ಬೆಂಗಳೂರು : ಹಿಂದೂ ಧರ್ಮದಲ್ಲಿ ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸಲು ಕೆಲವು ನಿಯಮಗಳನ್ನು ಅನುಸರಿಸುವಂತೆ  ಸಲಹೆ ನೀಡಲಾಗಿದೆ. ಈ ನಿಯಮಗಳ ಪ್ರಕಾರ ಉಗುರು ಮತ್ತು ಕೂದಲು ಕತ್ತರಿಸುವುದಕ್ಕೂ ಒಂದು ನಿರ್ದಿಷ್ಟ ದಿನ ಎನ್ನುವುದಿದೆ. ಈ ದಿನಗಳಲ್ಲಿ ಕೂದಲು ಮತ್ತು ಉಗುರು ಕತ್ತರಿಸಿದರೆ ಶ್ರೇಯಸ್ಸು ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಜನರು ರಜೆ ಅಥವಾ ಸಂಜೆ ಬಿಡುವಿನ ವೇಳೆಯಲ್ಲಿ ತಮ್ಮ ಉಗುರು ಮತ್ತು ಕೂದಲನ್ನು ಕತ್ತರಿಸುತ್ತಾರೆ. ಆದರೆ ಹಾಗೆ ಮಾಡುವುದರಿಂದ ಹಣದ ನಷ್ಟ ಸೇರಿದಂತೆ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತದೆ ಶಾಸ್ತ್ರ. ಮತ್ತೊಂದೆಡೆ, ಶಾಸ್ತ್ರದಲ್ಲಿ ಹೇಳಿದ ದಿನದಂತೆ ಕ್ಷೌರ ಮಾಡಿಸುವುದರಿಂದ ಜೀವನದಲ್ಲಿ  ಹಣ ಮತ್ತು ಪ್ರಗತಿ ಲಭಿಸುತ್ತದೆ. 


COMMERCIAL BREAK
SCROLL TO CONTINUE READING

ಕೂದಲು ಕತ್ತರಿಸಲು ಯಾವ ದಿನ ಶುಭ? :
ಸೋಮವಾರ : ಸೋಮವಾರ ಕೂದಲು ಕತ್ತರಿಸುವುದು ಒಳ್ಳೆಯದಲ್ಲ. ಸೋಮವಾರ ಕೂದಲು ಕತ್ತರಿಸಿದರೆ ಮಗುವಿನ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತದೆ. ಮಾನಸಿಕ ದೌರ್ಬಲ್ಯವನ್ನು ಎದುರಿಸಬೇಕಾಗುತ್ತದೆ.


ಮಂಗಳವಾರ : ಮಂಗಳವಾರ ಕೂದಲು ಕತ್ತರಿಸಿದರೆ ಆಯುಷ್ಯ ಕಡಿಮೆಯಾಗುತ್ತದೆಯಂತೆ. ಮಾತ್ರವಲ್ಲ ಅಕಾಲಿಕ ಮರಣದ ಅಪಾಯವೂ  ಕಾಡುತ್ತದೆ. 


ಇದನ್ನೂ ಓದಿ : ಇನ್ನೂ 4 ದಿನದಲ್ಲಿ ಈ ರಾಶಿಯವರಿಗೆ ಭಾರೀ ಅದೃಷ್ಟ ಕರುಣಿಸಲಿದ್ದಾನೆ ಮಂಗಳ


ಬುಧವಾರ : ಬುಧವಾರ ಉಗುರುಗಳು ಮತ್ತು ಕೂದಲು ಕತ್ತರಿಸುವುದು  ಮಂಗಳಕರವಾಗಿದೆ. ಬುಧವಾರ ಕೂದಲು ಕತ್ತರಿಸುವುದರಿಂದ ಜೀವನದಲ್ಲಿ ಸಂಪತ್ತು ಹೆಚ್ಚುತ್ತದೆ, ವೃತ್ತಿಯಲ್ಲಿ ಪ್ರಗತಿಯಾಗುತ್ತದೆ.  


ಗುರುವಾರ : ಗುರುವಾರ ಯಾವುದೇ ಕಾರಣಕ್ಕೂ ಕೂದಲು ಕತ್ತರಿಸಬಾರದು. ವಿಶೇಷವಾಗಿ ಮಹಿಳೆಯರು ಈ ದಿನ ಆಕಸ್ಮಿಕವಾಗಿ ಕೂಡಾ ತಮ್ಮ ಕೂದಲು ಮತ್ತು ಉಗುರುಗಳನ್ನು ಕತ್ತರಿಸಬಾರದು. ಇದು ಕುಟುಂಬದಲ್ಲಿ ಬಿಕ್ಕಟ್ಟನ್ನು ಉಂಟುಮಾಡಬಹುದು. ಹಣ ಮತ್ತು ಗೌರವ ಕಡಿಮೆಯಾಗುತ್ತದೆ. ಅದೃಷ್ಟ ದುರಾದೃಷ್ಟವಾಗಿ ಬದಲಾಗುತ್ತದೆ. 


ಶುಕ್ರವಾರ : ಶುಕ್ರವಾರ ಕ್ಷೌರ ಮಾಡಿಸಲು ಮತ್ತು ಮತ್ತು ಉಗುರು ಕತ್ತರಿಸಲು ಅತ್ಯಂತ ಮಂಗಳಕರ ದಿನ. ಶುಕ್ರವಾರದ ಕ್ಷೌರವು ಸಂಪತ್ತು-ಸಮೃದ್ಧಿ, ಸೌಂದರ್ಯವನ್ನು ಹೆಚ್ಚಿಸುತ್ತದೆ. 


ಇದನ್ನೂ ಓದಿ : Budh Gochar 2023 : ಬುಧ ಗೋಚರದಿಂದ ಈ ರಾಶಿಯವರಿಗೆ 21 ದಿನದಲ್ಲಿ ಒಲಿಯಲಿದೆ ಅದೃಷ್ಟ!


ಶನಿವಾರ :  ಶನಿವಾರದಂದು ಕೂದಲು ಕತ್ತರಿಸುವುದು ತುಂಬಾ ಅಶುಭ. ಈ ರೀತಿ ಮಾಡುವುದರಿಂದ ಶನಿದೇವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.  ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಅಕಾಲಿಕ ಮರಣ, ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. 


ಭಾನುವಾರ : ಸಾಮಾನ್ಯವಾಗಿ ಭಾನುವಾರ ರಜಾ ದಿನ್ವಗಿರುವುದರಿಂದ ಎಲ್ಲರೂ ಭಾನುವಾರದ ದಿನ ಕೂದಲು ಕತ್ತರಿಸುತ್ತಾರೆ. ಆದರೆ ಭಾನುವಾರ ಕೂದಲು ಕತ್ತರಿಸಬೇಡಿ. , ಹಾಗೆ ಮಾಡುವುದರಿಂದ ಸಂಪತ್ತು, ಬುದ್ಧಿವಂತಿಕೆ ಮತ್ತು ಧರ್ಮ ನಾಶವಾಗುತ್ತದೆ ಎಂದು ಹೇಳಲಾಗುತ್ತದೆ.


  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.