Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಬುಧವಾರದ ಈ ದಿನ ರೋಹಿಣಿ ನಕ್ಷತ್ರ ಇರಲಿದ್ದು ಧ್ರುವ ಯೋಗವು ಯಾವ ರಾಶಿಯವರಿಗೆ ಹೇಗಿದೆ ಎಂದು ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಈ ದಿನ ವಿವಾದಗಳನ್ನು ತಪ್ಪಿಸಲು ನಿಮ್ಮ ಕೋಪಕ್ಕೆ ಕಡಿವಾಣ ಹಾಕಿ. ಹಿಂದೆ ಪಡೆದ ಸಾಲ ಮರುಪಾವತಿಸಬೇಕಾಗಬಹುದು. ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಶುಭ ದಿನ. ಮನೆ ಅಥವಾ ವಾಹನದ ರಿಪೇರಿಗಾಗಿ ಹಣ ಖರ್ಚಾಗಬಹುದು. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ನಿಮ್ಮ ವೃತ್ತಿ ಮತ್ತು ವೈವಾಹಿಕ ಜೀವನದಲ್ಲಿ ಸ್ವಲ್ಪ ಏರುಪೇರುಗಳನ್ನು ಎದುರಿಸಬೇಕಾಗಬಹುದು. ವ್ಯಾಪಾರಕ್ಕಾಗಿ ಹೆಚ್ಚಿನ ಹಣ ವಿನಿಯೋಗಿಸಬಹುದು. ಪ್ರವಾಸೋದ್ಯಮ, ತಾಂತ್ರಿಕ ಕ್ಷೇತದಲ್ಲಿ ಕೆಲಸ ಮಾಡುವವರಿಗೆ ಪ್ರಯೋಜನಕಾರಿಯಾದ ದಿನ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಇಂದು ಒತ್ತಡ, ವಿವಾದ, ಹೋರಾಟದಿಂದ ನೀವು ಯಶಸ್ಸನ್ನು ಗಳಿಸುವಿರಿ. ಪ್ರಯಾಣಕ್ಕಾಗಿ ಹೆಚ್ಚು ಖರ್ಚು ಮಾಡಬಹುದು. ಭದ್ರತಾ ಕ್ಷೇತ್ರ, ವಕೀಲರು ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು. ಸ್ನೇಹಿತರೊಂದಿಗಿನ ವಿವಾದ  ಮೂಡಬಹುದು. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ವೈಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿ ಯಶಸ್ಸನ್ನು ಕಾಣುವಿರಿ. ಮಕ್ಕಳೊಂದಿಗೆ ಮನರಂಜನೆಗಾಗಿ ಹೆಚ್ಚಿನ ಹಣ ವಿನಿಯೋಗಿಸಬಹುದು. ಬೆನ್ನು ಮತ್ತು ಮೊಣಕಾಲು ನೋವಿನಿಂದ ಬಳಲುತ್ತಿರುವವರು ಇಂದು ಎಚ್ಚರಿಕೆಯಿಂದ ಇರಿ. 


ಇದನ್ನೂ ಓದಿ- 12 ವರ್ಷಗಳ ಬಳಿಕ ರೋಹಿಣಿ ನಕ್ಷತ್ರದಲ್ಲಿ ಬೃಹಸ್ಪತಿ ಸಂಚಾರ, ಈ ರಾಶಿಯವರಿಗೆ ಸೋಲೆಂಬುದೇ ಇಲ್ಲ!


ಸಿಂಹ ರಾಶಿಯವರ ಭವಿಷ್ಯ (Leo Horoscope):  
ವ್ಯವಹಾರ ಸಂಬಂಧಿತ ಪ್ರಯಾಣವು ಲಾಭದಾಯಕವಾಗಿದೆ. ಭೂಮಿ, ಆಸ್ತಿ ಖರೀದಿಸಬಹುದು. ಕೌಟುಂಬಿಕ ಜೀವನದಲ್ಲಿ ವಿವಾದಗಳನ್ನು ತಪ್ಪಿಸಲು ನಿಮ್ಮ ಕಠಿಣವಾದ ಮಾತುಗಳಿಗೆ ಕಡಿವಾಣ ಹಾಕಿ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ಏನನ್ನಾದರೂ ಕಳೆದುಕೊಂಡರೂ ಮತ್ತೇನನ್ನಾದರೂ ಗಳಿಸುವ ದಿನ. ಹಣಕಾಸು ನಿರ್ವಹಣೆ ಕೊಂಚ ಕಠಿಣವೆನಿಸಬಹುದು. ಪ್ರವಾಸೋದ್ಯಮದಲ್ಲಿರುವ ಜನರು ಪ್ರಯೋಜನ ಪಡೆಯುತ್ತಾರೆ. ಕೌಟುಂಬಿಕ ವಿವಾದಗಳು ಮನಸ್ಸನ್ನು ಕದಡಿಸಬಹುದು. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಈ ರಾಶಿಯ ಜನರು ಇಂದು ಕೋಪವನ್ನು ನಿಯಂತ್ರಿಸುವುದರಿಂದ ಪರಿಸ್ಥಿತಿಯನ್ನು ನಿಭಾಯಿಸಬಹುದು. ಈವೆಂಟ್‌ಗಳನ್ನು ಆಯೋಚಿಸುವ ಜನರು ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ. ಸಂಗಾತಿಯೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಿ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ವೃತ್ತಿ ವ್ಯವಹಾರದಲ್ಲಿ ಸಂಯಮವನ್ನು ಕಾದುಕೊಳ್ಳಿ. ದುರಸ್ತಿ ಕಾರ್ಯಗಳಿಗಾಗಿ ಹೆಚ್ಚಿನ ಹಣ ವ್ಯಯಿಸಬೇಕಾಗಬಹುದು. ಹೊಟ್ಟೆನೋವು, ತಲೆನೋವಿನ ಸಮಸ್ಯೆ ಬಾಧಿಸಬಹುದು. 


ಇದನ್ನೂ ಓದಿ- Surya Grahan 2024: ವರ್ಷದ ಎರಡನೇ ಸೂರ್ಯಗ್ರಹಣ..ಅದ್ಭುತ ದೃಶ್ಯಕ್ಕೆ ಸಾಕ್ಷಿಯಾಗಲಿದೆ ಭಾರತ..!


ಧನು ರಾಶಿಯವರ ಭವಿಷ್ಯ (Sagittarius Horoscope):  
ನಿಮ್ಮ ಮಾತಿನಲ್ಲಿ ಮಧುರತೆ ಇಲ್ಲದಿದ್ದರೆ ಸುತ್ತ-ಮುತ್ತಲಿನವರೊಂದಿಗೆ ವಿವಾದ ಏರ್ಪಡಬಹುದು. ಮಾರ್ಷಲ್ ಆರ್ಟ್ಸ್, ವೈದ್ಯಕೀಯ ಕ್ಷೇತ್ರದಲ್ಲಿರುವ ವೃತ್ತಿಪರರಿಗೆ ಶುಭ ದಿನ. ಮಕ್ಕಳೊಂದಿಗೆ ವಿವಾದಗಳುಂಟಾಗಬಹುದು. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಮನೆ, ವಾಹನಕ್ಕಾಗಿ ವೆಚ್ಚಗಳು ಹೆಚ್ಚಾಗಬಹುದು. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಧನಲಾಭ. ಕೌಟುಂಬಿಕ ವಿವಾದಗಳಿಂದ ದೂರ ಉಳಿಯಲು ಕುಟುಂಬದವರೊಂದಿಗೆ ಮಾತಿನಲ್ಲಿ ಮಧುರತೆ ಇರಲಿ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಉದ್ಯೋಗಸ್ಥರಿಗೆ ಕೆಲಸದ ಹೊರೆ ಹೆಚ್ಚಾಗಲಿದ್ದು, ಇದರ ಪರಿಣಾಮ ನಿಮ್ಮ ಗೃಹ ಜೀವನದ ಮೇಲೂ ಕಂಡುಬರಲಿದೆ. ಬಿಸಿನೆಸ್ ಸಂಬಂಧಿತ ಪ್ರಯಾಣಗಳು ಲಾಭದಾಯಕವಾಗಿರಲಿವೆ. ಕೆಲವರು ಕಿವಿ ನೋವಿನಿಂದ ಬಳಲುವ ಸಾಧ್ಯತೆ ಇದೆ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಕುಟುಂಬದೊಂದಿಗೆ ಸುಂದರ ಸ್ಥಳಗಳಿಗೆ ಭೇಟಿ ನೀಡಲು ಯೋಜಿಸಬಹುದು. ಪ್ರಯಾಣಕ್ಕಾಗಿ ಹೆಚ್ಚಿನ ಹಣ ಖರ್ಚಾಗಬಹುದು. ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಲಾಭದಾಯಕ ದಿನ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.