Astro Tips: ಹಿಟ್ಟು ಕಲಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟರೆ ಆ ಮನೆಯಲ್ಲಿ ಎಂದಿಗೂ ಕಾಡಲ್ಲ ಹಣದ ಕೊರತೆ
Astro Tips: ಮನೆಯ ಗೃಹಿಣಿಯನ್ನು ಆ ಮನೆಯ ಮಹಾಲಕ್ಷ್ಮೀ ಎಂದು ಬಣ್ಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮಹಿಳೆಯರು ಅಡುಗೆ ಮಾಡುವಾಗ ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವುದರಿಂದ ಆ ಮನೆಯಲ್ಲಿ ಎಂದಿಗೂ ಸಹ ಆರ್ಥಿಕ ಬಿಕ್ಕಟ್ಟು ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ.
Astro Tips For Money: ನಾವು ಯಾವುದೇ ಕೆಲಸವನ್ನು ಮಾಡಬೇಕಾದರೂ ಅದರದ್ದೇ ಆದ ನಿಯಮಗಳಿವೆ. ಅದು ಹೊರಗಿನ ವ್ಯವಹಾರವೇ ಆಗಿರಲಿ, ಇಲ್ಲ ಮನೆಯ ಕೆಲಸಗಳೇ ಆಗಿರಲಿ ನಿಷ್ಠೆಯಿಂದ ನಿಯಮಾನುಸಾರ ಕೆಲಸಗಳನ್ನು ಮಾಡುವುದರಿಂದ ಜೀವನದಲ್ಲಿ ಪ್ರಗತಿಯನ್ನು ಕಾಣಬಹುದು ಎಂದು ಹೇಳಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಅಡುಗೆ ಮಾಡುವಾಗ ಮಹಿಳೆಯರು ಕೆಲವು ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸುವುದರಿಂದ ಅಂತಹ ಮನೆಯಲ್ಲಿ ಎಂದಿಗೂ ಕೂಡ ಆರ್ಥಿಕ ಬಿಕ್ಕಟ್ಟುಗಳು ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಹೌದು, ಮನೆಯಲ್ಲಿ ಅಡುಗೆ ಮನೆಗೆ ವಿಶೇಷವಾದ ಮಹತ್ವವಿದೆ. ಅಡುಗೆ ಮನೆಯು ಮನೆಯ ಪ್ರತಿ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿವಹಿಸಬಹುದಾದ ಸ್ಥಳ. ಮಾತ್ರವಲ್ಲ, ಪ್ರತಿ ಮನೆಯ ಅಡುಗೆ ಮನೆಯು ತಾಯಿ ಮಹಾಲಕ್ಷ್ಮಿ ಹಾಗೂ ಅನ್ನಪೂರ್ಣೆಯ ವಾಸ ಸ್ಥಾನ ಎಂತಲೂ ನಂಬಲಾಗಿದೆ. ಹಾಗಾಗಿ, ಅಡುಗೆ ಮನೆಯಲ್ಲಿ ತಾಯಿ ಲಕ್ಷ್ಮಿಗೆ ಕೋಪ ಬರುವಂತಹ ಕೆಲವು ಕೆಲಸಗಳನ್ನು ಮಾಡದೇ ಇರುವಂತೆಯೂ ಧರ್ಮ ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಆಹಾರ ತಯಾರಿಸುವಾಗ, ಹಿಟ್ಟು ಕಲಿಸುವಾಗ ಕೆಲವು ತಂತ್ರಗಳನ್ನು ಅನುಸರಿಸುವುದರಿಂದ ಅಂತಹ ಮನೆಯಲ್ಲಿ ಎಂದಿಗೂ ಕೂಡ ಹಣಕಾಸಿನ ತೊಂದರೆಗಳು ಎದುರಾಗುವುದಿಲ್ಲ ಎಂದು ನಂಬಲಾಗಿದೆ.
ಅಡುಗೆ ಮಾಡುವಾಗ ಗೃಹಿಣಿಯರು ಈ ವಿಷಯಗಳನ್ನು ನೆನಪಿನಲ್ಲಿಡಿ:
ಮನೆಯಲ್ಲಿ ತಾಯಿ ಮಹಾಲಕ್ಷ್ಮೀ ಹಾಗೂ ತಾಯಿ ಅನ್ನಪೂರ್ಣೆಯ ಆಶೀರ್ವಾದ ಸದಾ ಇರಬೇಕು ಎಂದಾದರೆ ಅದಕ್ಕಾಗಿ ಮಹಿಳೆಯರು ಈ ಕೆಳಗಿನ ಅಂಶಗಳನ್ನು ನೆನಪಿನಲ್ಲಿಡಿ.
* ಕೋಪಗೊಂಡು ಆಹಾರ ತಯಾರಿಸಬೇಡಿ:
ಜ್ಯೋತಿಷ್ಯ ಶಾಸ್ತ್ರದಲ್ಲಿ ಆಹಾರ ತಯಾರಿಸುವಾಗ ಎಂದಿಗೂ ಕೂಡ ಮುನಿಸಿಕೊಂಡು, ಕೋಪದಿಂದ ಆಹಾರ ತಯಾರಿಸಬಾರದು. ಇದರಿಂದಾಗಿ ನೀವು ಬೇಯಿಸಿದ ಆಹಾರದಲ್ಲಿ ನಕಾರಾತ್ಮಕತೆ ತುಂಬಿ, ಆ ಆಹಾರವನ್ನು ಸೇವಿಸುವವರ ಆರೋಗ್ಯದ ಮೇಲೆ ಇದು ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Surya Gochar 2023: ವರ್ಷದ ಬಳಿಕ ಈ 5 ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದ್ದಾನೆ ಸೂರ್ಯ
* ಶುಚಿತ್ವಕ್ಕೆ ಪ್ರಾಮುಖ್ಯತೆ ನೀಡಿ:
ಆಹಾರ ತಯಾರಿಸುವಾಗ ಆಹಾರ ತಯಾರಿಸುವ ಜಾಗದಲ್ಲಿ, ಅಡುಗೆ ಮನೆಯಲ್ಲಿ ಶುಚಿತ್ವದ ಬಗ್ಗೆ ಹೆಚ್ಚಿನ ಗಮನಹರಿಸಿ. ಸ್ವಚ್ಛತೆ ಇರುವ ಕಡೆ ತಾಯಿ ಮಹಾಲಕ್ಷ್ಮೀ ನೆಲೆಸುತ್ತಾಳೆ. ಇದರಿಂದ ಲಕ್ಷ್ಮಿ ಮತ್ತು ಅನ್ನಪೂರ್ಣ ಮಾತೆಯ ಆಶೀರ್ವಾದ ಸಿಗುತ್ತದೆ. ಇದರಿಂದ ಜೀವನದಲ್ಲಿ ಧನ-ಧಾನ್ಯಗಳಿಗೆ ಎಂದಿಗೂ ಕೂಡ ಕೊರತೆಯೇ ಇರುವುದಿಲ್ಲ.
* ಚಪ್ಪಲಿ, ಬೂಟು ಧರಿಸಿ ಅಡುಗೆ ಮನೆಗೆ ಪ್ರವೇಶಿಸಬೇಡಿ:
ಲಕ್ಷ್ಮಿ ವಾಸಸ್ಥಾನವಾದ ಅಡುಗೆ ಮನೆಯನ್ನು ಪ್ರವೇಶಿಸುವಾಗ ಎಂದಿಗೂ ಕೂಡ ಹೊರಗೆ ಬಳಸುವ ಚಪ್ಪಲಿಯನ್ನಾಗಲಿ,ಇಲ್ಲವೇ ಬೂಟುಗಳನ್ನಾಗಿ ಧರಿಸಬೇಡಿ. ಇದು ಲಕ್ಷ್ಮಿಯ ಕೋಪಕ್ಕೆ ಕಾರಣವಾಗಬಹುದು. ಮಾತ್ರವಲ್ಲ, ಅಂತಹ ಮನೆಯಲ್ಲಿ ದಾರಿದ್ರ್ಯ ಎಂಬುದು ತಾಂಡವವಾಡುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Surya Grahan: ಸೂರ್ಯ ಗ್ರಹಣದಲ್ಲಿ ಈ ಕೆಲಸಗಳನ್ನು ಮಾಡಿದ್ರೆ ಹೊಳೆಯುತ್ತೇ ಅದೃಷ್ಟ
* ಹಿಟ್ಟನ್ನು ಕಲಿಸುವಾಗ ಈ ವಸ್ತುಗಳನ್ನು ಬೆರೆಸಿ:
ಜ್ಯೋತಿಷ್ಯದ ಪ್ರಕಾರ, ಅಡುಗೆಗಾಗಿ ಹಿಟ್ಟನ್ನು ಕಲಿಸುವಾಗ ಆ ಹಿಟ್ಟಿನ ಜೊತೆಗೆ ಉಪ್ಪು ಮಾತ್ರವಲ್ಲದೆ, ಸ್ವಲ್ಪ ತುಪ್ಪ ಮತ್ತು ಚಿಟಿಕೆ ಸಕ್ಕರೆಯನ್ನು ಬೆರೆಸಿ. ಇದರಿಂದ ತಾಯಿ ಮಹಾಲಕ್ಷ್ಮೀ ಸಂತೃಪ್ತಳಾಗಿ ನಿಮ್ಮ ಮನೆಯಲ್ಲಿ ಸಂಪತ್ತಿನ ಹೊಳೆಯನ್ನೇ ಹರಿಸಲಿದ್ದಾಳೆ ಎಂದು ನಂಬಲಾಗಿದೆ. ಇದಲ್ಲದೆ, ಸಕ್ಕರೆ ಮತ್ತು ತುಪ್ಪ ಶುಕ್ರ ಗ್ರಹಕ್ಕೆ ಸಂಬಂಧಿಸಿದ್ದು ಆಹಾರ ತಯಾರಿಸುವ ವೇಳೆ ಇವುಗಳನ್ನು ಬೆರೆಸುವುದರಿಂದ ಶುಕ್ರ ಗ್ರಹ ಬಲಗೊಳ್ಳುತ್ತದೆ. ಮಾತ್ರವಲ್ಲ, ಅಂತಹ ಮನೆಯಲ್ಲಿ ಸುಖ-ಸಂಪತ್ತಿಗೆ ಎಂದಿಗೂ ಕೂಡ ಕೊರತೆಯೇ ಇರುವುದಿಲ್ಲ ಎಂದು ನಂಬಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.