Significance of Monday: ಹಿಂದೂ ಧರ್ಮದಲ್ಲಿ ವಾರದ ಪ್ರತಿಯೊಂದು ದಿನವೂ ಒಂದೊಂದು ವಿಭಿನ್ನ ದೇವರನ್ನು ಪೂಜಿಸಲಾಗುತ್ತದೆ. ಅದೇ ರೀತಿ ಸೋಮವಾರವನ್ನು ಶಿವನ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಯಾವ ಕೆಲಸ ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂಬುದರ ಬಗ್ಗೆ ತಿಳಿಯುವುದು ಬಹುಮುಖ್ಯ. 


COMMERCIAL BREAK
SCROLL TO CONTINUE READING

ಸೋಮವಾರ ಯಾವ ಕೆಲಸ ಮಾಡಬಾರದು? 


ಸೋಮವಾರ ಶಿವನ ದಿನ.. ಚಂದ್ರ ಗ್ರಹ ಅಧಿದೇವತೆಯಾಗಿರುವ ದಿನವೂ ಹೌದು. ಈ ದಿನ ಚಂದ್ರ ದೋಷ ಇರುವವರು ಸಕ್ಕರೆ ಅಥವಾ ಸಕ್ಕರೆ ಅಂಶದ ಪದಾರ್ಥಗಳನ್ನು ಸೇವಿಸಬಾರದು. ಈ ದಿನ ನಿಮ್ಮ ತಾಯಿ ಅಥವಾ ಮನೆಯ ಹಿರಿಯರೊಂದಿಗೆ ವಾಗ್ವಾದಕ್ಕೆ ಇಳಿಯಬೇಡಿ. ಈ ದಿನ ತಾಮಸಿಕ ಆಹಾರದಿಂದ ದೂರವಿರುವುದು ಆದಷ್ಟು ಉತ್ತಮ.


ಇದನ್ನೂ ಓದಿShraddha: ಶ್ರಾದ್ಧ ಕಾರ್ಯ ಮಾಡುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!


ಅದೇ ರೀತಿ ಸೋಮವಾರದಂದು ಅನಿವಾರ್ಯದ ಹೊರತಾಗಿ ತಲೆ ಸ್ನಾನ ಮಾಡುವುದು ಒಳ್ಳೆಯದಲ್ಲ. ಮಹಿಳೆಯರನ್ನು ಅವಮಾನಿಸುವುದು ನಿಮಗೆ ಕೆಡುಕುಂಟು ಮಾಡಬಹುದು. ಈ ದಿನ ಶನಿಗೆ ಸಂಬಂಧಿಸಿದಂತೆ ಕಪ್ಪು ಬಟ್ಟೆ ಧರಿಸುವುದು, ಎಳ್ಳು ಸೇವನೆ ಮಾಡುವುದು ನಿಷಿದ್ಧವಾಗಿದೆ. ಈ ದಿನ ಪೂರ್ವ, ಉತ್ತರ ಮತ್ತು ಆಗ್ನೇಯ ದಿಕ್ಕಿಗೆ ಯಾವುದೇ ಕಾರಣಕ್ಕೂ ಪ್ರಯಾಣಿಸಬಾರದು.


ಸೋಮವಾರ ಯಾವ ಕೆಲಸ ಮಾಡಬಾರದು?


ಸೋಮವಾರ ಬಿಳಿ ಬಣ್ಣದ ಬಟ್ಟೆ ಧರಿಸುವುದು, ದನಗಳಿಗೆ ಆಹಾರ ನೀಡುವುದು ಶ್ರೇಷ್ಠವಾಗಿದೆ. ಈ ದಿನ ಶಿವನ ದಿನವಾಗಿರುವುದರಿಂದ ಶಿವಲಿಂಗಕ್ಕೆ ಬಿಲ್ವ ಪತ್ರೆಯನ್ನು ಅರ್ಪಿಸಿ ಶಿವಲಿಂಗಕ್ಕೆ ಪೂಜೆ ಮಾಡಬೇಕು. ಈ ದಿನ ಚಂದ್ರ ದೋಷ ನಿವಾರಣೆಯ ಪೂಜೆಗಳನ್ನು ಮಾಡಬಹುದಾಗಿದೆ.


ಇದನ್ನೂ ಓದಿ: Goddess Lakshmi: ಲಕ್ಷ್ಮೀದೇವಿ ನೆಲೆಸಬೇಕೆಂದರೆ ಮನೆ ಮುಂದೆ ಈ ಗಿಡಗಳನ್ನು ನೆಡಬೇಕು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ