ಈ ದಿನ ಉಗುರು ಕತ್ತರಿಸಿದರೆ ಶುಭ ! ಆರ್ಥಿಕ ಸಂಕಷ್ಟದಿಂದ ಸಿಗುವುದು ಶಾಶ್ವತ ಮುಕ್ತಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೂದಲು ಮತ್ತು ಉಗುರುಗಳ ಸಂಬಂಧ ಶನಿ ಗ್ರಹದೊಂದಿಗೆ ಇದೆ. ಉಗುರುಗಳು ಮತ್ತು ಕೂದಲನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ಶನಿದೇವನು ಕೋಪಗೊಳ್ಳುತ್ತಾನೆ.
ಬೆಂಗಳೂರು : ವೈದ್ಯಕೀಯ ವಿಜ್ಞಾನದ ಪ್ರಕಾರ ಉಗುರುಗಳು ಸತ್ತ ಜೀವಕೋಶಗಳಿಂದ ಮಾಡಲ್ಪಟ್ಟಿದೆ. ಆದರೆ, ಉಗುರುಗಳು ನಮ್ಮ ಕೈ ಮತ್ತು ಕಾಲುಗಳ ಸೌಂದರ್ಯವನ್ನು ಹೆಚ್ಚಿಸುತ್ತವೆ. ಅದಕ್ಕಾಗಿಯೇ ನೇಲ್ ಕೇರ್ ನಿಂದ ಹಿಡಿದು ನೇಲ್ ಆರ್ಟ್ ವರೆಗೆ ಸಾಕಷ್ಟು ಕೆಲಸಗಳನ್ನು ಮಾಡಲಾಗುತ್ತದೆ. ಇನ್ನು ಧಾರ್ಮಿಕ ಗ್ರಂಥಗಳಲ್ಲಿ ಉಗುರುಗಳು ಮತ್ತು ಕೂದಲಿನ ಬಗ್ಗೆ ಅನೇಕ ಪ್ರಮುಖ ವಿಷಯಗಳನ್ನು ಹೇಳಲಾಗಿದೆ. ಉಗುರು ಕತ್ತರಿಸಲು ಇರುವ ನಿಯಮಗಳ ಬಗ್ಗೆಯೂ ಹೇಳಲಾಗಿದೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಉಗುರು ಕತ್ತರಿಸುವ ನಿಯಮಗಳ ಬಗ್ಗೆ ಹೇಳಲಾಗಿದೆ. ಇದರಲ್ಲಿ ಉಗುರು ಕತ್ತರಿಸುವ ಸರಿಯಾದ ದಿನ, ದಿನಾಂಕ ಮತ್ತು ಸಮಯವನ್ನು ಹೇಳಲಾಗಿದೆ.
ಉಗುರುಗಳಿಗೂ ಶನಿ ಗ್ರಹಕ್ಕೂ ಇದೆ ಸಂಬಂಧ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೂದಲು ಮತ್ತು ಉಗುರುಗಳ ಸಂಬಂಧ ಶನಿ ಗ್ರಹದೊಂದಿಗೆ ಇದೆ. ಉಗುರುಗಳು ಮತ್ತು ಕೂದಲನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ಶನಿದೇವನು ಕೋಪಗೊಳ್ಳುತ್ತಾನೆ. ಶನಿ ದೇವ ಕೋಪಗೊಂಡರೆ ಅಶುಭ ಫಲವನ್ನೇ ನೀಡುತ್ತಾನೆ. ಇದರಿಂದಾಗಿ ಜೀವನದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಈ ಕಾರಣಕ್ಕಾಗಿಯೇ ಉಗುರುಗಳ ಸ್ವಚ್ಛತೆ ಮತ್ತು ಉಗುರುಗಳನ್ನು ಕತ್ತರಿಸುವ ದಿನ ಮತ್ತು ಸಮಯದ ಬಗ್ಗೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ.
ಇದನ್ನೂ ಓದಿ : Astrology 2023: ಹೊಸ ವರ್ಷದಲ್ಲಿ ಈ ಕರ್ಮ ಪ್ರಧಾನ ಗ್ರಹದ ರಾಶಿ ಪರಿವರ್ತನೆ, ಈ ಜನರಿಗೆ ಜಬ್ಬರ್ದಸ್ತ್ ಲಾಭ
ಯಾವ ದಿನ ಉಗುರುಗಳನ್ನು ಕತ್ತರಿಸಬಾರದು? :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಉಗುರುಗಳನ್ನು ಕತ್ತರಿಸಬಾರದು ಎಂದು ಹೇಳಲಾಗಿದೆ. ವಾರದ ಈ ಮೂರು ದಿನಗಳಲ್ಲಿ ಉಗುರು ಕತ್ತರಿಸಿದರೆ ಮಂಗಳ, ಗುರು ಮತ್ತು ಶನಿ ಗ್ರಹಗಳು ಅಶುಭ ಫಲ ನೀಡಲಾರಂಭಿಸುತ್ತವೆ ಎನ್ನಲಾಗಿದೆ. ಮಂಗಳ ದುರ್ಬಲನಾಗಿದ್ದರೆ, ಮದುವೆಯಲ್ಲಿ ವಿಳಂಬ, ಸಂಪತ್ತು ಮತ್ತು ಧೈರ್ಯದ ಕೊರತೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮತ್ತೊಂದೆಡೆ, ಗುರುವಾರ ಉಗುರುಗಳನ್ನು ಕತ್ತರಿಸುವುದು ಎಂದರೆ ದುರಾದೃಷ್ಟವನ್ನು ಆಹ್ವಾನಿಸಿದಂತೆ. ಶನಿವಾರದಂದು ಉಗುರುಗಳನ್ನು ಕತ್ತರಿಸುವುದರಿಂದ ಶನಿಯು ಕೋಪಗೊಳ್ಳುತ್ತಾನೆ. ಇದು ಆರ್ಥಿಕ ನಷ್ಟ ಮತ್ತು ಬಡತನಕ್ಕೆ ಕಾರಣವಾಗುತ್ತದೆ. ಇದಲ್ಲದೆ ಚತುರ್ದಶಿ ಮತ್ತು ಅಮವಾಸ್ಯೆ ತಿಥಿಯಂದು ಕೂಡಾ ಉಗುರುಗಳನ್ನು ಕತ್ತರಿಸಬಾರದು. ಚತುರ್ದಶಿ ಮತ್ತು ಅಮವಾಸ್ಯೆಯ ದಿನದಂದು ಉಗುರು ಅಥವಾ ಕೂದಲನ್ನು ಕತ್ತರಿಸುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಸೂರ್ಯಾಸ್ತದ ನಂತರ ಉಗುರುಗಳನ್ನು ಕತ್ತರಿಸಿದರೆ ವ್ಯಕ್ತಿ ಬಡತನವನ್ನು ಅನುಭವಿಸಬೇಕಾಗುತ್ತದೆ.
ಇದನ್ನೂ ಓದಿ : Vastu Tips For Camphor: ನಿಮ್ಮ ಹಲವು ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ನೀಡುತ್ತದೆ ಕರ್ಪೂರದ ಸಣ್ಣ ತುಂಡು
ಯಾವ ದಿನ ಉಗುರುಗಳನ್ನು ಕತ್ತರಿಸಬೇಕು? :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಉಗುರು ಕತ್ತರಿಸಲು ಸೂಕ್ತ ದಿನಗಳು. ಈ ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಉಗುರುಗಳನ್ನು ಕತ್ತರಿಸಲು ಅತ್ಯಂತ ಮಂಗಳಕರ ದಿನ ಎಂದರೆ ಅದು ಭಾನುವಾರ. ಈ ದಿನ ಉಗುರುಗಳನ್ನು ಕತ್ತರಿಸುವುದರಿಂದ ಬಡತನ ದೂರವಾಗುತ್ತದೆ. ವ್ಯಕ್ತಿಗೆ ಯಾವತ್ತೂ ಹಣದ ಕೊರತೆ ಎದುರಾಗುವುದಿಲ್ಲ. ಹಾಗೆಯೇ ಜೀವನದಲ್ಲಿ ಸದಾ ಸಕಾರಾತ್ಮಕತೆ ಇರುತ್ತದೆ. ಆದರೆ ಒಂದು ಮಾತು ನೆನಪಿನಲ್ಲಿಟ್ಟುಕೊಳ್ಳಬೇಕು ಏನಂದರೆ ಉಗುರನ್ನು ಯಾವಾಗಲೂ ಹಗಲು ಹೊತ್ತು ಮಾತ್ರ ಕತ್ತರಿಸಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್