ದಿನಭವಿಷ್ಯ :  ಬುಧವಾರದಂದು  ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ದಿನ ಭವಿಷ್ಯ ಹೇಗಿದೆ ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಮೇಷ ರಾಶಿ:  
ನಿಮ್ಮ ಗುರಿಯ ಮೇಲೆ ಗಮನ ಕೇಂದ್ರೀಕರಿಸಲು ಇದು ಅತ್ಯುತ್ತಮವಾದ ದಿನ. ನೀವು ಇಂದು ಏಕಾಗ್ರತೆಯಿಂದ ಮಾಡುವ ಕೆಲಸದಲ್ಲಿ ಹೆಚ್ಚಿನ ಪ್ರಯೋಜನವನ್ನು ಪಡೆಯುವಿರಿ. ಮಾತ್ರವಲ್ಲ, ಸಂಜೆಯು ನಿಮ್ಮ ಪ್ರೀತಿ ಪಾತ್ರರೊಂದಿಗೆ ಆಹ್ಲಾದಕರವಾಗಿರುತ್ತದೆ. 


ವೃಷಭ ರಾಶಿ:  
ವೃಷಭ ರಾಶಿಯವರೇ ನೀವು ಇಂದು ಕಮ್ಫರ್ಟ್ ಜೋನ್ ನಿಂದ ಹೊರಬಂದು ಜನರೊಂದಿಗೆ ಬೆರೆಯಿರಿ. ಇದರಿಂದ ವಾಸ್ತವವನ್ನು ಅರ್ಥ ಮಾಡಿಕೊಳ್ಳಲು ನಿಮಗೆ ಅನುಕೂಲವಾಗಲಿದೆ. ಇದಲ್ಲದೆ, ಯಾವುದೇ ಕೆಲಸದಲ್ಲಿ ಪರಿಶ್ರಮದ ಅಗತ್ಯವೂ ಇರಲಿದೆ. ನಿಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಇಂದು ಉತ್ತಮ ದಿನ.  


ಮಿಥುನ ರಾಶಿ:   
ಯಾವುದೇ ಕೆಲಸ ಕಾರ್ಯಗಳಲ್ಲಿ ಎಷ್ಟೇ ಅಡೆತಡೆಗಳು ಬಂದರೂ ಜಯ ನಿಮಗೆ ಶತಸಿದ್ಧ. ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಇಂದು ನಿಮ್ಮ ವೃತ್ತಿ ರಂಗದಲ್ಲಿ ಬರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. 


ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯವರು ಇಂದು ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಮೊದಲ ಹೆಜ್ಜೆ ಇಡಲು ಪ್ರಯತ್ನಿಸಿ. ನಿಷ್ಠೆಯಿಂದ ಮಾಡುವ ಕೆಲಸಕ್ಕೆ ಒಂದಲ್ಲಾ ಒಂದು ದಿನ ಉತ್ತಮ ಪ್ರತಿಫಲ ದೊರೆಯುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಉದ್ಯೋಗ ಬದಲಾಯಿಸುವ ಚಿಂತನೆಯನ್ನು ಕೆಲ ದಿಂಗಳು ಮುಂದೂಡಿ.  


ಇದನ್ನೂ ಓದಿ- Mangal Gochar: ಇನ್ನೊಂದು ತಿಂಗಳು ಈ ರಾಶಿಯವರಿಗೆ ಭಾರೀ ಅದೃಷ್ಟ, ಕೈ ತುಂಬಾ ಹಣ


ಸಿಂಹ ರಾಶಿ:   
ಸಿಂಹ ರಾಶಿಯವರೇ ಯಾವುದೇ ಕೆಲಸವನ್ನು ನಮ್ಮಿಂದ ಆಗುವುದಿಲ್ಲ ಎಂಬ ಮನಸ್ಥಿತಿಯಿಂದ ಹೊರಬನ್ನಿ. ಆತ್ಮವಿಶ್ವಾಸದಿಂದ ಮುಂದುವರೆಯಿರಿ. ಅಸಾಧ್ಯವಾದುದು ಯಾವುದೂ ಇಲ್ಲ. ನಿಮ್ಮ ಪ್ರೀತಿಪಾತ್ರರ ಬಗೆಗಿನ ನಿಮ್ಮ ಮನಸ್ಸಿನ ಭಾವನೆಯನ್ನು ಮುಕ್ತವಾಗಿ ಹಂಚಿಕೊಳ್ಳಿ.  


ಕನ್ಯಾ ರಾಶಿ: 
ಕನ್ಯಾ ರಾಶಿಯವರು ಇಂದು ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿಯಾಗುವಿರಿ. ಇದು ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ. ಆದರೆ, ಹಣಕಾಸಿನ ವಿಷಯದಲ್ಲಿ ಅನಾವಶ್ಯಕ ಖರ್ಚುಗಳನ್ನು ತಪ್ಪಿಸಿ. ಇದರಿಂದ ಭವಿಷ್ಯದ ಆರ್ಥಿಕ ಬಿಕ್ಕಟ್ಟನ್ನು ತಪ್ಪಿಸಬಹುದು.  


ತುಲಾ ರಾಶಿ:  
ತುಲಾ ರಾಶಿಯವರೇ ಇಂದು ನೀವು ಬಾಹ್ಯ ಅಲಂಕಾರ, ಮೋಜು ಮಸ್ತಿಗಾಗಿ ನಿಮ್ಮ ಹಣವನ್ನು ವ್ಯಯಿಸುವುದನ್ನು ತಪ್ಪಿಸಿ. ಜೊತೆಗೆ ಇಂತಹ ವಿಚಾರಗಳಿಗೆ ನಿಮ್ಮನ್ನು ಪ್ರೇರೇಪಿಸುವ ಜನರ ಬಗ್ಗೆ ಜಾಗರೂಕರಾಗಿರಿ. ವಾಸ್ತವದಲ್ಲಿ ಬದುಕುವುದನ್ನು ರೂಢಿಸಿಕೊಳ್ಳಿ.  


ವೃಶ್ಚಿಕ ರಾಶಿ:   
ವೃಶ್ಚಿಕ ರಾಶಿಯವರಿಗೆ ನಿಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ನಿಮ್ಮ ಮನಸ್ಸು ಇಂದು ನಿಮ್ಮನ್ನು ಪ್ರೇರೇಪಿಸಬಹುದು. ನಿಮ್ಮ ಚಾಣಾಕ್ಷ ಬುದ್ದಿಯಿಂದ ಆರ್ಥಿಕ ಪ್ರಯೋಜನವನ್ನೂ ಪಡೆಯಬಹುದು. ಹಿತ ಶತ್ರುಗಳ ಬಗ್ಗೆ ಜಾಗರೂಕರಾಗಿರಿ. 


ಇದನ್ನೂ ಓದಿ- ಇವು ಆಂಜನೇಯನ ಪ್ರಿಯ ರಾಶಿಗಳು: ಸಂಪತ್ತು-ಅದೃಷ್ಟದ ಜೊತೆ ಸರ್ಕಾರಿ ನೌಕರಿ ಭಾಗ್ಯ ನೀಡುವನು… ಯಾವತ್ತೂ ಕೈಬಿಡಲ್ಲ ಖಚಿತ


ಧನು ರಾಶಿ:  
ಧನು ರಾಶಿಯವರು ಇಂದು ಹೆಚ್ಚು ನಿಗೂಢ ವ್ಯಕ್ತಿಯಿಂದ ಆಕರ್ಷಿತರಾಗಬಹುದು. ಆದರೆ, ಅಪರಿಚಿತರ ಬಗ್ಗೆ ಜಾಗರೂಕರಾಗಿರಿ. ಜೂಜಾಟ ಅಭ್ಯಾಸವಿದ್ದರೆ, ಇಂದೇ ನಿಮ್ಮ ಈ ಅಭ್ಯಾಸವನ್ನು ಬಿಡುವುದು ಒಳಿತು. ಕೆಲಸದಲ್ಲಿ ತಾಳ್ಮೆಯನ್ನು ರೂಢಿಸಿಕೊಳ್ಳಿ.


ಮಕರ ರಾಶಿ:  
ಮಕರ ರಾಶಿಯವರು ಇಂದು ನಿಮ್ಮ ಸ್ವಂತ ಅಗತ್ಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಿ. ನಿಮ್ಮ ಸಂಗಾತಿಯೊಂದಿಗೆ ಮನಸ್ಸಿನ ಮಾತನ್ನು ಹಂಚಿಕೊಳ್ಳಲು ಭಯವನ್ನು ಮಧ್ಯೆ ಬರಲು ಬಿಡಬೇಡಿ. ಭವಿಷ್ಯದ ದೃಷ್ಟಿಯಿಂದ ನಿಮ್ಮ ಖರ್ಚಿಗೆ ಕಡಿವಾಣ ಹಾಕುವುದು ಒಳ್ಳೆಯದು. 


ಕುಂಭ ರಾಶಿ:  
ಕುಂಭ ರಾಶಿಯವರಿಗೆ ವೈಯಕ್ತಿಕ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. ಉದ್ಯೋಗ ರಂಗದಲ್ಲಿ ಸಿಗುವ ಒಳ್ಳೆಯ ಅವಕಾಶಗಳನ್ನು ಬಳಸಿಕೊಳ್ಳಿ. ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ.  


ಮೀನ ರಾಶಿ:  
ಮೀನ ರಾಶಿಯವರಿಗೆ ಇಂದು ನಿಮ್ಮ ಶಕ್ತಿಯನ್ನು ಬೇರೆಯವರಿಗೆ ಮನವರಿಕೆ ಮಾಡಿಸಲು ಸುದಿನ ಎಂತಲೇ ಹೇಳಬಹುದು. ಯಾವುದೇ ವಿಚಾರದ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಎಚ್ಚರಿಕೆಯಿಂದ ನೂರು ಬಾರಿ ಯೋಚಿಸಿ ನಿರ್ಧರಿಸಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.