Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಗುರುವಾರದ ಈ ದಿನ ಜ್ಯೇಷ್ಠಾ ನಕ್ಷತ್ರ, ವೈಧೃತಿ ನಕ್ಷತ್ರ ಇರಲಿದ್ದು, ನಿಮ್ಮ ರಾಶಿಗೆ ದಿನ ಹೇಗಿದೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಹಣಕಾಸಿಗೆ ಸಂಬಂಧಿಸಿದಂತೆ ಇಂದು ಸಾಮಾನ್ಯ ದಿನ. ಮಾರ್ಕೆಟಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ಅನುಕೂಲಕರವಾದ ದಿನ. ಇಂದು ನೀವು ನಿಮ್ಮ ವ್ಯಾಪಾರವನ್ನು ಮುಂದಕ್ಕೆ ಕೊಂಡೊಯ್ಯಲು ವಿಸ್ತರಣೆ ಯೋಜನೆಗಳನ್ನು ರೂಪಿಸಬಹುದು. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ನಿಮ್ಮ ಖರ್ಚುಗಳಿಗೆ ಕಡಿವಾಣ ಹಾಕುವುದನ್ನು ಪರಿಗಣಿಸಿ. ಪೂರ್ವಜರ ಆಸ್ತಿಯಿಂದ ಲಾಭವಾಗಲಿದೆ. ನಿರೀಕ್ಷೆಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿ ಕೆಲಸದಲ್ಲಿ ಯಶಸ್ಸನ್ನು ಗಳಿಸುವಿರಿ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಈ ರಾಶಿಯ ವ್ಯಾಪಾರಸ್ಥರಿಗೆ ಇಂದು ವಿಶೇಷವಾದ ದಿನ. ನಿಮ್ಮ ವ್ಯವಹಾರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಕೆಲಸದ ಸ್ಥಳದಲ್ಲಿ ತ್ವರಿತ ಬದಲಾವಣೆಗಳನ್ನು ನೋಡುತ್ತೀರಿ. ಭವಿಷ್ಯದಲ್ಲಿ ಇದು ಅನುಕೂಲಕರ ಫಲಗಳನ್ನು ನೀಡಲಿದೆ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಈ ರಾಶಿಯವರಿಗೆ ಇಂದು ಆರ್ಥಿಕ ಸಮೃದ್ಧಿ ಕಂಡು ಬರಲಿದೆ. ಹಣದ ಮೂಲಗಳು ಹೆಚ್ಚಾಗುವುದರಿಂದ ಸಾಲದಿಂದ ಪರಿಹಾರ ಪಡೆಯುವಿರಿ. ಹೂಡಿಕೆ ಮಾಡಲು ಇಂದು ಉತ್ತಮ ದಿನ. ಆದಾಗ್ಯೂ, ಅನಾವಶ್ಯಕವಾಗಿ ಬೇರೆಯವರ ವಿಚಾರಗಳಲ್ಲಿ ಮೂಗು ತೂರಿಸುವುದನ್ನು ತಪ್ಪಿಸಿ. 


ಇದನ್ನೂ ಓದಿ- Pearls Astrology: ಈ ರಾಶಿಯವರು ಮುತ್ತನ್ನು ಧರಿಸಿದರೆ ಸಮಸ್ಯೆಗಳ ಸರಮಾಲೆಯೇ ಎದುರಾಗುತ್ತೆ!


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಕಷ್ಟಪಟ್ಟು ಕೆಲಸ ಮಾಡುವುದರಿಂದ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಹೂಡಿಕೆಯಿಂದ ಲಾಭವಾಗಲಿದೆ.. ವ್ಯವಹಾರಸ್ಥರಿಗೆ ಏಳ್ಗೆಯ ದಿನ. ಯಾವುದಾದರೂ ದೊಡ್ಡ ಯೋಜನೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ನೀವು ಇಂದು ನಿಮ್ಮ ತಂದೆ ಅಥವಾ ಅನುಭವಿ ವ್ಯಕ್ತಿಯಿಂದ ಸಲಹೆಯನ್ನು ಪಡೆದು ಮುಂದುವರೆಯುವುದರಿಂದ ಶುಭ ಫಲಗಳನ್ನು ನಿರೀಕ್ಷಿಸಬಹುದು. ನಿಮ್ಮ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀವು ಕಾಪಾಡಿಕೊಳ್ಳುತ್ತೀರಿ.


ತುಲಾ ರಾಶಿಯವರ ಭವಿಷ್ಯ (Libra Horoscope): 
ಈ ದಿನವು ನಿಮಗೆ ತುಂಬಾ ವಿಶೇಷವಾಗಿದೆ. ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಕಠಿಣ ಪರಿಶ್ರಮದ ಹೊರತಾಗಿಯೂ ನಿರೀಕ್ಷಿತ ಫಲ ದೊರೆಯದೆ ಇರಬಹುದು. ಆದರೆ ತಾಳ್ಮೆಯಿಂದ ಇರುವುದನ್ನು ರೂಢಿಸಿಕೊಳ್ಳಿ. ವಾಬ್ದಾರಿಯುತ ವ್ಯಕ್ತಿಗಳಿಂದ ಸಲಹೆ ಪಡೆಯಿರಿ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಹಣಕಾಸಿನ ದೃಷ್ಟಿಯಿಂದ ಇಂದು ತುಂಬಾ ಶುಭಕರವಾಗಿದೆ. ಇಂದು ಉತ್ತಮ ಪ್ರಮಾಣದ ಆದಾಯವನ್ನು ಪಡೆಯುತ್ತೀರಿ ಅದು ನಿಮಗೆ ಮಾನಸಿಕ ಒತ್ತಡದಿಂದ ಪರಿಹಾರವನ್ನು ನೀಡುತ್ತದೆ. ಸಮಾಜದಲ್ಲಿ ನಿಮ್ಮ ಕೀರ್ತಿ, ಪ್ರತಿಷ್ಠೆ ಹೆಚ್ಚಾಗಲಿದೆ. 


ಇದನ್ನೂ ಓದಿ- ಸೂರ್ಯ ರಾಶಿ ಪರಿವರ್ತನೆ: ಲಕ್ಷ್ಮೀ ನಾರಾಯಣ,  ಬುಧಾದಿತ್ಯ, ಶುಕ್ರಾದಿತ್ಯ ರಾಜಯೋಗದಿಂದ ಸೂರ್ಯನಂತೆಯೇ ಪ್ರಜ್ವಲಿಸಲಿದೆ ಈ ರಾಶಿಯವರ ಭವಿಷ್ಯ 


ಧನು ರಾಶಿಯವರ ಭವಿಷ್ಯ (Sagittarius Horoscope):  
ವ್ಯವಹಾರದಲ್ಲಿ ಪಾಲುದಾರಿಕೆಯನ್ನು ಹೊಂದಲು ನೀವು ಬಯಸಿದರೆ ಇಂದು ನಿಮಗೆ ಅತ್ಯಂತ ಮಂಗಳಕರ ದಿನವಾಗಿರುತ್ತದೆ.  ನಿಮ್ಮ ಕೆಲಸದ ಸ್ಥಳದಲ್ಲಿ ಬಹಳ ತ್ವರಿತ ಬದಲಾವಣೆಗಳಾಗಬಹುದು. ಹಣದ ಒಳಹರಿವು ಹೆಚ್ಚಾಗಿ ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಆರ್ಥಿಕ ದೃಷ್ಟಿಯಿಂದ ಇಂದು ಉತ್ತಮ ದಿನವಾಗಲಿದೆ.  ಉತ್ತಮ ಆದಾಯದಿಂದ ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯುತ್ತೀರಿ. ಇಂದು ಹೂಡಿಕೆಗಳಿಂದ ದೂರವಿದ್ದರೆ ಒಳಿತು. ನಿಮ್ಮ ಖರ್ಚುಗಳು ಇದ್ದಕ್ಕಿದ್ದಂತೆ ಹೆಚ್ಚಾಗಬಹುದು, ಆದರೆ ಭಯಪಡುವ ಅಗತ್ಯವಿಲ್ಲ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ನೀವು ಇಂದು ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಈ ಸಂದರ್ಭದಲ್ಲಿ ತಾಳ್ಮೆಯಿಂದ ಇರುವುದು ಒಳ್ಳೆಯದು. ನಿಮ್ಮ ಶ್ರಮವು ಸಂಜೆಯ ಹೊತ್ತಿಗೆ ಫಲ ನೀಡುತ್ತದೆ. ಪ್ರಮುಖ ಕೆಲಸಗಳಲ್ಲಿ ನೀವು ಎಲ್ಲರ ಬೆಂಬಲವನ್ನು ಪಡೆಯುತ್ತೀರಿ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ನೀವು ವೃತ್ತಿ ರಂಗದಲ್ಲಿ  ನೀವು ಬಯಸಿದ ಯಶಸ್ಸನ್ನು ಪಡೆಯದಿರಬಹುದು. ಆದರೆ, ನಿರಾಶೆಗೊಳ್ಳುವ ಅಗತ್ಯವಿಲ್ಲ. ಯಾವುದೇ ದೊಡ್ಡ ಕೆಲಸವನ್ನು ಮಾಡುವ ಮೊದಲು ನಿಮ್ಮ ಮನೆಯಲ್ಲಿ ಹಿರಿಯರ ಆಶೀರ್ವಾದವನ್ನು ತೆಗೆದುಕೊಳ್ಳಬೇಕು. ನಿಮ್ಮ ಖರ್ಚುಗಳ ಹೆಚ್ಚಳವು ನಿಮ್ಮ ಆರ್ಥಿಕ ಸ್ಥಿತಿಯನ್ನು ಹದಗೆಡಿಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.