ದಿನಭವಿಷ್ಯ :  ಗುರುವಾರದ ಈ ದಿನ  ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯ ಹೇಗಿದೆ ಎಂದು ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿ:  
ಇಂದಿನ ದಿನ ಮೇಷ ರಾಶಿಯವರ ಪರವಾಗಿರಲಿದೆ. ಇಂದು ವೃತ್ತಿಪರವಾಗಿ ಪರಿವರ್ತನೆಯನ್ನು ನಿರೀಕ್ಷಿಸಬಹುದು. ಜೀವನದಲ್ಲಿ ಹೊಸ ಹೊಸ ಸವಾಲುಗಳು ಎದುರಾಗಲಿವೆ. ಆದರೂ, ಎಲ್ಲವನ್ನೂ ಮೆಟ್ಟಿ ನಿಂತು ಯಶಸ್ಸು ಗಳಿಸುವಿರಿ. 


ವೃಷಭ ರಾಶಿ:  
ವೃಷಭ ರಾಶಿಯವರಿಗೆ ನ್ಯಾಯಾಲಯದ ಪ್ರಕರಣಗಳು ಇಂದು ನಿಮ್ಮ ಪರವಾಗಿ ಬರಲಿವೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶಕ್ಕಾಗಿ ಶ್ರಮವಹಿಸಿ ಓದಬೇಕು. ವ್ಯಾಪಾರಸ್ಥರು ಹಣಕಾಸು ವಿಷಯಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ. 


ಮಿಥುನ ರಾಶಿ:   
ಮಿಥುನ ರಾಶಿಯವರು ದೀರ್ಘ ಸಮಯದ ಬಳಿಕ ಇಂದು ನೀವು ನಿಮ್ಮ ಆತ್ಮೀಯರನ್ನು ಭೇಟಿಯಾಗಬಹುದು. ಇದು ನಿಮಗೆ ಭಾವನಾತ್ಮಕವಾಗಿ ಮಾತ್ರವಲ್ಲದೆ, ಆರ್ಥಿಕವಾಗಿಯೂ ಬಲವನ್ನು ತುಂಬಲಿದೆ. 


ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯವರು ಈ ದಿನ ನಿಮ್ಮ ಕುಟುಂಬಸ್ಥರಿಂದ ಶುಭ ಫಲಗಳನ್ನು ನಿರೀಕ್ಷಿಸಬಹುದು. ನಿಮ್ಮಲ್ಲಿರುವ ಸಂಪತ್ತನ್ನು ಕೂಡಿಡುವುದರ ಜೊತೆಗೆ ಅಗತ್ಯ ಇರುವವರಿಗೆ ಸಹಾಯ ಹಸ್ತವನ್ನು ಚಾಚುವುದನ್ನು ಪರಿಗಣಿಸಿ. 


ಇದನ್ನೂ ಓದಿ- Astro Tips: ಸೂರ್ಯಾಸ್ತದ ನಂತರ ಈ ಕೆಲಸಗಳನ್ನು ಮಾಡುವುದರಿಂದ ಮನೆಗೆ ದರಿದ್ರ ಲಕ್ಷ್ಮಿ ಆಗಮನ, ಆರೋಗ್ಯಕ್ಕೂ ಒಳ್ಳೆಯದಲ್ಲ


ಸಿಂಹ ರಾಶಿ:   
ಹೊಸ ಆಸ್ತಿ ಖರೀದಿಸಲು ಯೋಚಿಸುತ್ತಿರುವ ಸಿಂಹ ರಾಶಿಯವರಿಗೆ ಇಂದು ಅತ್ಯುತ್ತಮ ದಿನ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಆದರೂ, ಭವಿಷ್ಯಕ್ಕಾಗಿ ಸ್ವಲ್ಪ ಹಣವನ್ನು ಸಂಗ್ರಹಿಸಿ. 


ಕನ್ಯಾ ರಾಶಿ: 
ಕನ್ಯಾ ರಾಶಿಯವರೇ ಬದಲಾವಣೆ ಜಗದ ನಿಯಮ. ಇದಕ್ಕೆ ನೀವು ಹೊಂದಿಕೊಳ್ಳುವುದು ಬುದ್ದಿವಂತಿಕೆಯಾಗಿದೆ. ಜೀವನದಲ್ಲಿ ಬದಲಾವಣೆಗಳನ್ನು ಸ್ವೀಕರಿಸಲು ಹಲವು ಅವಕಾಶಗಳಿದ್ದು ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಿ. 


ತುಲಾ ರಾಶಿ:  
ತುಲಾ ರಾಶಿಯವರು ಇಂದು ಕೆಲವು ಮಾನಸಿಕ ಒತ್ತಡವನ್ನು ನಿಭಾಯಿಸಬೇಕಾಗಬಹುದು. ಆದಾಗ್ಯೂ, ಧೈರ್ಯದಿಂದ ಮುಂದುವರೆಯಿರಿ, ಜಯ ನಿಮ್ಮದೇ ಆಗಿರುತ್ತದೆ. ಮಕ್ಕಳಿಂದ ಶುಭ ಸುದ್ದಿ ಸ್ವೀಕರಿಸುವಿರಿ. 


ವೃಶ್ಚಿಕ ರಾಶಿ:   
ವೃಶ್ಚಿಕ ರಾಶಿಯವರಿಗೆ ವೃತ್ತಿಪರ ದೃಷ್ಟಿಯಿಂದ ಇಂದು ಅತ್ಯುತ್ತಮ ದಿನ ಎಂದು ಸಾಬೀತುಪಡಿಸಲಿದೆ. ನಿಮ್ಮ ಕೆಲಸದ ವೈಕರಿಗೆ ಮೆಚ್ಚಿ ಮೇಲಾಧಿಕಾರಿಗಳು ಪ್ರಮೋಷನ್ ನೀಡಬಹುದು.  ಆರೋಗ್ಯವೂ ಉತ್ತಮವಾಗಿರಲಿದೆ. 


ಇದನ್ನೂ ಓದಿ- 2025ರವರೆಗೆ ಈ ರಾಶಿಗೆ ಸೋಲೆಂಬುದೇ ಇಲ್ಲ: ಅಪಾರ ಧನಸಂಪತ್ತಿನ ಜೊತೆ ಅದೃಷ್ಟ ಬೆಳಗಿ ಯಶಸ್ಸನ್ನೇ ನೀಡುವನು ಮಾಯಾವಿ ಕೇತು


ಧನು ರಾಶಿ:  
ಧನು ರಾಶಿಯವರು ಇಂದು ಮನೆಯಿಂದ ಹೊರಡುವಾಗ ಹಿರಿಯರ ಆಶೀರ್ವಾದ ಪಡೆಯಿರಿ. ಇದು ನಿಮಗೆ ಕೆಲಸದಲ್ಲಿ ಯಶಸ್ಸನ್ನು ನೀಡಲಿದೆ. ಹೂಡಿಕೆಯಿಂದ ಲಾಭವಾಗಲಿದೆ. 


ಮಕರ ರಾಶಿ:  
ಮಕರ ರಾಶಿಯವರಿಗೆ ಸ್ವಯಂ ಅನ್ವೇಷಣೆಗೆ ಇಂದು ಉತ್ತಮ ದಿನ. ಆದಾಗ್ಯೂ, ಕೆಲವು ಅನಿರೀಕ್ಷಿತ ಕೆಟ್ಟ ಸುದ್ದಿಗಳನ್ನು ಸ್ವೀಕರಿಸಬಹುದು. ಇಂದು ಯಾವುದೇ ರೀತಿಯ ಕಾನೂನು ವ್ಯವಹಾರಗಳಲ್ಲಿ ಮುಂದುವರೆಯುವಾಗ ಎಚ್ಚರಿಕೆ ಅಗತ್ಯ. 


ಕುಂಭ ರಾಶಿ:  
ನೀವು ದೀರ್ಘ ಕಾಲದಿಂದ ಪೂರ್ಣಗೊಳಿಸಲು ಇಚ್ಚಿಸುತ್ತಿದ್ದ ಕೆಲಸಗಳು ಇಂದು ಮುಗಿಯಲಿವೆ. ನೀವನದಲ್ಲಿ ಯಾವುದೇ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂದು ಸೂಕ್ತವಾಗಿದೆ. 


ಮೀನ ರಾಶಿ:  
ಮೀನ ರಾಶಿಯವರು ಈ ದಿನವನ್ನು ಹೊಸ ಆರಂಭವೆಂದು ಪರಿಗಣಿಸಿ. ನೀವು ಸಕಾರಾತ್ಮಕ ಚಿಂತನೆಗಳೊಂದಿಗೆ ಮುಂದುವರೆದರೆ ಸ್ವರ್ಗದಂತಹ ಜೀವನ ನಿಮ್ಮದಾಗಲಿದೆ. ಸಂಜೆ ವೇಳೆಗೆ ಶುಭ ಸುದ್ದಿಗಳನ್ನು ಸ್ವೀಕರಿಸುವಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.