Mangalavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಪ್ರತಿಪದಾ ತಿಥಿ, ಮಂಗಳವಾರದ ಈ ದಿನ ಶತಭಿಷಾ ನಕ್ಷತ್ರ, ಅತಿಗಂಡ ಯೋಗ ಯಾವ ರಾಶಿಯವರಿಗೆ ಹೇಗಿದೆ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಈ ರಾಶಿಯವರಿಗೆ ಇಂದು ಕೆಲವು ಕಷ್ಟ-ಕಾರ್ಪಣ್ಯಗಳು ನಿಮ್ಮನ್ನು ಬಾಧಿಸಬಹುದು. ಆದಾಗ್ಯೂ, ಈ ಸಮಯದಲ್ಲಿ ನೀವು ತಾಳ್ಮೆಯಿಂದ ವರ್ತಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ, ಆಗುವ ಕೆಲಸಗಳು ಕೂಡ ಹಾಳಾಗಬಹುದು. ಆಸ್ತಿ ವಿಚಾರಗಳನ್ನು ಮುಂದೂಡಿ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ನಿಮ್ಮ ವ್ಯಕ್ತಿತ್ವವು ಬೇರೆಯವರನ್ನು ಆಕರ್ಷಿಸುತ್ತದೆ. ನಿಮ್ಮ ಗುಣ-ಧರ್ಮಗಳು ನಿಮ್ಮ ಸುತ್ತಮುತ್ತಲಿನವರಲ್ಲಿ ಪ್ರಭಾವಿತರನ್ನಾಗಿ ಮಾಡಬಹುದು. ವ್ಯಾಪಾರ ವಿಸ್ತರಣೆಗೆ ಶುಭಪ್ರದವಾಗಿದೆ. ಆರೋಗ್ಯ ಸ್ಥಿತಿ ಸ್ಥಿರವಾಗಿರುತ್ತದೆ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಈ ದಿನ ಆರೋಗ್ಯ ಸಂಬಂಧಿತ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. ಆದರೆ, ಇವುಗಳನ್ನು ನಿರ್ಲಕ್ಷಿಸದೆ ಇರುವುದು ಒಳ್ಳೆಯದು. ಆರ್ಥಿಕವಾಗಿ, ಕೆಲವು ಬೆಳವಣಿಗೆಯನ್ನು ಊಹಿಸಬಹುದು. ಹೂಡಿಕೆಯು ಭವಿಷ್ಯದಲ್ಲಿ ಪ್ರಯೋಜನಕಾರಿ ಆಗಿರಲಿದೆ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ವೈಯಕ್ತಿಕ ಜೀವನದಲ್ಲಿ ಏರಿಳಿತಗಳನ್ನು ಕಾಣಬಹುದು. ವೃತ್ತಿಪರರಿಗೆ ಪ್ರಮೋಷನ್ ಸಂಭವವಿದೆ. ನಿಮ್ಮ ದಾರಿಯಲ್ಲಿ ಬರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಪ್ರಯೋಜನಕಾರಿ ಆಗಿದೆ. ಆರೋಗ್ಯ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. 


ಇದನ್ನೂ ಓದಿ- ರಾಹು-ಕೇತು ಗೋಚಾರ:  2025ರವರೆಗೆ ಈ ರಾಶಿಯವರ ಬದುಕಿನಲ್ಲಿ ಬರೀ ಶುಭವೇ! ಮುಟ್ಟಿದ್ದೆಲ್ಲಾ ಬಂಗಾರವಾಗುವ ಕಾಲ!  


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಕಾನೂನು ಮೊಕದ್ದಮೆಗಳಲ್ಲಿ ತೊಡಗಿರುವವರಿಗೆ ಉತ್ತಮ ದಿನ. ಬಹಳ ದಿನಗಳ ಮೇಲೆ ನಿಮ್ಮ ಬಾಲ್ಯದ ಸ್ನೇಹಿತರನ್ನು ಭೇಟಿಯಾಗಬಹುದು. ಫಿಟ್‌ನೆಸ್ ಸಂಬಂಧಿತ ಚಟುವಟಿಕೆಗಳು ನಿಮ್ಮ ಆರೋಗ್ಯವನ್ನು ವೃದ್ಧಿಸಲಿದೆ. ಮನೆಯಿಂದ ಹೊರಗಡೆ ಹೋಗುವಾಗ ಹಿರಿಯರ ಆಶೀರ್ವಾದ ಪಡೆದು ಹೋಗುವುದು ಶುಭ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ವೃತ್ತಿಜೀವನದಷ್ಟೇ ವೈಯಕ್ತಿಕ ಜೀವನವೂ ಮುಖ್ಯ ಎಂಬುದನ್ನು ತಿಳಿಯುವುದು ಒಳ್ಳೆಯದು. ಕುಟುಂಬಸ್ಥರೊಂದಿಗೆ ಆನಂದದಾಯಕ ಸಮಯವನ್ನು ಕಳೆಯುವಿರಿ. ಹಣಕಾಸಿನ ಸಮಸ್ಯೆಗಳು ಇಂದು ನಿಮ್ಮನ್ನು ಕಾಡಬಹುದು. ಆದರೆ, ಸಂಜೆ ವೇಳೆಗೆ ಎಲ್ಲವೂ ಸರಿಹೋಗಲಿದೆ. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಸರ್ಕಾರಿ ಉದ್ಯೋಗದಲ್ಲಿರುವವರು ವೇತನ ಹೆಚ್ಚಳವನ್ನು ನಿರೀಕ್ಷಿಸಬಹುದು. ಇದು ನಿಮ್ಮ ಮಾನಸಿಕ ಆರೋಗ್ಯವನ್ನೂ ಕೂಡ ಸುಧಾರಿಸುತ್ತದೆ. ನ್ಯಾಯಾಲಯದ ವಿಚಾರಗಳಲ್ಲಿ ತೀರ್ಪು ನಿಮ್ಮ ಪರವಾಗಿರಲಿದೆ. ಪ್ರೀತಿಯ ಜೀವನದಲ್ಲಿ ಕೆಲವು ತೊಂದರೆಗಳು ನಿಮ್ಮನ್ನು ಕಾಡಬಹುದು. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಕೆಲಸದ ಕಡೆಗೆ ನಿಮ್ಮ ನಿಷ್ಠೆ ಮತ್ತು ಸಮಗ್ರತೆಯು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಹಣಕಾಸಿನ ಪರಿಸ್ಥಿತಿಗಳು ಸುಧಾರಿಸುತ್ತವೆ. ಹೊಸ ಕೆಲಸಗಳಲ್ಲಿ  ನಿಮ್ಮ ಅದೃಷ್ಟವನ್ನು ಪ್ರಯತ್ನಿಸಲು ಇದು ಒಳ್ಳೆಯ ದಿನವಾಗಿದೆ.


ಇದನ್ನೂ ಓದಿ- Weekly Horoscope: ಸಿಂಹ ರಾಶಿಯಲ್ಲಿ ತ್ರಿಗ್ರಾಹಿ ಯೋಗ: ಈ ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಬಂಪರ್ ಧನಲಾಭ 


ಧನು ರಾಶಿಯವರ ಭವಿಷ್ಯ (Sagittarius Horoscope):  
ನಿಮ್ಮ ಕನಸನ್ನು ನನಸಾಗಿಸುವ ಸಮಯ. ಆದರೆ, ಈ ನಿಟ್ಟಿನಲ್ಲಿ ನೀವು ಕಾರ್ಯೋನ್ಮುಖರಾದರಷ್ಟೇ ಯಶಸ್ಸು ನಿಮ್ಮ ಪಾಲಿಗಿದೆ. ಆರೋಗ್ಯವು ಸ್ಥಿರವಾಗಿ ಉಳಿಯುತ್ತದೆ. ವೃತ್ತಿಪರ ಜೀವನದಲ್ಲಿ ಬಡ್ತಿಯಿಂದ ಆರ್ಥಿಕ ಪ್ರಯೋಜನ ಸಿಗಲಿದೆ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಜೀವನದಲ್ಲಿ ಕೆಲವು ಅನಪೇಕ್ಷಿತ ಮತ್ತು ಅನಿರೀಕ್ಷಿತ ಬದಲಾವಣೆಗಳು ಸಂಭವಿಸುವ ಸಾಧ್ಯತೆಯಿದೆ. ಇದಕ್ಕಾಗಿ ಮಾನಸಿಕವಾಗಿ ಸಿದ್ದರಾಗಿರಿ. ಇಂದು ಆರೋಗ್ಯವು ಉತ್ತಮವಾಗಿರುತ್ತದೆ. ಆದರೆ, ನಿಮ್ಮವರೇ ನಿಮಗೆ ಮೋಸ ಮಾಡುವ ವಿಚಾರಗಳು ನಿಮ್ಮ ಮನಸನ್ನು ಕಲಕುವ ಸಂಭವವಿದೆ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಈ ದಿನ ಸಾಕಷ್ಟು ಒತ್ತಡದ ದಿನವಾಗಿದೆ. ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ. ವೈಯಕ್ತಿಕ ಜೀವನದಲ್ಲಿ ಕುಟುಂಬದವರ ಬೆಂಬಲವು ನಿಮ್ಮ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಹಿರಿಯರೊಂದಿಗೆ ಅನುಚಿತವಾಗಿ ವರ್ತಿಸುವುದನ್ನು ತಪ್ಪಿಸಿ. ಪ್ರಮುಖ ಕೆಲಸಗಳಲ್ಲಿ ತಪ್ಪದೇ ಹಿರಿಯರಿಂದ, ಅನುಭವಿಗಳಿಂದ ಮಾಹಿತಿ ಪಡೆಯುವುದನ್ನು ಖಚಿತಪಡಿಕೊಳ್ಳಿ. ಆರೋಗ್ಯದ ವಿಚಾರದಲ್ಲಿಯೂ ಕಾಳಜಿ ಅಗತ್ಯವಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.