Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ ಶರದ್ ಋತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿಯ ಈ ದಿನ ಗುರುವಾರ, ಪೂ.ಷಾ. ನಕ್ಷತ್ರ, ಅತಿಗಂಡ ಯೋಗ, ವಿಷ್ಟಿ ಕರಣ ನಿಮ್ಮ ರಾಶಿಗೆ ಹೇಗಿದೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ನಿಮಗಿಂದು ಸಾಮಾನ್ಯ ದಿನ. ಒಮ್ಮೆಗೆ ಹಲವು ಕೆಲಸಗಳನ್ನು ಮಾಡಬೇಕಾಗಬಹುದು. ಹಾಗಾಗಿ ಒತ್ತಡಭರಿತ ದಿನ. ಯಾವುದೇ ವಿಚಾರದಲ್ಲಿ ಅದೃಷ್ಟದ ಮೇಲೆ ಅವಲಂಬಿತರಾಗದೆ ಪ್ರಯತ್ನಿಸಿದರೆ ಅಷ್ಟೇ ಶುಭ. ಕೌಟುಂಬಿಕ ಸಮಸ್ಯೆಗಳ ಬಗ್ಗೆ ಚಿಂತೆ ಕಡಿಮೆಯಾಗಲಿದೆ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ನಿಮಗೆ ಇಂದು ಚಿಂತನಶೀಲವಾದ ದಿನ. ಅಪರಿಚಿತರಾ ಬಗ್ಗೆ ಎಚ್ಚರಿಕೆಯಿಂದ ಇರಿ. ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಗಳಿದ್ದಲ್ಲಿ ನಿರ್ಲಕ್ಷಿಸಬೇಡಿ. ನಿಮ್ಮ ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ಸಂತೋಷ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದಲ್ಲಿ ಇಂದು ಪರಿಹಾರ ಪಡೆಯಬಹುದು. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಆಸ್ತಿ ಸಂಬಂಧಿತ ವಿಚಾರಗಳಿಗೆ ಸಂಬಂಧಿಸಿದಂತೆ ಅತ್ಯುತ್ತಮವಾದ ದಿನ. ವ್ಯವಹಾರದಲ್ಲಿ ಉತ್ತಮ ಲಾಭವಿರಲಿದೆ. ಹೊಸ ಕೆಲಸ ಪ್ರಾರಂಭಿಸಲು ಯೋಚಿಸುವವರಿಗೆ ಶುಭವಾಗಲಿದೆ. ಕೆಲಸದಲ್ಲಿ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಈ ರಾಶಿಯ ವ್ಯಾಪಾರಸ್ಥರಿಗೆ ಉತ್ತಮ ದಿನ. ವ್ಯಾಪಾರದಲ್ಲಿ ಸುಧಾರಣೆಯಿಂದ ಮನಸ್ಸಿಗೆ ಸಂತೋಷ. ಮಕ್ಕಳ ಪ್ರಗತಿ, ವಿದೇಶದಲ್ಲಿ ಅಧ್ಯಯನಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಗುಡ್ ನ್ಯೂಸ್ ಸಿಗಲಿದೆ. ನಿಮ್ಮ ಸಂಗಾತಿ ಉದ್ಯೋಗದಲ್ಲಿದ್ದಾರೆ ಬಡ್ತಿ ಸಂಭವವಿದೆ. 


ಇದನ್ನೂ ಓದಿ- ಗುರು ಶುಕ್ರ ಮೈತ್ರಿಯಿಂದ ಸಂಸಪ್ತಕ ರಾಜಯೋಗ, ಈ ರಾಶಿಯವರಿಗೆ ಹಣಕ್ಕಿಲ್ಲ ಕೊರತೆ, ಮುಟ್ಟಿದ್ದೆಲ್ಲಾ ಬಂಗಾರ


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಸಮಾಜದಲ್ಲಿ ಇಂದು ನಿಮ್ಮ ಗೌರವ ಹೆಚ್ಚಾಗಲಿದೆ. ಶುಭ ಸುದ್ದಿಗಳು ಕೇಳಿಬರಲಿವೆ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಪ್ರತಿಷ್ಠೆ ಹೆಚ್ಚಾಗಲಿದೆ. ಪ್ರಗತಿಯ ಹೊಸ ಹಾದಿಗಳು ತೆರೆಯಲಿವೆ. ನಿಮ್ಮ ಕೆಲವು ಕೆಲಸಗಳು ಅಪೂರ್ಣವಾಗಿ ಉಳಿಯಬಹುದು, ಈ ಬಗ್ಗೆ ಯೋಚಿಸುವ ಅಗತ್ಯವಿಲ್ಲ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಈ ರಾಶಿಯವರಿಗೆ ಇಂದು ಐಷಾರಾಮಿ ಬದುಕು. ನಿಮ್ಮ ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ವಿದ್ಯಾರ್ಥಿಗಳು ಅಧ್ಯಯನ ಮತ್ತು ಬರವಣಿಗೆಯಲ್ಲಿ ಉತ್ತಮ ಪ್ರಾವೀಣ್ಯತೆಯನ್ನು ಸಾಧಿಸಬಹುದು. ಆದಾಗ್ಯೂ, ನಿಮ್ಮ ಖರ್ಚುಗಳ ಬಗ್ಗೆ ನೀವು ಗಮನ ಹರಿಸಬೇಕು. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ಮಿಶ್ರ ಫಲಪ್ರದವಾದ ದಿನ. ಬೇರೆಯವರ ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಿ. ನಿಮ್ಮ ಕೆಲಸದಲ್ಲಿ ಪೋಷಕರು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಸ್ವಲ್ಪ ಒತ್ತಡಭರಿತವಾದ ದಿನ. ನಿಮ್ಮ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸಿ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ನಿಮಗಿಂದು ಶುಭ ದಿನ. ಕುಟುಂಬ ಸದಸ್ಯರೊಂದಿಗೆ ಸುಂದರ ಕ್ಷಣಗಳನ್ನು ಆನಂದಿಸುವಿರಿ. ಉದ್ಯೋಗಕ್ಕಾಗಿ ಯತ್ನಿಸುತ್ತಿರುವವರಿಗೆ ಶುಭ ಸುದ್ದಿ ಕೇಳಿ ಬರಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದತ್ತ ನಿಗಾವಹಿಸಿ. ವ್ಯಾಪಾರಸ್ಥರು ಸ್ವಲ್ಪ ಜಾಗರೂಕರಾಗಿರಬೇಕು. 


ಇದನ್ನೂ ಓದಿ- ಮನೆಯಲ್ಲಿ ಈ ನಿಯಮಗಳನ್ನು ಪಾಲಿಸಿದರೆ ಸದಾ ಇರುತ್ತೆ ಸಂಪತ್ತಿನ ಅಧಿದೇವತೆ ತಾಯಿ ಲಕ್ಷ್ಮಿ ಆಶೀರ್ವಾದ


ಧನು ರಾಶಿಯವರ ಭವಿಷ್ಯ (Sagittarius Horoscope):  
ನಿಮ್ಮ ಕೆಲಸದ ಬಗ್ಗೆ ಸಂಪೂರ್ಣ ಗಮನಹರಿಸಿ. ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ತಮ್ಮ ನಡವಳಿಕೆಯಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಬೇಕು. ಪ್ರೇಮ ಜೀವನದಲ್ಲಿರುವವರು ಈ ಬಗ್ಗೆ ನಿಮ್ಮ ಮನೆಯವರೊಂದಿಗೆ ಮಾತನಾಡಿ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಹಣಕಾಸಿನ ದೃಷ್ಟಿಯಿಂದ ಉತ್ತಮ ದಿನ. ಮಹತ್ವದ ಕೆಲಸಗಳು ಇಂದು ಪೂರ್ಣಗೊಳ್ಳಬಹುದು. ಯಾವುದೇ ಕೆಲಸದ ಬಗ್ಗೆ ಸೋಮಾರಿಯಾಗುವುದರಿಂದ ನಿಮಗೆ ಹೆಚ್ಚು ವೆಚ್ಚವಾಗಬಹುದು. ನಿಮ್ಮ ತಂದೆಯಿಂದ ಆಸ್ತಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿಚಾರಗಳು ಬಗೆಹರಿಯಲಿವೆ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ಲಾಭದಾಯಕ ದಿನ. ಕಾನೂನು ವಿಷಯದಲ್ಲಿ ಗೆಲ್ಲುವ ಸಾಧ್ಯತೆಯಿದೆ. ಕೆಲಸದಲ್ಲಿ ಅಪಾಯ ತೆಗೆದುಕೊಳ್ಳುವುದು ಲಾಭದಾಯಕವಾಗಬಹುದು. ನಿಮ್ಮ ಸಂಗಾತಿಯನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗಬಹುದು. ನಿಮ್ಮ ಕುಟುಂಬ ಸದಸ್ಯರ ಭಾವನೆಗಳನ್ನು ನೀವು ಗೌರವಿಸಬೇಕು.


ಮೀನ ರಾಶಿಯವರ ಭವಿಷ್ಯ (Pisces Horoscope): 
ಕೆಲಸದ ಸ್ಥಳದಲ್ಲಿ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ನೀವು ಉದ್ವಿಗ್ನತೆಯನ್ನು ಹೊಂದಿರುತ್ತೀರಿ. ನೀವು ಯಾವುದೇ ವಿಷಯದಲ್ಲಿ ಅನಾವಶ್ಯಕವಾಗಿ ಮಾತನಾಡುವುದನ್ನು ತಪ್ಪಿಸಬೇಕಾಗುತ್ತದೆ. ಇಲ್ಲದಿದ್ದರೆ, ಅದರಿಂದಲೇ ನಿಮ್ಮ ಸಮಸ್ಯೆಗಳು ಹೆಚ್ಚಾಗಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.