Behavioral Tips: ಒಬ್ಬ ವ್ಯಕ್ತಿಗೆ ಸಂತೋಷದ ಜೀವನವನ್ನು ನೀಡುವುದು ಮಾತ್ರವಲ್ಲದೆ ಅವನನ್ನು ಅನೇಕ ತೊಂದರೆಗಳಿಂದ ರಕ್ಷಿಸುವ ಹಲವು ಸಂಗತಿಗಳನ್ನು ಚಾಣಕ್ಯ ನೀತಿಯಲ್ಲಿ (Chanakyaniti) ಹೇಳಲಾಗಿದೆ. ಆಚಾರ್ಯ ಚಾಣಕ್ಯ ಅವರು ಎಲ್ಲಾ ರೀತಿಯ ಜನರ ಆಚಾರ, ನಡವಳಿಕೆ, ಅರ್ಹತೆ ಮತ್ತು ನ್ಯೂನತೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಜನರು ಯಾವ ವಿಷಯಗಳನ್ನು ತಪ್ಪಿಸಬೇಕು ಎಂಬುದನ್ನು ಅವರು ಹೇಳಿದ್ದಾರೆ. ಈ ಕೆಲವು ವಿಷಯಗಳು ಎಷ್ಟು ಮಹತ್ವದ್ದಾಗಿವೆ ಎಂದರೆ ಅವುಗಳನ್ನು ಅನುಸರಿಸದಿದ್ದರೆ ವ್ಯಕ್ತಿಯ ಜೀವನವು ನಾಶವಾಗುತ್ತದೆ. ಇದು ಅವನ ಮೇಲೆ ಮಾತ್ರವಲ್ಲದೆ ಅವನೊಂದಿಗೆ ಸಂಬಂಧ ಹೊಂದಿರುವ ಜನರು ಹಾಗೂ ಸಮಾಜದ ಮೇಲೂ ಪರಿಣಾಮ ಬೀರುತ್ತವೆ.

COMMERCIAL BREAK
SCROLL TO CONTINUE READING

ಹಾಳು ಮಾಡುತ್ತದೆ ಇಂತಹ ವರ್ತನೆ
ಚಾಣಕ್ಯ ನೀತಿಯಲ್ಲಿ, ಆಚಾರ್ಯ ಚಾಣಕ್ಯರು ರಾಜರು, ಬ್ರಾಹ್ಮಣರು ಮತ್ತು ಮಹಿಳೆಯರ ವ್ಯವಹಾರ ಮತ್ತು ನಡವಳಿಕೆಯನ್ನು ಸಮಾಜಕ್ಕೆ ಬಹಳ ಮುಖ್ಯವೆಂದು ವಿವರಿಸಿದ್ದಾರೆ. ಈ ಮೂವರೂ ತಪ್ಪು ಮಾಡಿದರೆ ಸಮಾಜ ಮತ್ತು ಕುಟುಂಬ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ರಾಜ: ರಾಜನು ಎಂದಿಗೂ ತೃಪ್ತನಾಗಬಾರದು ಎಂದು ಆಚಾರ್ಯ ಚಾಣಕ್ಯ  ಹೇಳುತ್ತಾರೆ. ರಾಜನು ತೃಪ್ತನಾದರೆ, ಅವನು ತನ್ನ ರಾಜ್ಯವನ್ನು ಹೆಚ್ಚಿಸಲು ಸಾಧ್ಯವಾಗುವುದಿಲ್ಲ ಅಥವಾ ಪ್ರಜೆಗಳನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಡಳಿತವೇ ಸ್ಥಬ್ಧವಾಗುತ್ತದೆ.

ಬ್ರಾಹ್ಮಣ : ಸಮಾಜಕ್ಕೆ ಶಿಕ್ಷಣ ನೀಡುವುದು ಬ್ರಾಹ್ಮಣನ ಕೆಲಸ. ಅವನು ತನ್ನ ಸಮಯವನ್ನು ಜ್ಞಾನವನ್ನು ಸಂಪಾದಿಸಲು ಮತ್ತು ಹಂಚಿಕೊಳ್ಳಲು ಕಳೆಯಬೇಕು. ಪ್ರತಿಯಾಗಿ, ಜನರು ಬ್ರಾಹ್ಮಣನಿಗೆ ದಾನ ಮತ್ತು ಗೌರವವನ್ನು ನೀಡಬೇಕು. ಬ್ರಾಹ್ಮಣನು ಪಡೆದ ದಾನದಿಂದ ತೃಪ್ತನಾಗದಿದ್ದರೆ, ಅದು ನಾಶವಾಗುವುದು ಖಚಿತ. ಇದರೊಂದಿಗೆ ಸಮಾಜವೂ ಇದರ ಭಾರವನ್ನು ಹೊರಬೇಕಾಗುತ್ತದೆ.


ಇದನ್ನೂ ಓದಿ-Astrology: ಈ ಜನರ ಮೇಲಿರುತ್ತದೆ ಧನದೊಡೆಯ ಕುಬೇರನ ಅಪಾರ ಕೃಪೆ!

ಗೃಹಿಣಿ : ಗೃಹಿಣಿ ಕುಟುಂಬದ ಬೆನ್ನೆಲುಬು. ಅವಳು ಎಲ್ಲರನ್ನೂ ನೋಡಿಕೊಳ್ಳುತ್ತಾಳೆ ಮತ್ತು ಕುಟುಂಬದ ಗೌರವವನ್ನು ಹೆಚ್ಚಿಸುತ್ತಾಳೆ. ಅವಳು ಕಠಿಣ ಸ್ವಭಾವದವಳಾಗಿದ್ದರೆ, ಮನೆಯಲ್ಲಿ ಜಗಳದ ವಾತಾವರಣವಿರುತ್ತದೆ. ಕುಟುಂಬದ ಗೌರವ, ಆರ್ಥಿಕ ಸ್ಥಿತಿ, ಸಂಬಂಧಗಳ ನಡುವಿನ ಪ್ರೀತಿಗೆ ಅದು ಒಳ್ಳೆಯದಲ್ಲ. ಆದರೆ ಮನೆಯ ಮಹಿಳೆಯರನ್ನು ಗೌರವಿಸಿದಾಗ ಮಾತ್ರ ಕುಟುಂಬವು ಸಂತೋಷದಿಂದ ಉಳಿಯುತ್ತದೆ ಎಂಬುದನ್ನು ನೆನಪಿನಲ್ಲಿಡಿ. 


ಇದನ್ನೂ ಓದಿ-Morning Tips: ಬೆಳಗ್ಗೆ ಎದ್ದ ಮೇಲೆ ನೀವೂ ಈ ಕೆಲಸಗಳನ್ನು ಮಾಡ್ತೀರಾ? ಎಚ್ಚರ!

(ಹಕ್ಕುತ್ಯಾಗ:  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ.  ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.