Guruvara Dina Bhavishya In Kannada: ವೈಶಾಖ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ಈ ದಿನ ಗುರುವಾರ ರೋಹಿಣಿ ನಕ್ಷತ್ರದಂದು ಶನಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಇಂದು ಧೃತಿ ಯೋಗ ಇರಲಿದ್ದು, ಈ ದಿನ ಯಾವ ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಶನಿ ಜಯಂತಿ, ಧೃತಿ ಯೋಗದ ಫಲವಾಗಿ ಮೇಷ ರಾಶಿಯವರಿಗೆ ಇಂದು ಹಣಕಾಸಿನ ಲಾಭಗಳ ಜೊತೆಗೆ ನಿಮ್ಮ ಖ್ಯಾತಿ ಕೂಡ ಹೆಚ್ಚಾಗಲಿದೆ. ಯಾವುದೇ ಕೆಲಸದಲ್ಲಿ ನಿಮ್ಮ ತಂಡದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಸಂಪೂರ್ಣ ಗಮನ ಹರಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ವೃಷಭ ರಾಶಿಯವರಿಗೆ ಧೃತಿ ಯೋಗ ಲಾಭದಾಯಕವಾಗಿದೆ. ಇಂದು ವ್ಯವಹಾರದಲ್ಲಿ ನಿಮ್ಮ ಕುಟುಂಬಸ್ಥರ ಸಂಪೂರ್ಣ ಬೆಂಬಲವನ್ನು ನೀವು ಪಡೆಯಲಿದ್ದೀರಿ. ವ್ಯಾಪಾರಸ್ಥರು ಮಿಶ್ರ ಫಲವನ್ನು ಪಡೆಯುವಿರಿ. ಆರೋಗ್ಯದ ದೃಷ್ಟಿಯಿಂದಲೂ ದಿನ ತುಂಬಾ ಚೆನ್ನಾಗಿದೆ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಮಿಥುನ ರಾಶಿಯವರೇ ವ್ಯವಹಾರದಲ್ಲಿ ಸರಿಯಾದ ಸಮಯಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳದೆ ಇದ್ದರೆ ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು. ವ್ಯಾಪಾರ ವರ್ಗವು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸರಕುಗಳನ್ನು ಸಂಗ್ರಹಿಸಬೇಕು. ಅಸ್ತಮಾ ರೋಗಿಗಳು ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಅಗತ್ಯ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಕರ್ಕಾಟಕ ರಾಶಿಯ ಜನರು ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ ಈಗಿನಿಂದಲೇ ಯೋಜನೆಯನ್ನು ರೂಪಿಸುವುದು ಒಲೆಲ್ಯದು. ಉದ್ಯೋಗಸ್ಥರು ಪರಿಶ್ರಮಕ್ಕೆ ತಕ್ಕ ಫಲ ಪಡೆಯುವರು. ಜೀವನದ ಪ್ರತಿ ತಿರುವಿನಲ್ಲಿಯೂ ನಿಮ್ಮ ಸಂಗಾತಿಯ ಬೆಂಬಲವನ್ನು ನೀವು ಪಡೆಯುತ್ತೀರಿ. 


ಇದನ್ನೂ ಓದಿ- Shani Jayanti: ಇಂದಿನಿಂದ ಈ ರಾಶಿಯವರ ಭಾಗ್ಯವೇ ಬದಲು, ಅಷ್ಟೈಶ್ವರ್ಯ ಪ್ರಾಪ್ತಿ


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಸಿಂಹ ರಾಶಿಯ ಉದ್ಯಮಿಗಳು ಆಸ್ತಿಯಲ್ಲಿ ಹೂಡಿಕೆ ಮಾಡಲು ಯೋಜಿಸಬಹುದು. ಶನಿ ದೇವನ ಆಶೀರ್ವಾದದಿಂದಾಗಿವ್ ಉದ್ಯೋಗಸ್ಥರಿಗೆ ಒಳ್ಳೆಯ ದಿನ. ಜೀವನ ಸಂಗಾತಿಯ ಮಹತ್ವವನ್ನು ಅರ್ಥಮಾಡಿಕೊಳ್ಳಿ, ಅವರ ಭಾವನೆಗಳನ್ನು ಗೌರವಿಸುವುದರಿಂದ ಒಳ್ಳೆಯದಾಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಕನ್ಯಾ ರಾಶಿಯವರಿಗೆ ಶನಿ ಜಯಂತಿಯಂದು ಶನಿ ದೇವನ ವಿಶೇಷ ಆಶೀರ್ವಾದ ಪ್ರಾಪ್ತಿಯಾಗಲಿದೆ. ಇಂದು ನಿಮ್ಮ ಹಳೆಯ ವ್ಯವಹಾರದಲ್ಲಿ ಬಂಪರ್ ಲಾಭವನ್ನು ನಿರೀಕ್ಷಿಸಬಹುದು. ವ್ಯಾಪಾರಿಗಳು ತಮ್ಮ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಾರೆ. ವೈವಾಹಿಕ ಜೀವನ ಉತ್ತಮವಾಗಿರುತ್ತದೆ. 


ತುಲಾ ರಾಶಿಯವರ ಭವಿಷ್ಯ (Libra Horoscope): 
ತುಲಾ ರಾಶಿಯವರೇ ಸರಿಯಾಗಿ ತಿಳಿಯದೆ ವ್ಯವಹಾರದಲ್ಲಿ ಕೈ ಹಾಕುವುದು ನಿಮಗೆ ನಷ್ಟ ಉಂಟು ಮಾಡಬಹುದು. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಪಾವತಿಸಬೇಕಾಗಬಹುದು.  ನಕಾರಾತ್ಮಕ ಆಲೋಚನೆಗಳು ಸಾಮಾಜಿಕ ಮಟ್ಟದಲ್ಲಿ ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಶನಿ ಜಯಂತಿ, ಧೃತಿ ಯೋಗದ ಫಲವಾಗಿ ವೃಶ್ಚಿಕ ರಾಶಿಯ ಉದ್ಯೋಗಸ್ಥರಿಗೆ ಉತ್ತಮ ಫಲಿತಾಂಶ ಪ್ರಾಪ್ತಿಯಾಗಲಿದೆ. ಕುಟುಂಬದೊಂದಿಗೆ ಕೆಲವು ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳಬಹುದು. ಸಾಮಾಜಿಕ ಮತ್ತು ರಾಜಕೀಯ ಮಟ್ಟದಲ್ಲಿ ನಿಮ್ಮ ಕುಟುಂಬಕ್ಕೆ ಕೀರ್ತಿ ತರುತ್ತೀರಿ. ಪ್ರತಿ ಕೆಲಸದಲ್ಲಿ ಜೀವನ ಸಂಗಾತಿಯಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.


ಇದನ್ನೂ ಓದಿ- ಗುರು ಉದಯದಿಂದ ಕುಬೇರ ಯೋಗ : ಈ ರಾಶಿಗಳಿಗೆ ಹಣದ ಸುರಿಮಳೆ, ವೃತ್ತಿಯಲ್ಲಿ ಪ್ರಗತಿ.. ಸಂಪತ್ತಿನ ಸುರಿಮಳೆ, ಪ್ರತಿ ಕೆಲಸದಲ್ಲೂ ಹಿಂಬಾಲಿಸುವುದು ಅದೃಷ್ಟ !


ಧನು ರಾಶಿಯವರ ಭವಿಷ್ಯ (Sagittarius Horoscope):  
ಧನು ರಾಶಿಯ ಜನರು ಇಂದು ವ್ಯಾಪಾರದಲ್ಲಿ ಲಾಭವನ್ನು ಪಡೆಯುತ್ತೀರಿ. ನಿಮ್ಮ ವ್ಯಾಪಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಹೂಡಿಕೆ ಮಾಡಲು ಶುಭ ದಿನ. ಆದಾಗ್ಯೂ, ನಕಾರಾತ್ಮಕ ಆಲೋಚನೆಗಳು ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು, ಆದ್ದರಿಂದ ನಿಮ್ಮ ಮನಸ್ಸಿನಲ್ಲಿ ಯಾರ ಬಗ್ಗೆಯೂ ಕೀಳರಿಮೆ ಬೆಳೆಯಲು ಬಿಡಬೇಡಿ.


ಮಕರ ರಾಶಿಯವರ ಭವಿಷ್ಯ (Capricorn Horoscope):  
ಮಕರ ರಾಶಿಯ ನಿರುದ್ಯೋಗಿಗಳು ನೀವು ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಇದಕ್ಕಾಗಿ ತಯಾರಿಯಲ್ಲಿ ಕೊರತೆಯಾಗದಂತೆ ನಿಗಾವಹಿಸಿ. ಕುಟುಂಬದಲ್ಲಿ ಯಾರೊಂದಿಗಾದರೂ ಹಳೆಯ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ. ವ್ಯಾಪಾರ ವರ್ಗವನ್ನು ಮರಳಿ ಟ್ರ್ಯಾಕ್‌ಗೆ ತರಲು ಯೋಜನೆಯನ್ನು ರೂಪಿಸಲು ಶುಭ ಸಮಯ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಕುಂಭ ರಾಶಿಯ ವ್ಯಾಪಾರ ವರ್ಗಾವು ಇಂದು ಜಾಗರೂಕರಾಗಿರಬೇಕು. ಮಾರುಕಟ್ಟೆಯಲ್ಲಿ ಸ್ಪರ್ಧಿಗಳು ನಿಮ್ಮ ವಿರುದ್ಧ ಪಿತೂರಿ ನಡೆಸಬಹುದು. ಉದ್ಯೋಗ ಕ್ಷೇತ್ರದಲ್ಲಿ ಪದೇ ಪದೇ ಮಾಡುವ ತಪ್ಪುಗಳಿಂದಾಗಿ ನೀವು ಸಮಸ್ಯೆಯ ಸುಳಿಯಲ್ಲಿ ಸಿಲುಕಬಹುದು. ಕುಟುಂಬದಲ್ಲಿನ ಕೆಲವು ಸಮಸ್ಯೆಗಳಿಂದ ನೀವು ಚಿಂತಿತರಾಗಿರುತ್ತೀರಿ.


ಮೀನ ರಾಶಿಯವರ ಭವಿಷ್ಯ (Pisces Horoscope): 
ಮೀನ ರಾಶಿಯವರಿಗೆ ಧೃತಿ ಯೋಗದಿಂದಾಗಿ ವ್ಯವಹಾರದಲ್ಲಿ ಪ್ರಗತಿ ಕಂಡು ಬರಲಿದೆ. ವ್ಯಾಪಾರಿಗಳು ತಮ್ಮ ವ್ಯವಹಾರದ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಳ್ಳಬೇಕು. ಆಗಷ್ಟೇ ನಿಮ್ಮ ನಿರೀಕ್ಷೆಗೆ ತಕ್ಕಂತೆ ಲಾಭವನ್ನು ಗಳಿಸಬಹುದು. ಕುಟುಂಬದಲ್ಲಿ ನಿಮ್ಮ ಹಿರಿಯರ ಆರೋಗ್ಯ ಸುಧಾರಿಸಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.