Guruvara Dina Bhavishya In Kannada: ವೈಶಾಖ ಮಾಸದ ಹುಣ್ಣಿಮೆಯ ಈ ದಿನವನ್ನು ಬುದ್ಧ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಈ ದಿನ ಗುರುವಾರವಾದ್ದರಿಂದ ಇದು ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ದಿನ. ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ... 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಮೇಷ ರಾಶಿಯ ಉದ್ಯೋಗಸ್ಥರಿಗೆ ಇಂದು ಉತ್ತಮ ದಿನ. ಉದ್ಯಮಿಗಳು ವ್ಯವಹಾರದಲ್ಲಿ ಬಂಪರ್ ಲಾಭವನ್ನು ಗಳಿಸಬಹುದು. ಯಾವುದೇ ಸರ್ಕಾರಿ ಟೆಂಡರ್‌ಗೆ ಅರ್ಜಿ ಸಲ್ಲಿಸಿದ್ದರೆ ವಿಜಯ ನಿಮ್ಮದಾಗಲಿದೆ. ಸಹೋದರ ಸಹೋದರಿಯರಿಂದ ಸಲಹೆ ಪಡೆದು ಮುಂದುವರೆಯುವುದರಿಂದ ಶುಭ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ವೃಷಭ ರಾಶಿಯವರಿಗೆ ಉದ್ಯೋಗ ಸ್ಥಳದಲ್ಲಿ ಇಂದು ಒಳ್ಳೆಯ ದಿನ. ಆರೋಗ್ಯ ಉತ್ತಮವಾಗಿರುತ್ತದೆ. ನೀವು ಈಗಾಗಲೇ ಪಡೆದಿರುವ ಸಾಲವನ್ನು ತೀರಿಸಲು ಅನುಕೂಲವಾಗಲಿದೆ. ಆಸ್ತಿ ಸಂಬಂಧಿತ ವಿವಾದಗಳಲ್ಲಿ ನ್ಯಾಯಾಲಯದ ತೀರ್ಪು ನಿಮ್ಮ ಪರವಾಗಿರಲಿದೆ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಮಿಥುನ ರಾಶಿಯ ಜನರು ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಮನೆಯಿಂದ ಹೊರಡುವಾಗ ಗಣೇಶನ ಆಶೀರ್ವಾದ ಪಡೆದು ಹೋದರೆ ಜಯ. ವ್ಯಾಪಾರಸ್ಥರಿಗೆ ಲಾಭದಾಯಕ ದಿನ. ಯುವಕರು ಭಾವನಾತ್ಮಕವಾಗಿ ಕೆಲಸ ಮಾಡುವುದರ ಬದಲಿಗೆ ಯೋಚಿಸಿ ಕೆಲಸ ಮಾಡುವುದನ್ನು ಪರಿಗಣಿಸಿ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಕರ್ಕಾಟಕ ರಾಶಿಯವರು ಇಂದು ಕಚೇರಿ ಕೆಲಸದ ಬಗ್ಗೆ ಜಾಗರೂಕರಾಗಿರಿ. ವ್ಯಾಪಾರಸ್ಥರು ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಚಿಂತನಶೀಲರಾಗಿರಿ. ಸಣ್ಣ ಪುಟ್ಟ ವಿಚಾರಗಳಿಗೆ ಕೋಪಗೊಳ್ಳುವುದನ್ನು ತಪ್ಪಿಸಿ. 


ಇದನ್ನೂ ಓದಿ- Buddha Purnima: ಬುದ್ಧ ಪೂರ್ಣಿಮೆಯಂದು ಈ ಕೆಲಸ ಮಾಡುವುದರಿಂದ ಪೂರ್ವಜರ ಆಶೀರ್ವಾದ, ಶುಭ ಫಲ 


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಸಿಂಹ ರಾಶಿಯವರು ಇಂದು ನಿಮ್ಮ ಕಚೇರಿಯಲ್ಲಿ ಗಾಸಿಪ್ ಮಾಡುವವರ ಬಗ್ಗೆ ಜಾಗರೂಕರಾಗಿರಿ. ಇಲ್ಲದಿದ್ದರೆ ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು. ಆರೋಗ್ಯದ ದೃಷ್ಟಿಯಿಂದ ನಿಮ್ಮ ದಿನಚರಿಯಲ್ಲಿ ಕ್ರಮಬದ್ಧತೆಯನ್ನು ತರಲು ಪ್ರಯತ್ನಿಸಿ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಕನ್ಯಾ ರಾಶಿಯ  ವೈದ್ಯಕೀಯ ಕ್ಷೇತ್ರದೊಂದಿಗೆ ಸಂಬಂಧ ಹೊಂದಿದ ಜನರಿಗೆ ಇಂದು ಗಡಿಬಿಡಿ, ಗದ್ದಲ ಹೆಚ್ಚಾಗಬಹುದು. ಆದಾಗ್ಯೂ, ನಿಮ್ಮ ಶ್ರಮ ವ್ಯರ್ಥವಾಗುವುದಿಲ್ಲ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿರುವವರು ಪಾರದರ್ಶಕವಾಗಿರುವುದನ್ನು ಪರಿಗಣಿಸಿದರೆ ಒಳ್ಳೆಯದು. 


ತುಲಾ ರಾಶಿಯವರ ಭವಿಷ್ಯ (Libra Horoscope): 
ತುಲಾ ರಾಶಿಯವರು ನಿಮ್ಮ ಕಚೇರಿಯಲ್ಲಿ ಸ್ವಲ್ಪ ಜಾಗರೂಕರಾಗಿರಿ. ಆಫೀಸಿನಲ್ಲಿ ನಡೆಯುತ್ತಿದ್ದ ಮೋಜು ಮಸ್ತಿಗೆ ಕಡಿವಾಣ ಹಾಕಬೇಕಾಗುತ್ತದೆ. ಈ ಸಂಬಂಧ ಬಾಸ್‌ನಿಂದ ಕೆಲವು ಕಟ್ಟುನಿಟ್ಟಿನ ಆದೇಶಗಳನ್ನು ಸ್ವೀಕರಿಸಬಹುದು. ವ್ಯವಹಾರದಲ್ಲಿ ನಿಮ್ಮ ಜೀವನ ಸಂಗಾತಿಯಿಂದ ಸಂಪೂರ್ಣ ಬೆಂಬಲ ದೊರೆಯಲಿದೆ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ವೃಶ್ಚಿಕ ರಾಶಿಯ ಉದ್ಯೋಗಸ್ಥರು ಮುಂಜಾನೆ ಬೇಗ ಕೆಲಸ ಆರಂಭಿಸಿ. ನೀವು ಯಾರಿಗಾದರೂ ಸಾಲ ನೀಡಿದ್ದರೆ ಕಾಲಕಾಲಕ್ಕೆ ನೆನಪಿಸಿದರಷ್ಟೇ ಆ ಹಣ ನಿಮ್ಮ ಕೈ ಸೇರಲಿದೆ. ಮಹಿಳೆಯರ ಭಾವನೆಗಳಿಗೆ ಗೌರವಿಸಿದರೆ ಒಳ್ಳೆಯದು. 


ಇದನ್ನೂ ಓದಿ- Astro Tips: ಹೆಣ್ಣು ಮಾಡುವ ಈ ತಪ್ಪುಗಳಿಂದ ಗಂಡ ಮತ್ತು ಮನೆಯವರಿಗೆ ಧನಹಾನಿ!


ಧನು ರಾಶಿಯವರ ಭವಿಷ್ಯ (Sagittarius Horoscope):  
ಧನು ರಾಶಿಯ ಜನರಿಗೆ ಇಂದು ಅಷ್ಟು ಉತ್ತಮ ದಿನವಲ್ಲ. ಉದ್ಯೋಗಸ್ಥರು ನಿಮ್ಮ ಮನಸ್ಥಿತಿಯಿಂದ ತೊಂದರೆಗೊಳಗಾಗಬಹುದು. ಆರೋಗ್ಯಕ್ಕಾಗಿ ಸ್ವಲ್ಪ ಹಣವನ್ನು ಖರ್ಚು ಮಾಡಬೇಕಾಗಬಹುದು. ಉದ್ಯಮಿಗಳಿಗೆ ಎದುರಾಳಿಗಳು ತೊಂದರೆ ನೀಡಲು ಯೋಜಿಸಬಹುದು. ಈ ಬಗ್ಗೆ ಹುಷಾರಾಗಿರಿ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಮಕರ ರಾಶಿಯ ಸ್ವಂತ ವ್ಯವಹಾರ ಮಾಡುವರಿಗೆ ಇಂದು ಲಾಭದಾಯಕ ದಿನ. ವ್ಯಾಪಾರಸ್ಥರು ಸಾರ್ವಜನಿಕ ಸಂಪರ್ಕದಿಂದ ಲಾಭ ಪಡೆಯಬಹುದು. ವೈವಾಹಿಕ ಸಂಬಂಧ ಉತ್ತಮವಾಗಿರುತ್ತದೆ. ನಿದ್ರಾಹೀನತೆಯಿಂದಾಗಿ ನೀವು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಕುಂಭ ರಾಶಿಯ ಉದ್ಯೋಗಸ್ಥರು ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ಪ್ರಗತಿ ಕಾಣಬಹುದು. ವ್ಯಾಪಾರ ವರ್ಗವು ಯಾವುದೇ ಮಹಿಳಾ ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸುವುದನ್ನು ತಪ್ಪಿಸಿ. ಸಪ್ರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಕಷ್ಟಪಟ್ಟು ಓದುವುದನ್ನು ಮರೆಯಬೇಡಿ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಮೀನ ರಾಶಿಯ ಉದ್ಯೋಗಸ್ಥರು ಇಂದು ಸಮಯಕ್ಕೆ ಸರಿಯಾಗಿ ಕಚೇರಿ ತಲುಪುವುದನ್ನು ಮರೆಯಬೇಡಿ. ಇಲ್ಲದಿದ್ದರೆ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗಬಹುದು. ಮನೆಯಲ್ಲಿ ದುಃಖದ ಪರಿಸ್ಥಿತಿಯಿಂದಾಗಿ ಮಾನಸಿಕ ಒತ್ತಡ ಹೆಚ್ಚಾಗಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.