Bathroom Vastu Remedies: ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರದಂತೆಯೇ, ವಾಸ್ತು ಶಾಸ್ತ್ರಕ್ಕೂ ಹೆಚ್ಚಿನ ಮಹತ್ವವಿದೆ. ವಾಸ್ತು ಶಾಸ್ತ್ರದಲ್ಲಿ ಮನೆಯ ಅಡುಗೆ ಮನೆ, ದೇವರ ಮನೆ, ಮಲಗುವ ಕೋಣೆಗೆ ಇರುವಂತೆಯೇ ಸ್ನಾನ ಗೃಹದ ಬಗ್ಗೆಯೂ ಕೆಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ. ವಾಸ್ತು ಪ್ರಕಾರ, ಮನೆಯಲ್ಲಿ ಸ್ನಾನಗೃಹವಿರುವ ದಿಕ್ಕು ಹಾಗೂ ಸ್ನಾನಗೃಹದಲ್ಲಿರುವ ವಸ್ತುಗಳು ವ್ಯಕ್ತಿಯ ಅದೃಷ್ಟದ ಮೇಲೆ ಬಹಳ ಮಹತ್ವದ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗುತ್ತದೆ. ವಾಸ್ತು ಪ್ರಕಾರ, ಮನೆಯ ಬಾತ್ ರೂಂನಲ್ಲಿರುವ ವಸ್ತುಗಳು ವ್ಯಕ್ತಿಯ ಅದೃಷ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ತಿಳಿಯಿರಿ.


COMMERCIAL BREAK
SCROLL TO CONTINUE READING

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಬಾತ್ ರೂಂನಲ್ಲಿಟ್ಟ ಬಕೆಟ್ ಖಾಲಿ ಇದ್ದರೆ ಅದು ವ್ಯಕ್ತಿಯನ್ನು ಆರ್ಥಿಕ ಬಿಕ್ಕಟ್ಟಿನಲ್ಲಿ ತೊಳಲಾಡುವಂತೆ ಮಾಡುತ್ತದೆ. ಅಂತೆಯೇ ಸ್ನಾನಗೃಹದಲ್ಲಿರುವ ಬಕೆಟ್ ಖಾಲಿ ಇದ್ದಾರೆ ಅದನ್ನು ಅತ್ಯಂತ ಅಶುಭಕರ ಮತ್ತು ಇದು ವ್ಯಕ್ತಿಯನ್ನು ಬಡವನನ್ನಾಗಿಸುತ್ತದೆ ಎಂದೂ ಕೂಡ ಹೇಳಲಾಗುತ್ತದೆ. ಇದರೊಂಗ್ದಿಗೆ ಸ್ನಾನ ಗೃಹದಲ್ಲಿ ಯಾವ ಬಣ್ಣದ ಬಕೆಟ್ ಇಡಬೇಕು ಎಂಬ ಬಗ್ಗೆಯೂ ವಾಸ್ತುವಿನಲ್ಲಿ ಸಲಹೆ ನೀಡಲಾಗಿದೆ.


ಇದನ್ನೂ ಓದಿ- Vastu Tips: ನಿಮ್ಮ ಪ್ರಗತಿಯನ್ನು ಕುಂಠಿತಗೊಳಿಸುವ ಈ ವಸ್ತುಗಳನ್ನು ಇಂದೇ ನಿಮ್ಮ ಮನೆಯಿಂದ ಹೊರಹಾಕಿ


ಸ್ನಾನ ಗೃಹದಲ್ಲಿರಲಿ ಈ ಬಣ್ಣದ ಬಕೆಟ್:
ವಾಸ್ತುಶಾಸ್ತ್ರದ ಪ್ರಕಾರ, ನೀಲಿ ಬಣ್ಣಕ್ಕೆ ಬಹಳ ಮಹತ್ವವಿದೆ. ವಾಸ್ತುವಿನಲ್ಲಿ ನೀಲಿ ಬಣ್ಣವನ್ನು ಅತ್ಯಂತ ಶುಭ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಹಾಗಾಗಿ, ಸ್ನಾನ ಗೃಹದಲ್ಲಿ ನೀಲಿ ಬಣ್ಣದ ಬಕೆಟ್ ಮತ್ತು ಮಗ್ ಅನ್ನು ಇಡುವುದನ್ನು ಅತ್ಯಂತ ಮಂಗಳಕರ. ಇದು ಮನೆಯಲ್ಲಿ ಶಾಂತಿ, ಸುಖ-ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.


ಬಾತ್ ರೂಂನಲ್ಲಿ ಇವುಗಳ ಬಗ್ಗೆ ಗಮನ ಹರಿಸಿದರೆ ಶನಿ, ರಾಹು ದೋಷದಿಂದ ಸಿಗುತ್ತೆ ಪರಿಹಾರ:
ವಾಸ್ತು ಶಾಸ್ತ್ರದ ಪ್ರಕಾರ, ಬಾತ್ ರೂಂನಲ್ಲಿ ನೀಲಿ ಬಣ್ಣದ ಬಕೆಟ್ ಅನ್ನು ಇಡುವುದರಿಂದ ಶನಿ ಮತ್ತು ರಾಹು ಗ್ರಹ ದೋಷದ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. ಆದರೆ, ಇದಕ್ಕಾಗಿ ಬಾತ್ ರೂಂ ಬಕೆಟ್ ನಲ್ಲಿ ಸದಾ ನೀರು ತುಂಬಿರಬೇಕು ಎಂಬುದನ್ನು ನೆನಪಿನಲ್ಲಿಡಿ. 


ಇದನ್ನೂ ಓದಿ- Vastu Tips: ಗ್ರಹ ದೋಷಕ್ಕೆ ಕಾರಣವಾಗುವ ಈ ಹಳೆಯ ವಸ್ತುಗಳನ್ನು ಎಂದಿಗೂ ಮನೆಯಲ್ಲಿ ಇಡಲೇಬಾರದು


ಈ ಬಣ್ಣದಲ್ಲಿರಲಿ ಬಾತ್ ರೂಂ ಟೈಲ್ಸ್:
ವಾಸ್ತುವಿನಲ್ಲಿ ಬಾತ್ ರೂಂನಲ್ಲಿ ಇಡಬೇಕಾದ ಬಕೆಟ್ ಬಗ್ಗೆ ಮಾತ್ರವಲ್ಲ, ಸ್ನಾನ ಗೃಹದ ಟೈಲ್ಸ್ ಬಗ್ಗೆಯೂ ಉಲ್ಲೇಖಿಸಲಾಗಿಡೀ. ವಾಸ್ತು ಪ್ರಕಾರ, ಬಾತ್ ರೂಂನಲ್ಲಿ ನೀಲಿ ಬಣ್ಣದ ಟೈಲ್ಸ್ ಇದ್ದರೆ ಅದು ಹಣವನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.