Budh Gochar 2023: ವೈದಿಕ ಜ್ಯೋತಿಷ್ಯದಲ್ಲಿ ಮಾತು, ಬುದ್ದಿ, ಹಣ, ವ್ಯವಹಾರದ ಅಂಶ ಎಂದು ಪರಿಗಣಿಸಲ್ಪಟ್ಟಿರುವ ಬುಧ ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ ಅಂತಹ ವ್ಯಕ್ತಿ ಜೀವನದಲ್ಲಿ ಭಾರೀ ಯಶಸ್ಸನ್ನು ಗಳಿಸುತ್ತಾನೆ ಎಂದು ನಂಬಲಾಗಿದೆ. ಅಂತೆಯೇ, ಜಾತಕದಲ್ಲಿ ಬುಧ ಅಶುಭ ಸ್ಥಾನದಲ್ಲಿದ್ದರೆ ಅಂತ ವ್ಯಕ್ತಿ ನೆನಪಿನ ನಷ್ಟದ ಜೊತೆಗೆ ಹಣಕಾಸಿನ ಸಮಸ್ಯೆಯನ್ನೂ ಕೂಡ ಅನುಭವಿಸುತ್ತಾನೆ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಪ್ರಸ್ತುತ, ನವೆಂಬರ್ 27, 2023 ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಯನ್ನು ಪ್ರವೇಶಿಸಿರುವ ಬುಧ 28 ಡಿಸೆಂಬರ್ 2023 ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಈ ಸಂದರ್ಭದಲ್ಲಿ ಬುಧನು ಎಲ್ಲಾ 12 ರಾಶಿಯವರ ಮೇಲೆ ಧನಾತ್ಮಕ-ಋಣಾತ್ಮಕ ಪರಿಣಾಮಗಳನ್ನು ಬೀರುತ್ತಾನೆ. ಆದಾಗ್ಯೂ, ಈ ಸಮಯವು ಮೂರು ರಾಶಿಯವರ ಜೀವನದಲ್ಲಿ ಅತ್ಯಂತ ಮಂಗಳಕರ ಸಮಯ ಎಂದು ಸಾಬೀತುಪಡಿಸಲಿದೆ ಎನ್ನಲಾಗುತ್ತಿದೆ. 


ಇದನ್ನೂ ಓದಿ- ಡಿಸೆಂಬರ್‌ನಲ್ಲಿ ಗುರು ಬಲದಿಂದ ಈ ರಾಶಿಯವರಿಗೆ ಅದೃಷ್ಟ, ಮುಟ್ಟಿದ್ದೆಲ್ಲಾ ಚಿನ್ನ


ಧನು ರಾಶಿಯಲ್ಲಿ ಬುಧ ಸಂಚಾರ: ಈ ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಡಬಲ್ ಆಗಲಿದೆ ಆದಾಯ : 
ಮೇಷ ರಾಶಿ: 

ಧನು ರಾಶಿಯಲ್ಲಿರುವ ಗ್ರಹಗಳ ರಾಜಕುಮಾರ ಬುಧ ಮೇಷ ರಾಶಿಯವರಿಗೆ ಮಂಗಳಕರ ಫಲಗಳನ್ನು ನೀಡಲಿದ್ದಾನೆ. ಈ ಸಂದರ್ಭದಲ್ಲಿ ನಿಮ್ಮ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿಯ ಹಾದಿಗಳು ತೆರೆಯಲಿದ್ದು ಭಾರೀ ಯಶಸ್ಸನ್ನು ಗಳಿಸಲಿದ್ದೀರಿ. ಅಷ್ಟೇ ಅಲ್ಲದೆ, ಬೇರೆಡೆ ಸಿಲುಕಿರುವ ನಿಮ್ಮ ಹಣ ಶೀಘ್ರದಲ್ಲೇ ನಿಮ್ಮ ಕೈ ಸೇರಲಿದೆ. ಇದರಿಂದ ಕೌಟುಂಬಿಕ ಸುಖ-ಶಾಂತಿಯೂ ಹೆಚ್ಚಾಗಲಿದೆ. 


ಕುಂಭ ರಾಶಿ: 
ಬುಧ ರಾಶಿ ಪರಿವರ್ತನೆಯು ಕುಂಭ ರಾಶಿಯವರಿಗೆ ಬಂಪರ್ ಲಾಭವನ್ನು ನೀಡಲಿದೆ. ಮುಂದಿನ ಒನು ತಿಂಗಳು ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ಇರಲಿದ್ದು ಯಾವುದೇ ಕೆಲಸದಲ್ಲೂ ವಿಜಯ ಮಾಲೆ ನಿಮ್ಮದಾಗಲಿದೆ. ವ್ಯಾಪಾರ-ವ್ಯವಹಾರವನ್ನು ವಿಸ್ತರಿಸಲು ಬಯಸುವವರಿಗೆ ಇದು ಅತ್ಯುತ್ತಮ ಸಮಯ ಎಂದು ಸಾಬೀತುಪಡಿಸಲಿದೆ. 


ಇದನ್ನೂ ಓದಿ- Weekly Horoscope: ಈ ವಾರ ಮೂರು ರಾಶಿಯವರಿಗೆ ಆಕಸ್ಮಿಕ ಧನ ಲಾಭ


ಮೀನ ರಾಶಿ: 
ಬುಧ ರಾಹಿ ಬದಲಾವಣೆಯು ಮೀನ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಉತ್ತಮ ಯಶಸ್ಸನ್ನು ತಂದುಕೊಡಲಿದೆ. ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೂ ಸಮಯ ಅತ್ಯುತ್ತಮವಾಗಿದ್ದು, ನಿಮ್ಮ ನೆಚ್ಚಿನ ಕಂಪನಿಯಿಂದ ಆಫರ್ ಲೆಟರ್ ಬರಬಹುದು. ಆದಾಯದಲ್ಲಿ ಹೆಚ್ಚಳ ಕಂಡು ಬರಲಿದ್ದು ಸಂಪತ್ತು ದ್ವಿಗುಣಗೊಳ್ಳುವ ಅವಕಾಶಗಳು ಇವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.