ದಿನಭವಿಷ್ಯ 12-07-2024: ಮೇಷದಿಂದ ಮೀನ ರಾಶಿಯವರಿಗೆ ಶುಕ್ರವಾರದ ದಿನ ಭವಿಷ್ಯ ಹೇಗಿದೆ
Today Horoscope 12th July 2024: ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ಉತ್ತರ ಫಲ್ಗುಣಿ ನಕ್ಷತ್ರ, ಪರಿಘ ಯೋಗ ಯಾವೆಲ್ಲಾ ರಾಶಿಯವರಿಗೆ ಶುಭ, ಯಾರು ಜಾಗರೂಕರಾಗಿರಬೇಕು ತಿಳಿಯಿರಿ
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ನಿಮಗೆ ಮಹತ್ವದ ದಿನ, ಕುಟುಂಬದ ಸದಸ್ಯರು ನಿಮ್ಮ ಮಾತನ್ನು ಗೌರವಿಸುತ್ತಾರೆ. ಉದ್ಯೋಗಸ್ಥರಿಗೆ ಉನ್ನತ ಅಧಿಕಾರಿಗಳ ಆಶೀರ್ವಾದದಿಂದ ಹೊಸ ಹುದ್ದೆ ದೊರೆಯಬಹುದು. ಪುರುಷರು ಇಂದು ನಿಮ್ಮ ಸ್ತ್ರೀ ಸ್ನೇಹ-ಬಳಗದೊಂದಿಗೆ ಎಚ್ಚರಿಕೆಯಿಂದ ಇರಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಇಂದು ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಭೂಮಿ, ಮನೆ, ವಾಹನ ಖರೀದಿಸಲು ಶುಭ ದಿನ. ಆದಾಗ್ಯೂ, ಯಾವುದೇ ಪ್ರಮುಖ ವ್ಯವಹಾರದಲ್ಲಿ ಹಿರಿಯರ ಸಲಹೆ ಪಡೆದು ಮುಂದುವರೆಯಿರಿ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಉದ್ಯೋಗಸ್ಥರಿಗೆ ಇಂದು ಧನಾತ್ಮಕ ಫಲಿತಾಂಶ ದೊರೆಯಲಿದೆ. ವ್ಯಾಪಾರಸ್ಥರು ಹೂಡಿಕೆ ಮಾಡುವುದನ್ನು ತಪ್ಪಿಸಬೇಕಾಗುತ್ತದೆ. ಪ್ರೀತಿ ಜೀವನದಲ್ಲಿ ನಿಮ್ಮ ಸಂಗಾತಿಯೊಂದಿಗೆ ಜಗಳವಾಡುವುದನ್ನು ತಪ್ಪಿಸಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಇಂದು ಮಿಶ್ರ ಫಲಗಳಿಂದ ಕೂಡಿದ ದಿನ. ಕುಟುಂಬದಲ್ಲಿ ಸಮನ್ವಯ ಕಾಪಾಡಿಕೊಳ್ಳುವುದು ಒಳಿತು. ನಿಮ್ಮ ಶತ್ರುಗಳು ಕೂಡ ನಿಮ್ಮ ಮುಂದೆ ಮಂಡಿಯೂರುವರು. ಕೆಲಸಕ್ಕೆ ಸಂಬಂಧಿಸಿದಂತೆ ನೀವು ದೂರ ಪ್ರಯಾಣ ಕೈಗೊಳ್ಳಬೇಕಾಗಬಹುದು.
ಇದನ್ನೂ ಓದಿ- Guru Gochar: ಗುರು ದೆಸೆಯಿಂದ ಕುಬೇರ ರಾಜಯೋಗ 2025ರವರೆಗೆ ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ
ಸಿಂಹ ರಾಶಿಯವರ ಭವಿಷ್ಯ (Leo Horoscope):
ಇಂದು ಸವಾಲುಗಳಿಂದ ತುಂಬಿದ ದಿನ. ನಿಮ್ಮ ಕೆಲಸದಲ್ಲಿ ನೀವು ಹೊಸ ಪ್ರಾಜೆಕ್ಟ್ ಪಡೆಯುವ ಸಾಧ್ಯತೆ ಇದೆ. ವರ್ಕ್ ಫ್ರಮ್ ಹೋಂ ಮಾಡುವವರು ಕೆಲಸದಲ್ಲಿ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು. ನೀವು ಪ್ರವಾಸಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳುವುದನ್ನು ಮರೆಯಬೇಡಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಇಂದು ನಿಮಗೆ ಕಠಿಣ ದಿನ. ಭಾವನಾತ್ಮಕವಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ದೀರ್ಘಕಾಲದವರೆಗೆ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯವಿದ್ದರೆ, ನೀವು ಪರಿಹಾರವನ್ನು ಪಡೆಯುತ್ತೀರಿ.
ತುಲಾ ರಾಶಿಯವರ ಭವಿಷ್ಯ (Libra Horoscope):
ಇಂದು ನಿಮಗೆ ಶಕ್ತಿಯಿಂದ ತುಂಬಿದ ದಿನವಾಗಿದೆ. ವ್ಯಾಪಾರಸ್ಥರು ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸುತ್ತಿದ್ದರೆ ಅನುಕೂಲಕರ ದಿನ. ಕುಟುಂಬದಲ್ಲಿ ಕೆಲವು ಮಂಗಳಕರ ಘಟನೆಗಳು ನಡೆಯಬಹುದು.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಇಂದು ನಿಮಗೆ ವಿಶೇಷವಾದ ದಿನ. ವೃತ್ತಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ಚಿಂತನಶೀಲವಾಗಿ ನಿರ್ಧರಿಸಿ. ಕೆಲಸದ ಸ್ಥಳದಲ್ಲಿ ಜನರೊಂದಿಗೆ ಮಾತನಾಡುವಾಗ ಮಾತಿನಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಿ.
ಇದನ್ನೂ ಓದಿ- ದೀಪಾವಳಿವರೆಗೂ ಈ ರಾಶಿಯವರಿಗೆ ಅದೃಷ್ಟ !ಶನಿ ಮಹಾತ್ಮನ ಕೃಪೆಯಿಂದಲೇ ನನಸಾಗುವುದು ಸ್ವಂತ ಮನೆಯ ಕನಸು !
ಧನು ರಾಶಿಯವರ ಭವಿಷ್ಯ (Sagittarius Horoscope):
ನೀವು ಭಾವನಾತ್ಮಕವಾಗಿ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಿದ್ದರೆ ಈ ಬಗ್ಗೆ ಜಾಗರೂಕರಾಗಿರಿ. ಇಲ್ಲವೇ, ನಿಮ್ಮವರೇ ನಿಮಗೆ ಮೋಸ ಮಾಡಬಹುದು. ಕುಟುಂಬದಲ್ಲಿ ದೀರ್ಘಕಾಲದವರೆಗೆ ಯಾವುದೇ ಭಿನ್ನಾಭಿಪ್ರಾಯಗಳಿದ್ದಲ್ಲಿ ಅದರಿಂದ ಪರಿಹಾರ ಪಡೆಯಬಹುದು.
ಮಕರ ರಾಶಿಯವರ ಭವಿಷ್ಯ (Capricorn Horoscope):
ಅದೃಷ್ಟದ ದೃಷ್ಟಿಯಿಂದ ಇಂದು ಒಳ್ಳೆಯ ದಿನ. ಹೊಸ ಭೂಮಿ, ವಾಹನ ಖರೀದಿಸಲು ಶುಭ ದಿನ. ಕುಟುಂಬ ಸದಸ್ಯರೊಂದಿಗೆ ಸಂತೋಷದ ದಿನವನ್ನು ಆನಂದಿಸುವಿರಿ. ವಿದ್ಯಾರ್ಥಿಗಳು ಇಂದು ಕೆಲವು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಇಂದು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉತ್ತಮ ಅವಕಾಶ ಲಭಿಸಲಿದೆ. ಹೊಸ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಂದು ಶುಭ ದಿನ. ನಿಮ್ಮ ಸಂಗಾತಿಯ ಬೆಂಬಲ ಮತ್ತು ಒಡನಾಟವನ್ನು ಪಡೆಯುವ ಮೂಲಕ ನಿಮ್ಮ ಅನೇಕ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ.
ಮೀನ ರಾಶಿಯವರ ಭವಿಷ್ಯ (Pisces Horoscope):
ಇಂದು ನಿಮಗೆ ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನ. ಕೌಟುಂಬಿಕ ಜೀವನದಲ್ಲಿ ಯಾವುದಾದರೂ ಸಮಸ್ಯೆ ಇದ್ದಲ್ಲಿ ಶಾಂತಿಯಿಂದ ಮಾತನಾಡುವ ಮೂಲಕ ಬಗೆಹರಿಸಿಕೊಳ್ಳಿ. ದಿಢೀರ್ ಧನಲಾಭದಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.