Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಬುಧವಾರದಂದು ಉ.ಭಾ. ನಕ್ಷತ್ರ ಧ್ರುವ ಯೋಗ, ಗರಜ ಕರಣ ಎಲ್ಲಾ 12 ರಾಶಿಗಳಲ್ಲಿ ಯಾರಿಗೆ ಶುಭ, ಯಾರಿಗೆ ಅಶುಭ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಇಂದು ಖರ್ಚು ಹೆಚ್ಚಾಗಲಿದೆ. ಆದಾಯಕ್ಕಿಂತ ವೆಚ್ಚ ಅಧಿಕವಾಗುವುದರಿಂದ ಹಣಕಾಸಿನ ಸಮಸ್ಯೆ ಉದ್ಭವಿಸಬಹುದು. ಯೋಜಿಸಿ ಕೆಲಸ ಮಾಡುವುದರಿಂದ ಅಷ್ಟೇ ಯಶಸ್ಸು, ಇಲ್ಲವೇ ಕೆಲಸದಲ್ಲೂ ಅಡೆತಡೆಗಳನ್ನು ಎದುರಿಸಬೇಕಾಗಬಹುದು. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ಯಾವುದೇ ರೀತಿಯ ಹೊಸ ಪಾಲುದಾರಿಕೆ ವ್ಯವಹಾರವನ್ನು ತಪ್ಪಿಸಬೇಕು. ಕುಟುಂಬ ಸದಸ್ಯರ ವರ್ತನೆಯಿಂದ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು. ಪೂರ್ವಜರ ಆಸ್ತಿಗೆ ಸಂಬಂಧಿಸಿದ ವಿವಾದಗಳು ನ್ಯಾಯಾಲಯದ ಮೆಟ್ಟಿಲೇರಬಹುದು. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಇಂದು ಲಾಭದಾಯಕ ದಿನ. ಕೌಟುಂಬಿಕ ಜೀವನದಲ್ಲಿನ ತೊಡುಕುಗಳು ನಿವಾರಣೆಯಾಗಳಿವೆ. ವೃತ್ತಿ ಬದುಕಿನಲ್ಲಿ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ವ್ಯಾಪಾರಸ್ಥರಿಗೆ ಬಂಪರ್ ಲಾಭ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇದು ನಿಮಗೆ ಒತ್ತಡಭರಿತ ದಿನ. ಕೆಲಸದ ವಿಚಾರದಲ್ಲಿ ಮನಸ್ಸಿನ ಗೊಂದಲಗಳು ಹೆಚ್ಚಾಗಲಿದೆ. ಕುಟುಂಬದಲ್ಲಿ ಮದುವೆ ಪ್ರಸ್ತಾಪಗಳು ಬರಬಹುದು. ಮಂಗಳಕರ ಕಾರ್ಯಗಳಿಗಾಗಿ ಯೋಜಿಸಬಹುದು. 


ಇದನ್ನೂ ಓದಿ- 118 ದಿನಗಳ ಕಾಲ ಈ ರಾಶಿಯವರಿಗೆ ಕೈತುಂಬಾ ಹಣ, ವೃತ್ತಿ-ವ್ಯವಹಾರದಲ್ಲಿ ಭಾರೀ ಯಶಸ್ಸು ನೀಡಲಿದ್ದಾನೆ ದೇವಗುರು ಬೃಹಸ್ಪತಿ


ಸಿಂಹ ರಾಶಿಯವರ ಭವಿಷ್ಯ (Leo Horoscope):  
ವೃತ್ತಿ ಬದುಕಿನಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಇದರಿಂದ ಕೀರ್ತಿ, ಗೌರವವನ್ನು ಪಡೆಯಲಿದ್ದೀರಿ. ಬೇರೆಯವರಿಗೆ ಉಪಯುಕ್ತವಾಗುವ ಕಾರ್ಯಗಳನ್ನು ಕೈಗೆತ್ತಿಕೊಳ್ಳಿ. ಬೇರೆಡೆ ಸಿಲುಕಿರುವ ಹಣ ಇಂದು ಕೈ ಸೇರಬಹುದು. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ಎಚ್ಚರಿಕೆಯಿಂದ ಇರಬೇಕಾದ ದಿನ. ಯಾವುದೇ ರೀತಿಯ ಅಪಾಯಗಳನ್ನು ತಪ್ಪಿಸಬೇಕು. ಖರ್ಚು ವೆಚ್ಚಗಳನ್ನು ಸೂಕ್ಷ್ಮವಾಗಿ ಗಮನಿಸಿ ಅನಗತ್ಯ ವ್ಯಯಕ್ಕೆ ಕಡಿವಾಣ ಹಾಕಿ. ಇಲ್ಲದಿದ್ದರೆ, ಭಾರೀ ಹಣಕಾಸಿನ ತೊಂದರೆಯಲ್ಲಿ ಸಿಲುಕುವ ಸಾಧ್ಯತೆ ಹೆಚ್ಚು. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಬೇರೆಯವರ ಚಾಡಿ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ. ಹಳೆಯ ಸ್ನೇಹಿತರನ್ನು ಭೇಟಿಯಾಗುವುದರಿಂದ ಸಂತಸ. ಸಹೋದರ ವರ್ಗದವರೊಂದಿಗಿನ ಭಿನ್ನಾಭಿಪ್ರಾಯ ಕೊನೆಗೊಳ್ಳಲಿದೆ. ಸಾಮಾಜಿಕ ರಂಗದಲ್ಲಿ ನಿಮ್ಮ ಕೀರ್ತಿ ಹೆಚ್ಚಾಗಲಿದೆ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ನಿಮಗೆ ಅದೃಷ್ಟದ ದಿನ. ಬಹುದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಇಂದು ಒಂದರ ನಂತರ ಒಂದರಂತೆ ಶುಭ ಸುದ್ದಿಗಳನ್ನು ಕೇಳುವಿರಿ. ಮಕ್ಕಳಿಂದ ಮನಸ್ಸು ಸಂತೋಷಗೊಳ್ಳಲಿದೆ. 


ಇದನ್ನೂ ಓದಿ- ಶರದ್ ಪೂರ್ಣಿಮಾದಂದು ಚಂದ್ರನ ಮುಂದೆ ಈ ಕೆಲಸ ಮಾಡಿದ್ರೆ ಅನಾರೋಗ್ಯದಿಂದ ಪರಿಹಾರ, ಸಂಪತ್ತು ವೃದ್ಧಿ 


ಧನು ರಾಶಿಯವರ ಭವಿಷ್ಯ (Sagittarius Horoscope):  
ಸಾಂಸಾರಿಕ ಸೌಕರ್ಯಗಳು ಹೆಚ್ಚಾಗಲಿವೆ. ನಿಮ್ಮ ಹಿಂದಿನ ತಪ್ಪುಗಳಿಂದ ಪಾಠ ಕಲಿಯುವಿರಿ. ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಲಿವೆ. ಆದರೆ, ಉದ್ಯೋಗಸ್ಥರು ಬಾಸ್ನಿಂದ ಪ್ರಶಂಸೆ ಪಡೆಯುವಿರಿ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಅನಗತ್ಯ ವಿಷಯಗಳಿಗೆ ಚಿಂತೆ ಹೆಚ್ಚಾಗಲಿದೆ. ನಿಮ್ಮ ವಯಕ್ತಿಕ ಕೆಲಸಗಳಿಗಿಂತ ಬೇರೆಯವರ ಸಮಸ್ಯೆಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತೀರಿ. ಕೆಲಸದಲ್ಲಿ ನಿಮ್ಮ ಆಲೋಚನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಿ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ಶುಭ ಸಮಾರಂಭಗಳಲ್ಲಿ ಭಾಗವಹಿಸುವಿರಿ. ಕೆಲಸದ ನಿಮಿತ್ತ ದೂರ ಊರಿಗೆ ಪ್ರಯಾಣಿಸಬೇಕಾಗಬಹುದು. ಯಾವುದೇ ರೀತಿಯ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ಲಾಭದ ದಿನವಾಗಿರುತ್ತದೆ. ಕುಟುಂಬದಲ್ಲಿ ಪ್ರೀತಿಯ ವಾತಾವರಣ ಇರುತ್ತದೆ. ಕೆಲಸಗಳಲ್ಲಿ ಯಶಸ್ಸು ಮನಸ್ಸಿಗೆ ಸಂತೋಷವನ್ನು ನೀಡಲಿದೆ. ಮಕ್ಕಳ ಏಳ್ಗೆ, ಪ್ರಗತಿಯಿಂದ ಹೆಮ್ಮೆಯ ಕ್ಷಣಗಳನ್ನು ಅನುಭವಿಸುವಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.