Shani Deva: ನಿಮ್ಮ ಈ ಕೆಲಸಗಳು ಶನಿ ದೇವನ ಮುನಿಸಿಗೆ ಕಾರಣವಾಗಬಹುದು, ಎಚ್ಚರ!
Shani Deva: ಕರ್ಮಗಳಿಗೆ ತಕ್ಕ ಫಲ ನೀಡುವ ಕರ್ಮಫಲದಾತ, ನ್ಯಾಯದ ದೇವರು ಶನಿ ದೇವನ ಹೆಸರು ಕೇಳಿದರೆ ಸಾಕು ಬಹುತೇಕ ಜನರು ನಿದ್ದೆಯಲ್ಲೂ ಬೆಚ್ಚಿಬೀಳುತ್ತಾರೆ. ಇದಕ್ಕೆ ಪ್ರಮುಖ ಕಾರಣ, ಶನಿ ದೇವನ ಕಾಟ. ನಿಮಗ್ ಗೊತ್ತಾ! ನಿತ್ಯ ಜೀವನದಲ್ಲಿ ನಿಮಗೆ ಗೊತ್ತೋ ಗೊತ್ತಿಲ್ಲದೆಯೋ ಮಾಡುವ ಕೆಲವು ಕೆಲಸಗಳೂ ಕೂಡ ಶನಿ ದೇವನ ಮುನಿಸಿಗೆ ಕಾರಣವಾಗಬಹುದು. ಅಂತಹ ಕೆಲಸಗಳು ಯಾವುವು ಎಂದು ತಿಳಿಯಿರಿ.
Shani Deva: ಜ್ಯೋತಿಷ್ಯ ಶಾಸ್ತ್ರದಲ್ಲಿ, ನವಗ್ರಹಗಳಲ್ಲಿ ಯಾವುದೇ ಒಂದು ಗ್ರಹದಲ್ಲಿನ ಸಣ್ಣ ಬದಲಾವನೆಯೂ ಕೂಡ ವಿಶ್ವದ ಎಲ್ಲಾ ಜೀವರಾಶಿಗಳ ಮೇಲೆ ಪ್ರಭಾವವನ್ನು ಬೀರುತ್ತದೆ. ಅದರಲ್ಲೂ ವೈದಿಕ ಜ್ಯೋತಿಷ್ಯದಲ್ಲಿ, ಶನಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿ ಶುಭ ಸ್ಥಾನದಲ್ಲಿದ್ದರೆ ಆತ ಜೀವನದ ಪ್ರತಿಯೊಂದು ಸುಖವನ್ನೂ ಅನುಭವಿಸುತ್ತಾನೆ. ಅಂತೆಯೇ, ಜಾತಕದಲ್ಲಿ ಶನಿ ಅಶುಭ ಸ್ಥಾನದಲ್ಲಿದ್ದರೆ ಅಂತಹವರು ಜೀವನದಲ್ಲಿ ನಾನಾ ರೀತಿಯ ಸಂಕಷ್ಟಗಳ ಸರಮಾಲೆಯನ್ನು ಅನುಭವಿಸುತ್ತಾರೆ ಎಂದು ಹೇಳಲಾಗುತ್ತದೆ.
ಯಾವುದೇ ವ್ಯಕ್ತಿಯ ಜಾತಕದಲ್ಲಿ ಸಾಡೇ ಸಾತಿ ಶನಿ ಪ್ರಭಾವ, ಇಲ್ಲವೇ ಶನಿ ಧೈಯಾದಂತಹ ಪ್ರಭಾವವಿದ್ದಾಗ ಆ ವ್ಯಕ್ತಿಯು ಪ್ರತಿ ಹೆಜ್ಜೆ ಹೆಜ್ಜೆಗೂ ತೊಂದರೆಯನ್ನು ಅನುಭವಿಸುತ್ತಾನೆ ಎಂಬುದನ್ನೂ ನೀವು ಕೇಳಿರಬಹುದು. ಆದರೆ, ನಿಮಗೆ ಗೊತ್ತೋ, ಗೊತ್ತಿಲ್ಲದೆಯೋ ಮಾಡುವ ಕೆಲವು ಕೆಲಸಗಳು ಕೂಡ ಶನಿಯ ಮುನಿಸಿಗೆ ಕಾರಣವಾಗಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ನಮ್ಮ ನಿತ್ಯದ ಜೀವನದಲ್ಲಿ ನಾವು ಮಾಡುವ ಕೆಲವು ಕೆಲಸಗಳು ಕೂಡ ಶನಿಯ ಕೋಪಕ್ಕೆ ಕಾರಣವಾಗಬಹುದು.
ನಿಮ್ಮ ಈ ಕೆಲಸಗಳು ಶನಿ ದೇವನ ಮುನಿಸಿಗೆ ಕಾರಣವಾಗಬಹುದು, ಎಚ್ಚರ!
ಕರ್ಮಫಲದಾತ ಶನಿಯ ಆಶೀರ್ವಾದವನ್ನು ಪಡೆಯಲು ಏನು ಮಾಡಬೇಕು ಎಂಬ ಬಗ್ಗೆ ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ, ಯಾವ ಕೆಲಸಗಳನ್ನು ಮಾಡುವುದರಿಂದ ಶನಿ ಮಹಾತ್ಮನಿಗೆ ಕೋಪ ಬರುತ್ತದೆ. ಶನಿಯ ಕೋಪದಿಂದ ತಪ್ಪಿಸಿಕೊಳ್ಳಲು ಎಂತಹ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂಬ ಬಗ್ಗೆಯೂ ಉಲ್ಲೇಖಿಸಲಾಗಿದೆ. ಹಾಗಿದ್ದರೆ, ಶನಿಯ ಕೋಪವನ್ನು ತಪ್ಪಿಸಲು ಯಾವ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂದು ತಿಳಿಯೋಣ...
ಇದನ್ನೂ ಓದಿ- ಶನಿ ದೇವನ ಪ್ರಿಯ ರಾಶಿಗಳಿವು: ಇವರಿಗೆ ಜೀವನದಲ್ಲಿ ಸೋಲೆಂಬುದೇ ಇಲ್ಲ
* ಮಹಿಳೆಯರನ್ನು ಅವಮಾನಿಸಬೇಡಿ:
ಯಾವ ಜಾಗದಲ್ಲಿ ಮಹಿಳೆಗೆ ಗೌರವವಿಲ್ಲವೋ ಅಂತಹ ಸ್ಥಳದಲ್ಲಿ ಸಂಪತ್ತಿನ ಅಧಿದೇವತೆ ಲಕ್ಷ್ಮಿ ಕ್ಷಣ ಮಾತ್ರವೂ ನಿಲ್ಲುವುದಿಲ್ಲ ಎಂದು ನಿಮಗೆ ತಿಳಿದೇ ಇದೆ. ಅಂತೆಯೇ, ಯಾರು ಮಹಿಳೆಗೆ ಗೌರವವನ್ನು ನೀಡುವುದಿಲ್ಲವೋ ಅಂತಹವರು ಶನಿ ದೇವನ ಕೋಪಕ್ಕೆ ತುತ್ತಾಗಬಹುದು. ಇದಕ್ಕಾಗಿ ಈ ಕೆಳಗೆ ಉಲ್ಲೇಖಿಸಲಾದ ಕೆಲಸಗಳನ್ನು ಮಾಡುವುದನ್ನು ತಪ್ಪಿಸಿ. ಹೆಣ್ಣನ್ನು ಅವಮಾನಿಸಬೇಡಿ. ಅದರಲ್ಲೂ ಅಸಹಾಯಕ ಮಹಿಳೆಯರನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಇಲ್ಲ ಅವಮಾನಿಸಬೇಡಿ.
* ಹಿರಿಯರ ನಿಂದನೆ:
ನೂರು ದೇವರನ್ನು ಪೂಜಿಸುವುದಕ್ಕಿಂತ ನಿಮ್ಮ ತಂದೆ-ತಾಯಿಯನ್ನೂ, ಮನೆಯ ಹಿರಿಯರನ್ನೂ ಪೂಜಿಸಿ ಎಂಬ ಮಾತಿದೆ. ಶನಿ ದೇವನು ಎಂದಿಗೂ ಕೂಡ ಹಿರಿಯರ, ಕೈಲಾಗದವರ ನಿಂದನೆಯನ್ನು ಸಹಿಸುವುದಿಲ್ಲ. ಹಾಗಾಗಿ, ಯಾವುದೇ ಕಾರಣದಿಂದಲೂ, ಎಂತಹದೇ ಪರಿಸ್ಥಿತಿಯಲ್ಲೂ ಹಿರಿಯರನ್ನೂ ನಿಂದಿಸಬೇಡಿ.
* ಅಸಹಾಯಕರ ಜೊತೆ ದುರ್ವರ್ತನೆ:
ಅಸಹಾಯಕರನ್ನು ಅವಮಾನಿಸುವುದು ಅಥವಾ ಶೋಷಿಸುವುದು ಶನಿ ದೇವನಿಗೆ ತುಂಬಾ ಕೋಪವನ್ನು ತರುತ್ತದೆ. ಇದನ್ನು ತಪ್ಪಿಸಲು ಅಸಹಾಯಕರೊಂದಿಗೆ ದುರ್ವರ್ತನೆಯನ್ನು ತಪ್ಪಿಸಿ.
* ವಂಚನೆ:
ಹಣ ಆಗಲಿ ಅಥವಾ ಇನ್ನಾವುದೇ ವಿಚಾರವಾಗಿರಲಿ ಬೇರೆಯವರಿಗೆ ವಂಚಿಸಬೇಡಿ. ಬೇರೊಬ್ಬರಿಗೆ ಮೋಸ ಮಾಡುವುದನ್ನು, ಕೆಟ್ಟ ದಾರಿಯಲ್ಲಿ ಇನ್ನೊಬ್ಬರಿಗೆ ಮೋಸ ಮಾಡಿ ಹಣ ಸಂಪಾದಿಸುವುದನ್ನು ಶನಿ ಮಹಾತ್ಮ ಎಂದಿಗೂ ಕ್ಷಮಿಸುವುದಿಲ್ಲ.
ಇದನ್ನೂ ಓದಿ- 2025ರವರೆಗೆ ಈ ಮೂರು ರಾಶಿಯವರಿಗೆ ಸಂಪತ್ತಿನ ಸುರಿಮಳೆ ಸುರಿಸಲಿದ್ದಾನೆ ಶನಿ ದೇವ
* ಮೂಕ ಪ್ರಾಣಿಗಳಿಗೆ ಹಿಂಸೆ ನೀಡುವುದು:
ಇದಲ್ಲದೆ, ಮೂಕ ಪ್ರಾಣಿ, ಪಕ್ಷಿಗಳಿಗೆ ಹಿಂಸೆ ನೀಡುವುದನ್ನೂ ಕೂಡ ಶನಿದೇವ ಎಂದಿಗೂ ಕ್ಷಮಿಸುವುದಿಲ್ಲ. ಈ ರೀತಿಯ ಕೆಲಸಗಳನ್ನು ಮಾಡುವ ಜನರಿಗೆ ಶನಿ ದೇವ ಹೆಜ್ಜೆ, ಹೆಜ್ಜೆಗೂ ಬಾಧಿಸುತ್ತಾನೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.