ದಿನಭವಿಷ್ಯ :  ನವೆಂಬರ್ 21, 2023ರ ಮಂಗಳವಾರವು ಕೆಲವು ರಾಶಿಯವರಿಗೆ ಅದೃಷ್ಟದ ದಿನ ಎಂದು ಸಾಬೀತುಪಡಿಸಲಿದೆ. ಇಂದು ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯೋಣ... 


COMMERCIAL BREAK
SCROLL TO CONTINUE READING

ಮೇಷ ರಾಶಿ:  
ಮೇಷ ರಾಶಿಯವರಿಗೆ ಇಂದು ಆತ್ಮವಿಶ್ವಾಸದಿಂದ ಕೂಡಿದ ದಿನ. ನೀವು ತಾಳ್ಮೆಯಿಂದ ಮುಂದುವರೆದರೆ ಶೈಕ್ಷಣಿಕ ಕೆಲಸಕಾರ್ಯಗಳಲ್ಲಿ ಸುಧಾರಣೆಯನ್ನು ಕಾಣಬಹುದು. ವಿದೇಶ ಪ್ರವಾಸಕ್ಕೆ ಯೋಜಿಸಲು ಇಂದು ಅತ್ಯುತ್ತಮ ದಿನ. ಮಕ್ಕಳಿಂದ ಶುಭ ಸುದ್ದಿ ಸಾಧ್ಯತೆಯಿದೆ. 


ವೃಷಭ ರಾಶಿ:  
ವೃಷಭ ರಾಶಿಯವರಿಗೆ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆತು ಆರ್ಥಿಕವಾಗಿ ಪ್ರಗತಿಯನ್ನು ಕಾಣುವಿರಿ. ಹೂಡಿಕೆಗಾಗಿ ಯೋಚಿಸುತ್ತಿದ್ದರೆ ಇಂದು ಒಳ್ಳೆಯ ದಿನ. ನಿಮ್ಮ ಮನೆಯ ಹಿರಿಯರು, ಸಹೋದರ ವರ್ಗದವರಿಂದ ಸಹಕಾರ ದೊರೆಯಲಿದೆ. 


ಮಿಥುನ ರಾಶಿ:   
ಮಿಥುನ ರಾಶಿಯವರು ಇಂದು ನಿಮ್ಮ ವ್ಯಾಪಾರ-ವ್ಯವಹಾರದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಆದರೂ, ಕುಟುಂಬದಲ್ಲಿ ತಾಳ್ಮೆಯಿಂದ ವರ್ತಿಸಿ, ಇದು ನಿಮ್ಮ ಮನಸ್ಸಿಗೆ ಶಾಂತಿಯನ್ನು ನೀಡಬಹುದು. ಸ್ನೇಹಿತರೊಂದಿಗೆ ಅನಾವಶ್ಯಕ ವಾದ ತಪ್ಪಿಸಿ. 


ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯವರು ಕೆಲಸದಲ್ಲಿ ಯಶಸ್ಸನ್ನು ಪಡೆಯಲು ಏಕಾಗ್ರತೆಯಿಂದ ಕೆಲಸ ಮಾಡುವುದು ಅವಶ್ಯಕ. ಯಾವುದೇ ಕೆಲಸದಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದರೆ ಶುಭ ಫಲ ಕಟ್ಟಿಟ್ಟ ಬುತ್ತಿ. ಈ ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರ ಬೆಂಬಲವೂ ದೊರೆಯಲಿದೆ. 


ಇದನ್ನೂ ಓದಿ- Lucky Zodiacs: 2024ರ ಅದೃಷ್ಟದ ರಾಶಿಗಳಿವು, ಸುಖ-ಸಂಪತ್ತಿಗೆ ಕೊರತೆಯೇ ಇರುವುದಿಲ್ಲ


ಸಿಂಹ ರಾಶಿ:   
ಸಿಂಹ ರಾಶಿಯವರು ಇಂದು ಜೀವನದಲ್ಲಿ ಪ್ರಮುಖವಾದ ಏನನ್ನಾದರೂ ಸಾಧಿಸುವಿರಿ. ಉದ್ಯೋಗ ಕ್ಷೇತ್ರವು ನಿಮಗೆ ಅನುಕೂಲಕರವಾಗಿರಲಿದೆ. ನಿಮ್ಮ ಯಾವುದೇ ಕೆಲಸದಲ್ಲಿ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ದೊರೆಯಲಿದೆ, ಅಧಿಕಾರಿಗಳಿಂದ ಮನ್ನಣೆಗೆ ಪಾತ್ರರಾಗುವಿರಿ. 


ಕನ್ಯಾ ರಾಶಿ: 
ಕನ್ಯಾ ರಾಶಿಯವರಿಗೆ ಇದು ಆತ್ಮವಿಶ್ವಾಸದಿಂದ ತುಂಬಿದ ದಿನ. ನಿಮ್ಮ ಜೀವನದಲ್ಲಿ ದೀರ್ಘಕಾಲದ ಸಮಸ್ಯೆಗಳಿಗೆ ಇಂದು ಪರಿಹಾರ ಕಾಣಬಹುದು. ಸಾಕಾರಾತ್ಮಕ ಚಿಂತನೆಯಿಂದ ಮುಂದುವರೆಯುವುದರಿಂದ ಯಶಸ್ಸು, ಪ್ರಗತಿಯನ್ನು ಕಾಣಬಹುದು. 


ತುಲಾ ರಾಶಿ:  
ತುಲಾ ರಾಶಿಯವರು ಇಂದು ರೊಮ್ಯಾಂಟಿಕ್ ಸಂಜೆಯನ್ನು ಆನಂದಿಸುವಿರಿ. ಪ್ರೀತಿ ಪ್ರೇಮದಲ್ಲಿರುವವರು ಕೆಲವು ಸಣ್ಣಪುಟ್ಟ ಸವಾಲುಗಳನ್ನು ಎದುರಿಸಬೇಕಾಗಬಹುದು. ಆದಾಗ್ಯೂ, ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯ ಕಳೆಯುವುದು ಮನಸ್ಸಿಗೆ ಮುದ ನೀಡುತ್ತದೆ. ಉದ್ಯೋಗ ರಂಗದಲ್ಲಿಯೂ ನಿರೀಕ್ಷಿತ ಫಲಿತಾಂಶ ಪಡೆಯಬಹುದು. 


ವೃಶ್ಚಿಕ ರಾಶಿ:   
ವೃಶ್ಚಿಕ ರಾಶಿಯವರು ಇಂದು ನಿಮ್ಮ ವೃತ್ತಿ ಬದುಕಿನಲ್ಲಿ ಹೊಸ ಎತ್ತರವನ್ನು ಮುಟ್ಟುವಿರಿ. ದೀರ್ಘಕಾಲಿನ ಗುರಿಗಳ ಮೇಲೆ ಗಮನ ಕೇಂದ್ರೀಕರಿಸಲು ಇಂದು ಅತ್ಯುತ್ತಮ ದಿನ. ನಿಮ್ಮ ಕಠಿಣ ಪರಿಶ್ರಮದ ಫಲವನ್ನು ಅನುಭವಿಸುವಿರಿ. ಆರೋಗ್ಯವೂ ಉತ್ತಮವಾಗಿರಲಿದೆ. 


ಇದನ್ನೂ ಓದಿ- Vastu Tips: ಮನೆಯಲ್ಲಿರುವ ಈ ಗಿಡಗಳು ದುರಾದೃಷ್ಟದ ಜೊತೆಗೆ ಕುಟುಂಬದ ಸಂತಸವನ್ನೇ ಕಸಿಯುತ್ತವೆ!


ಧನು ರಾಶಿ:  
ಧನು ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಇಂದು ಅತ್ಯುತ್ತಮ ದಿನ. ಅನಿರೀಕ್ಷಿತ ಸಂಪರ್ಕಗಳು ಭವಿಷ್ಯದಲ್ಲಿ ಒಳ್ಳೆಯ ಲಾಭವನ್ನು ತಂದುಕೊಡುವ ನಿರೀಕ್ಷೆಯಿದೆ. ಸಾಲಗಳಿಂದ ಮುಕ್ತಿ ದೊರೆತು ಕೌಟುಂಬಿಕ ಆನಂದವನ್ನು ಅನುಭವಿಸುವಿರಿ. ಹೊಸ ಭೂಮಿ ಖರೀದಿಗೆ ಶುಭ ದಿನ. 


ಮಕರ ರಾಶಿ:  
ಮಕರ ರಾಶಿಯವರಿಗೆ ಪ್ರೀತಿಯ ಜೀವನ ಉತ್ತಮವಾಗಿರಲಿದೆ. ಹೂಡಿಕೆಯಿಂದ ಲಾಭವನ್ನು ಕಾಣುವಿರಿ. ವಿದ್ಯಾರ್ಥಿಗಳು ಅಧ್ಯಯನದ ಕಡೆ ಗಮನ ಹಾರಿಸಬೇಕು. ಇಲ್ಲದಿದ್ದರೆ, ಸವಾಲುಗಳನ್ನು ಎದುರಿಸಬೇಕಾಗಬಹುದು. 


ಕುಂಭ ರಾಶಿ:  
ಕುಂಭ ರಾಶಿಯವರಿಗೆ ಹನುಮಂತ ಕೃಪೆ ಇದ್ದು ನಿಮ್ಮ ಅದೃಷ್ಟವೇ ಬದಲಾಗುವ ಸಮಯ. ಕೆಲವು ಪ್ರಮುಖ ಯೋಜನೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಇದು ಸುಧೀನ. ಆರೋಗ್ಯವೂ ಉತ್ತಮವಾಗಿರುತ್ತದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳ್ಳೆಯದು. 


ಮೀನ ರಾಶಿ:  
ಮೀನ ರಾಶಿಯವರು ಇಂದು ಸಂಬಂಧಗಳಲ್ಲಿ ಏರಿಳಿತವನ್ನು ಕಾಣಬಹುದು. ಅತಿಯಾದ ಮಾತು ನಿಮ್ಮನ್ನು ದುಃಖಕ್ಕೆ ದೂಡಬಹುದು. ಹಾಗಾಗಿ, ಜಾಗರೂಕರಾಗಿರಿ. ನಿಮ್ಮ ಭಾವನೆಗಳನ್ನು ಬೇರೆಯವರ ಮುಂದೆ ವ್ಯಕ್ತಪಡಿಸುವ ಮೊದಲು ಅವರೊಂದಿಗೆ ಯಾವ ವಿಷಯಗಳನ್ನು ಹಂಚಿಕೊಳ್ಳಬೇಕು ಎಂಬುದನ್ನು ಒಮ್ಮೆ ಯೋಚಿಸಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.