Budha Gochar In Karka: ಜ್ಯೋತಿಷ್ಯ ಶಾಸ್ತ್ರದಲ್ಲಿ ಬುದ್ಧಿವಂತಿಕೆ, ಸಂವಹನ, ಸಂಪತ್ತು, ವ್ಯವಹಾರ, ತರ್ಕಶಾಸ್ತ್ರದ ಅಂಶವೆಂದು ಪರಿಗಣಿಸಲಾಗುವ ಗ್ರಹಗಳ ರಾಜಕುಮಾರ ಶೀಘ್ರದಲ್ಲೇ ರಾಶಿ ಪರಿವರ್ತನೆ ಹೊಂದಲಿದ್ದಾನೆ.  ಜುಲೈ 8, 2023 ರಂದು, ಬುಧನು ರಾಶಿ ಪರಿವರ್ತನೆ ಹೊಂದಿ ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಬುಧನ ರಾಶಿ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಶುಭ ಅಶುಭ ಪರಿಣಾಮವನ್ನು ಉಂಟು ಮಾಡುತ್ತದೆ. ಆದಾಗ್ಯೂ, ಕೆಲವು ರಾಶಿಯವರಿಗೆ ಈ ಸಮಯದಲ್ಲಿ ಅದೃಷ್ಟವೇ ಖುಲಾಯಿಸಲಿದೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿರುವ ಬುಧನು ಕೆಲವು ರಾಶಿಯವರ ವೃತ್ತಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಮಂಗಳಕರ ಫಲಿತಾಂಶಗಳನ್ನು ಬೀರಲಿದ್ದಾನೆ. ಈ ಸಮಯದಲ್ಲಿ ಆ ರಾಶಿಯ ಜನರು ಬಂಪರ್ ಧನ ಲಾಭವನ್ನು ಪಡೆಯಲಿದ್ದಾರೆ. ಮಾತ್ರವಲ್ಲ, ವೃತ್ತಿ, ವ್ಯವಹಾರದಲ್ಲಿ ಭಾರೀ ಪ್ರಗತಿಯನ್ನು ಕೂಡ ಕಾಣಲಿದ್ದಾರೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 


ಕರ್ಕಾಟಕ ರಾಶಿಯಲ್ಲಿ ಬುಧನ ಸಂಚಾರ: ಇನ್ನೊಂದು ವಾರದ ಬಳಿಕ ಈ ರಾಶಿಯವರ ಜೀವನದಲ್ಲಿ ಖುಲಾಯಿಸಲಿದೆ ಅದೃಷ್ಟ: 
ವೃಷಭ ರಾಶಿ: 

ಬುಧ ರಾಶಿ ಪರಿವರ್ತನೆ ವೃಷಭ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ ಜೊತೆಗೆ ಆರ್ಥಿಕಿಯ ಸ್ಥಿತಿಯನ್ನು ಬಲಗೊಳಿಸಲಿದೆ. ಈ ರಾಶಿಯವರು ಜೀವನದ ಪ್ರತಿ ಕ್ಷೇತ್ರದಲ್ಲೂ ಭಾರೀ ಯಶಸ್ಸನ್ನು ಗಳಿಸುವರು. ಮಾತ್ರವಲ್ಲದೆ, ವಿದ್ಯಾಭ್ಯಾಸ ಅಥವಾ ಉದ್ಯೋಗಕ್ಕಾಗಿ ವಿದೇಶ ಪ್ರಯಾಣಕ್ಕೆ ತೆರಳಲು ಬಯಸುವವರಿಗೆ ನಿಮ್ಮ ಕನಸು ನನಸಾಗಲಿದೆ. 


ಇದನ್ನೂ ಓದಿ- ಈ ರಾಶಿಯವರ ಜಾತಕದಲ್ಲಿ ರಾಜಯೋಗ ಶುರು! ಹರಿದುಬರಲಿದೆ ಅಪಾರ ಧನಸಂಪತ್ತು-ಅದೃಷ್ಟವೇ ಬದಲು


ಕರ್ಕಾಟಕ ರಾಶಿ: 
ಬುಧ ರಾಶಿ ಪರಿವರ್ತನೆಯು ಕರ್ಕಾಟಕ ರಾಶಿಯವರಿಗೂ ಮಂಗಳಕರ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ಬುಧ ಕರ್ಕಾಟಕ ರಾಶಿಯನ್ನೇ ಪ್ರವೇಶಿಸುವುದರಿಂದ ನಿಮ್ಮ ಉದ್ಯೋಗ, ವ್ಯವಹಾರದಲ್ಲಿ ಭಾರೀ ಲಾಭವನ್ನು ಗಳಿಸುವ ಅವಕಾಶವಿದೆ. ಮಾತ್ರವಲ್ಲದೆ, ವ್ಯಾಪಾರಿಗಳಿಗೂ ಅದ್ಭುತ ಲಾಭ ಗಳಿಸುವ ಸಮಯ ಇದಾಗಿದೆ. 


ಕನ್ಯಾ ರಾಶಿ: 
ಬುಧ ರಾಶಿ ಬದಲಾವಣೆಯಿಂದ ಕನ್ಯಾ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಶುಭ ಫಲಗಳು ಲಭ್ಯವಾಗಲಿವೆ. ಮಾತ್ರವಲ್ಲದೆ, ಈ ಸಮಯದಲ್ಲಿ ವಿದೇಶಕ್ಕೆ ಹೋಗುವ ಅವಕಾಶಗಳಿದ್ದು, ಬಡ್ತಿ ಸಾಧ್ಯತೆಯೂ ಇದೆ. ನಿಮ್ಮ ಬಹುದಿನಗಳ ಕನಸು ನನಸಾಗಲಿದೆ. 


ಇದನ್ನೂ ಓದಿ- Shani Mangala Yuti: ಶನಿ ಮಂಗಳ ಯುತಿಯಿಂದ ಹಾನಿಕಾರಕ ಸಂಸಪ್ತಕ ಯೋಗ


ತುಲಾ ರಾಶಿ:
ಬುಧ ರಾಶಿ ಪರಿವರ್ತನೆಯು ತುಲಾ ರಾಶಿಯವರ ವೃತ್ತಿ ಬದುಕಿನಲ್ಲಿ ಸುವರ್ಣಾವಕಾಶವನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ಉದ್ಯೋಗ ರಂಗದಲ್ಲಿ ದೊಡ್ಡ ದೊಡ್ಡ ಅವಕಾಶಗಳು ಲಭ್ಯವಾಗಲಿವೆ. ಮಾತ್ರವಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಜಯ ನಿಮ್ಮದಾಗಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.