ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಬುಧ ಗ್ರಹವು ಸಂಪತ್ತು, ವ್ಯವಹಾರ ಮತ್ತು ವಾಕ್ಚಾತುರ್ಯ ಕರುಣಿಸುವಾತ. ಬುಧ ಗ್ರಹದ ಸ್ಥಾನದಲ್ಲಿ ಬದಲಾವಣೆಯಾದಾಗ, ಜನರ ಆರ್ಥಿಕ ಸ್ಥಿತಿ ಮತ್ತು ವೃತ್ತಿಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಮುಂಬರುವ ದಿನಗಳಲ್ಲಿ ಬುಧನ ಸ್ಥಾನದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಲಿದೆ. ಆಗಸ್ಟ್ 21, 2023 ರಂದು, ಬುಧ ಗ್ರಹವು ಕನ್ಯಾರಾಶಿಗೆ ಪ್ರವೇಶಿಸಲಿದೆ. ಕನ್ಯಾರಾಶಿಯ ಅಧಿಪತಿ ಬುಧ. ಬುಧ ಒಂದು ವರ್ಷದ ನಂತರ ತನ್ನ ಸ್ವಂತ ರಾಶಿಯಾದ ಕನ್ಯಾರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಕನ್ಯಾ ರಾಶಿಗೆ ಬುಧ ಪ್ರವೇಶವಾಗುತ್ತಿದ್ದಂತೆಯೇ ಭದ್ರ ರಾಜಯೋಗವನ್ನು ಸೃಷ್ಟಿಸುತ್ತದೆ. ಭದ್ರ ರಾಜಯೋಗವು ಕೆಲವು ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ  ತಂದು ಕೊಡುತ್ತದೆ. ಇದರೊಂದಿಗೆ ಆರ್ಥಿಕ ಲಾಭವೂ ಸಿಗಲಿದೆ. 


COMMERCIAL BREAK
SCROLL TO CONTINUE READING

ಬುಧ ಸಂಚಾರವು ಈ ರಾಶಿಯ ಜನರಿಗೆ ಲಾಭವನ್ನು ನೀಡುತ್ತದೆ :  
ಕನ್ಯಾ ರಾಶಿ : ಬುಧ ಗ್ರಹ ಸಂಕ್ರಮಣದ ನಂತರ ಕನ್ಯಾರಾಶಿಗೆ ಪ್ರವೇಶಿಸುತ್ತಿದ್ದು ಅಕ್ಟೋಬರ್ 2 ರವರೆಗೆ ಕನ್ಯಾರಾಶಿಯಲ್ಲಿರುತ್ತಾನೆ. ಈ ರಾಶಿಗೆ ಬುಧನ ಪ್ರವೇಶವಾಗುವುದರೊಂದಿಗೆ ನಿಮ್ಮ ವ್ಯಕ್ತಿತ್ವವೇ ಬದಲಾಗುತ್ತದೆ. ಇತರರು ನಿಮ್ಮತ್ತ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಾ ಹೋಗುತ್ತಾರೆ. ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಈ ಯೋಗದಿಂದ ನೀವು ಮಾತ್ರವಲ್ಲ ನಿಮ್ಮ ಸಂಗಾತಿ ಕೂಡಾ ಪ್ರಗತಿ ಕಾಣುತ್ತಾರೆ. 


ಇದನ್ನೂ ಓದಿ : ನಾಳೆಯಿಂದ ಈ ರಾಶಿಯವರ ಭಾಗ್ಯೋದಯ ! ಒಲಿದು ಬರುವಳು ವಿಜಯಲಕ್ಷ್ಮೀ ! ತುಂಬಿ ತುಳುಕುವುದು ಸುಖ ಸಂಪತ್ತು


ಮಕರ ರಾಶಿ : ಬುಧ ಸಂಕ್ರಮಣದಿಂದ ರೂಪುಗೊಂಡ ಭದ್ರಾ ರಾಜಯೋಗವು ಮಕರ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಯಾವುದೇ ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರ ನಿಮಗೆ ಲಾಭ ತಂದು ಕೊಡಲಿದೆ. ಜೀವನದಲ್ಲಿ ನೆಮ್ಮದಿ  ಹೆಚ್ಚಾಗುತ್ತವೆ. ಉದ್ಯೋಗ-ವೃತ್ತಿಯಲ್ಲಿ ಪ್ರಗತಿ ಕಂಡುಬರುವುದು. 


ಧನು ರಾಶಿ : ಬುಧ ಸಂಕ್ರಮಣದಿಂದ ರೂಪುಗೊಂಡ ಭದ್ರಾ ರಾಜಯೋಗವು ಧನು ರಾಶಿಯವರಿಗೆ ಬಹಳ ಶುಭ ಫಲವನ್ನು ನೀಡುತ್ತದೆ. ಈ ಸಮಯವು ವೃತ್ತಿಜೀವನಕ್ಕೆ ತುಂಬಾ ಒಳ್ಳೆಯದು ಎಂದು ಸಾಬೀತಾಗಲಿದೆ. ಬಡ್ತಿ ಸಿಕ್ಕಿ ವೇತನ ಹೆಚ್ಚಳವಾಗಲಿದೆ. ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಸಿಗಲಿದೆ.  ಜೀವನದಲ್ಲಿ ಹಣ ಹರಿದು ಬರುತ್ತದೆ. ಹೊಸ ಉದ್ಯೋಗ ಆರಂಭಿಸಲು ಇದು ಸರಿಯಾದ ಸಮಯ.  


ಇದನ್ನೂ ಓದಿ : Surya Grahan: ಸೂರ್ಯ ಗ್ರಹಣದಲ್ಲಿ ಈ ಕೆಲಸಗಳನ್ನು ಮಾಡಿದ್ರೆ ಹೊಳೆಯುತ್ತೇ ಅದೃಷ್ಟ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ