Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ ಗ್ರೀಷ್ಮ ಋತು, ಆಷಾಢ ಮಾಸ ಶುಕ್ಲ ಪಕ್ಷ, ತೃತೀಯ ತಿಥಿಯ ಈ ದಿನ ಮಂಗಳವಾರ ಆಶ್ಲೇಷಾ ನಕ್ಷತ್ರ, ಸಿದ್ಧಿ ಯೋಗ ಇರಲಿದೆ. ಇಂದು ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ನಿಮ್ಮ ಪ್ರಿಯವಾದ ವಸ್ತುಗಳು ಕಳುವಾಗುವ ಸಂಭವವಿರುವುದರಿಂದ ಜಾಗರೂಕರಾಗಿರಿ. ಕುಟುಂಬದ ಸದಸ್ಯರ ಮಾತನ್ನು ಗೌರವಿಸಿ ನಡೆದರೆ ಯಶಸ್ಸು ಖಂಡಿತ ಸಿಗಲಿದೆ. ಉದ್ಯೋಗದಲ್ಲಿ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ನಿಮಗೆ ಅದೃಷ್ಟದ ದಿನ. ಭೂಮಿ, ವಾಹನ, ಮನೆ ಖರೀದಿಸಲು ಯೋಚಿಸುತ್ತಿದ್ದರೆ ಈ ನಿಟ್ಟಿನಲ್ಲಿ  ಮನೆಯ ಹಿರಿಯರ ಸಲಹೆ ಮೇರೆಗೆ ಕಾರ್ಯನಿರ್ವಹಿಸಿ. ದಿಢೀರ್ ಧನಲಾಭವು ನಿಮ್ಮ ಮನೋಲ್ಲಾಸವನ್ನು ಹೆಚ್ಚಿಸಲಿದೆ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಇಂದು ಧನಾತ್ಮಕ ಫಲಗಳನ್ನು ನಿರೀಕ್ಷಿಸಬಹುದು. ಅರೆಕಾಲಿನ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಉತ್ತಮ ದಿನ. ವ್ಯಾಪಾರ ವರ್ಗದವರು ಹೊಸತರಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ. ಪ್ರೀತಿ ಜೀವನದಲ್ಲಿ ಕುಳಿತು ಮಾತನಾಡುವುದರಿಂದ ಭಿನ್ನಾಭಿಪ್ರಾಯ ಕೊನೆಗೊಳ್ಳಲಿದೆ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಮಿಶ್ರ ಫಲಗಳಿಂದ ಕೂಡಿದ ದಿನ ಇದಾಗಿದೆ. ಕುಟುಂಬ ಜೀವನದಲ್ಲಿ ಸಮನ್ವಯ ಕಾಪಾಡಿಕೊಳ್ಳಲು ಕಾರ್ಯೋನ್ಮುಖರಾಗುವುದು ಒಳಿತು. ಕೆಲಸಕ್ಕೆ ಸಂಬಂಧಿಸಿದಂತೆ ಸಣ್ಣ ಪ್ರವಾಸವನ್ನು ಕೈಗೊಳ್ಳಬೇಕಾಗಬಹುದು. ಇದು ಲಾಭದಾಯಕವಾಗಿರಲಿದೆ. 


ಇದನ್ನೂ ಓದಿ- Shukra Gochar: ತಿಂಗಳಾಂತ್ಯದವರೆಗೆ ಈ ರಾಶಿಯವರಿಗೆ ರಾಜ ವೈಭೋಗ, ಸಂಪತ್ತಿಗಿಲ್ಲ ಕೊರತೆ


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಈ ದಿನ ನಿಮಗೆ ಅಷ್ಟು ಉತ್ತಮವಾಗಿಲ್ಲ. ಹಾಗಾಗಿ, ಯಾವುದೇ ರೀತಿಯ ಭಾವನಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ. ಇಲ್ಲವೇ ಬೇರೆಯವರು ನಿಮ್ಮ ಈ ಅಭ್ಯಾಸವನ್ನು ದುರುಪಯೋಗಪಡಿಸಿಕೊಳ್ಳಬಹುದು. ಆಸ್ತಿಯಲ್ಲಿ ಹೂಡಿಕೆ ಮಾಡಲು ಉತ್ತಮ ದಿನ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ಸವಾಲುಗಳಿಂದ ತುಂಬಿದ ದಿನ. ನಿಮ್ಮ ಕೆಲಸದಲ್ಲಿ ಹೊಸ ಪ್ರಾಜೆಕ್ಟ್ ಪಡೆದಿದ್ದರೆ ಇದಕ್ಕಾಗಿ ಹೆಚ್ಚಿನ ಸಮಯ ವಿನಿಯೋಗಿಸಬೇಕಾಗುತ್ತದೆ. ವಿದ್ಯಾರ್ಥಿಗಳು ನಿಮ್ಮ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನಹರಿಸಿ. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಶಕ್ತಿಯುತವಾದ ದಿನ. ವಾಪರ ವರ್ಗದವರು ಹೊಸ ಯೋಜನೆಯಲ್ಲಿ ಕೆಲಸ ಮಾಡಲು ಶುಭ ಸಮಯ. ನಿಮ್ಮ ಹಣಕಾಸಿನ ಸ್ಥಿತಿಯ ಬಗ್ಗೆ ಚಿಂತಿಸುವುದನ್ನು ತಪ್ಪಿಸಿ. ದಿನಗಳೆದಂತೆ ಎಲ್ಲವೂ ಸರಿಹೋಗಲಿದೆ. ಕುಟುಂಬದಲ್ಲಿ ಮಂಗಳಕರ ಘಟನೆಗಳು ನಡೆಯುವ ಸಂಭವವಿದೆ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ವಿಶೇಷವಾದ ದಿನವನ್ನು ಅನುಭವಿಸುವಿರಿ. ವೃತ್ತಿ ಸಂಬಂಧಿತ ನಿರ್ಧಾರಗಳನ್ನು ಕೈಗೊಳ್ಳಲು ಸೂಕ್ತ ಸಮಯ. ಹೊಸ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಮ್ಮ ಬಹುದಿನಗಳ ಕನಸು ನನಸಾಗಲಿದೆ. ಆದರೆ, ಬೇರೆಯವರನ್ನು ಕುರುಡಾಗಿ ನಂಬುವುದನ್ನು ತಪ್ಪಿಸಿ. 


ಇದನ್ನೂ ಓದಿ- Shani Vakri: ಮುಂದಿನ 137 ದಿನಗಳವರೆಗೆ ಈ ರಾಶಿಯವರಿಗೆ ಶನಿ ಕೃಪೆ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್


ಧನು ರಾಶಿಯವರ ಭವಿಷ್ಯ (Sagittarius Horoscope):  
ಇಂದು ನಿಮಗೆ ಅಷ್ಟು ಶುಭಕರವಾಗಿಲ್ಲ. ಹಾಗಾಗಿ, ಯಾವುದೇ ವಿಚಾರದಲ್ಲಿ ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಷ್ಟು ಸೂಕ್ತವಲ್ಲ. ಕುಟುಂಬದಲ್ಲಿನ ದೀರ್ಘಕಾಲದ ಭಿನ್ನಾಭಿಪ್ರಾಯಗಳನ್ನು ತಪ್ಪಿಸಲು ಸೌಮ್ಯ ಮಾತುಕತೆಗೆ ಪ್ರಯತ್ನಿಸಿ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ನಿಮಗೆ ಅದೃಷ್ಟದ ದಿನ. ಹೊಸ ವಾಹನ, ಭೂಮಿ ಖರೀದಿಸಲು ಬಯಸುವವರು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬಹುದು. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಸಮಯವನ್ನು ಕಳೆಯುವಿರಿ. ಕ್ರೀಡಾ ಕ್ಷೇತ್ರದಲ್ಲಿರುವವರು ಇಂದು ಶುಭ ಸುದ್ದಿಯನ್ನು ಕೇಳಬಹುದು. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಈ ದಿನ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ಹೂಡಿಕೆಯಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ವ್ಯಾಪಾರ-ವ್ಯವಹಾರದಲ್ಲಿ ಯಶಸ್ಸು ನಿಮ್ಮ ಪಾಲಿಗಿದೆ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನ. ನಿಮ್ಮ ಶತ್ರುವರ್ಗದವರು ತಾವಾಗಿಯೇ ಬಂದು ನಿಮಗೆ ನಮಸ್ಕರಿಸುವುದನ್ನು ನೀವು ಕಾಣಬಹುದು. ಬಿಸಿನೆಸ್ ಸಂಬಂಧಿತ ಪ್ರಯಾಣವು ಲಾಭದಾಯಕವಾಗಿರುತ್ತದೆ. ಅನಗತ್ಯ ವಸ್ತುಗಳಿಗಾಗಿ ಖರ್ಚು ಮಾಡುವುದನ್ನು ತಪ್ಪಿಸಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.