Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ ಪಂಚಮಿ ತಿಥಿಯ ಈ ದಿನ ಗುರುವಾರದ ಈ ದಿನ ವರೀಯಾನ ಯೋಗ ಇರಲಿದ್ದು ಯಾವ ರಾಶಿಯವರಿಗೆ ಅದೃಷ್ಟವನ್ನು ತರಲಿದೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಈ ದಿನ ಕೌಟುಂಬಿಕ ಸಮಸ್ಯೆಗಳು ಉಲ್ಬಣಗೊಳ್ಳಬಹುದು. ಮಹಿಳೆಯರೊಂದಿಗಿನ ವ್ಯವಹಾರದ ಬಗ್ಗೆ ತುಂಬಾ ಜಾಗರೂಕರಾಗಿರಿ. ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯವನ್ನು ತಪ್ಪಿಸಿ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ನಿಮ್ಮ ಪ್ರತಿ ಕೆಲಸದಲ್ಲಿ ಸಂಗಾತಿಯಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಕೌಟುಂಬಿಕ ಬದುಕು ಆನಂದದಾಯಕವಾಗಿರುತ್ತದೆ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಇಂದು ಹಣಕಾಸಿನ ವಿಷಯಗಳಲ್ಲಿ ಯಾವುದೇ ರೀತಿಯ ಅಪಾಯವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಅಧಿಕ ಖರ್ಚುಗಳನ್ನು ತಪ್ಪಿಸುವುದರಿಂದ ಆರ್ಥಿಕ ಸ್ಥಿರತೆಯನ್ನು ಕಾಣಬಹುದು. ತಾಳ್ಮೆಯಿಂದ ಕೆಲಸ ಮಾಡಿ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ನೀವು ಬೌದ್ಧಿಕ ಕೌಶಲ್ಯದಿಂದ ಮಾಡಿದ ಕೆಲಸಗಳು ಪೂರ್ಣಗೊಳ್ಳುತ್ತವೆ. ವೃತ್ತಿ ಪ್ರತಿಷ್ಠೆ ಹೆಚ್ಚಾಗಲಿದೆ.  ಸಂಬಂಧಗಳಲ್ಲಿ ನಿಕಟತೆ ಇರಲಿದ್ದು ಕೀರ್ತಿ ಸಂಪತ್ತು ಹೆಚ್ಚಾಗಲಿದೆ. 


ಇದನ್ನೂ ಓದಿ-  ಈ ನಾಲ್ಕು ರಾಶಿಯವರು ಅಪ್ಪಿತಪ್ಪಿಯೂ ಧರಿಸಬಾರದು ಆಮೆ ಉಂಗುರ, ಇಲ್ಲವೇ ಬೆಂಬಿಡದೆ ಕಾಡುತ್ತೆ ದುರಾದೃಷ್ಟ


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಸರ್ಕಾರೀ ಕೆಲಸಗಳಲ್ಲಿ ಬೆಂಬಲ ದೊರೆಯಲಿದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರಗೊಳ್ಳಲಿದ್ದು ಕುಟುಂಬದ ಜವಾಬ್ದಾರಿಗಳನ್ನು ಪೂರೈಸುವಿರಿ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ನೀವು ಇತರರ ಬೆಂಬಲದಿಂದ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸುವಿರಿ. ವ್ಯಾಪಾರದಲ್ಲಿ ಕೀರ್ತಿ, ಸಂಪತ್ತು ಹೆಚ್ಚಾಗುತ್ತದೆ. ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಆದಾಗ್ಯೂ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಿಮ್ಮ ಚಿಂತನೆ ಹೆಚ್ಚಾಗಬಹುದು. ಯಾವುದೇ ಹೊಸ ಕೆಲಸಗಳನ್ನು ಮಾಡುವಾಗ ಹಿರಿಯರ ಆಶೀರ್ವಾದವನ್ನು ಪಡೆಯುವುದನ್ನು ಮರೆಯಬೇಡಿ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ನಿಮಗೆ ಇಷ್ಟವಿಲ್ಲದ ಯಾವುದಾದರೂ ವಿಷಯಗಳು ನಿಮ್ಮನ್ನು ಬಾಧಿಸಬಹುದು. ಆದಾಗ್ಯೂ, ವೈವಾಹಿಕ ಜೀವನದಲ್ಲಿ ಆಹ್ಲಾದಕರವಾಗಿರುತ್ತದೆ. 


ಇದನ್ನೂ ಓದಿ- Astro Tips: ಶುಕ್ರವಾರ ಈ ವಸ್ತುಗಳನ್ನು ಮನೆಗೆ ತಂದರೆ ದಾರಿದ್ರ್ಯ ಬರುತ್ತದೆ!


ಧನು ರಾಶಿಯವರ ಭವಿಷ್ಯ (Sagittarius Horoscope):  
ಧನು ರಾಶಿಯವರೂ ಕೂಡ ಇಂದು ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಹಿತಕರ ಸುದ್ದಿಯನ್ನು ಕೇಳಬಹುದು. ಮಕ್ಕಳ ಜವಾಬ್ದಾರಿಗಳನ್ನು ಪೂರೈಸಲು ಹೆಚ್ಚು ಶ್ರಮವಹಿಸಬೇಕಾಗಬಹುದು. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಸರ್ಕಾರಿ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದರೆ ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯುವಿರಿ. ವ್ಯಾಪಾರಸ್ಥರಿಗೆ ದೊಡ್ಡ ಆರ್ಡರ್ ಒಂದು ದೊರೆಯುವ ಸಾಧ್ಯತೆ ಇದೆ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ನಿಮ್ಮ ಕೌಟುಂಬಿಕ ಗೌರವ, ಪ್ರತಿಷ್ಠೆ ಹೆಚ್ಚಲಿದೆ. ಧನಲಾಭದಿಂದ ಆರ್ಥಿಕ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. ಸಂಬಂಧದಲ್ಲಿ ಮೂಡಿದ್ದ ಬಿರುಕು ಸುಧಾರಿಸಲಿದೆ. ಇದರಿಂದ ಮನಸ್ಸಿಗೆ ಸಂತೋಷವಾಗಲಿದೆ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ವ್ಯಾಪಾರ ವ್ಯವಹಾರದಲ್ಲಿ ಶುಭ ಫಲಗಳನ್ನು ಅನುಭವಿಸುವಿರಿ. ಆದರೆ, ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆಗಳು ಹೆಚ್ಚಾಗಲಿವೆ. ಆರೋಗ್ಯದ ವಿಚಾರದಲ್ಲೂ ದಿನ ಅಷ್ಟು ಉತ್ತಮವಾಗಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.