದು ಎಂದು ಹೇಳಲಾಗುತ್ತದೆ. 


ಉಪಯೋಗಿಸಿರುವ ವಸ್ತುಗಳು: 
ನೀವು ಉಪಯೋಗಿಸುವ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು. ಎಂದರೆ ನೀವು ಧರಿಸಿರುವ ಬಟ್ಟೆ, ಆಭರಣಗಳನ್ನು ಬೇರೆಯವರಿಗೆ ಉಡುಗೊರೆಯಾಗಿ ನೀಡುವುದರಿಂದ ನಿಮ್ಮ ಪಾಸಿಟಿವ್ ವೈಬ್ಸ್ ಅನ್ನು ಬೇರೆಯವರಿಗೆ ನೀಡಿದಂತೆ ಎನ್ನಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.