Budhaditya Yoga Effect: ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ರಾಜ ಸೂರ್ಯ ಮತ್ತು ಗ್ರಹಗಳ ರಾಜಕುಮಾರ ಬುಧನಿಂದ ರೂಪುಗೊಂಡ ಬುಧಾದಿತ್ಯ ರಾಜಯೋಗವನ್ನು ಬಹಳ ಮಂಗಳಕರ ಯೋಗವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಗ್ರಹಗಳ ರಾಜ ಸೂರ್ಯ ಮತ್ತು ಗ್ರಹಗಳ ರಾಜಕುಮಾರ ಬುಧ ಒಂದೇ ರಾಶಿಚಕ್ರ ಚಿಹ್ನೆ ವೃಶ್ಚಿಕ ರಾಶಿಯಲ್ಲಿ ಕುಳಿತಿದ್ದಾರೆ. ವೃಶ್ಚಿಕ ರಾಶಿಯಲ್ಲಿ ಬುಧ ಮತ್ತು ಸೂರ್ಯರ ಸಂಯೋಗದಿಂದ ಬುಧಾದಿತ್ಯ ಯೋಗವು ರೂಪುಗೊಳ್ಳುತ್ತಿದೆ. ಬುಧ ಗ್ರಹವು ಡಿಸೆಂಬರ್ 3, 2022 ರವರೆಗೆ ವೃಶ್ಚಿಕ ರಾಶಿಯಲ್ಲಿ ಇರಲಿದೆ. ಅಲ್ಲಿಯವರೆಗೆ ಈ ರಾಜಯೋಗವು 6 ರಾಶಿಯ ಜನರಿಗೆ ಬಲವಾದ ಲಾಭಗಳನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಬುಧಾದಿತ್ಯ ಯೋಗವು ಯಾವ ರಾಶಿಯವರಿಗೆ ಅದೃಷ್ಟವನ್ನು ಕರುಣಿಸಲಿದೆ ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಬುಧಾದಿತ್ಯ ಯೋಗದಿಂದ ಡಿಸೆಂಬರ್ 3 ರವರೆಗಿನ  ಈ ಕೆಳಗಿನ ರಾಶಿಯವರಿಗೆ ಅದೃಷ್ಟವೋ ಅದೃಷ್ಟ: 
ಕರ್ಕಾಟಕ ರಾಶಿ:

ವೃಶ್ಚಿಕ ರಾಶಿಯಲ್ಲಿ ಸೂರ್ಯ-ಬುಧರ ಸಂಯೋಜನೆಯಿಂದ ರೂಪುಗೊಂಡಿರುವ ಬುಧಾದಿತ್ಯ ಯೋಗವು ಕರ್ಕಾಟಕ ರಾಶಿಯವರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ಕರ್ಕಾಟಕ ರಾಶಿಯವರಿಗೆ ವೃತ್ತಿಯಲ್ಲಿ ಲಾಭ ಇರುತ್ತದೆ. ನೀವು ಮಕ್ಕಳ ಸಂತೋಷವನ್ನು ಪಡೆಯಬಹುದು. ಆರೋಗ್ಯವೂ ಚೆನ್ನಾಗಿರುತ್ತದೆ. 


ಕನ್ಯಾ ರಾಶಿ:
ಬುಧ-ಸೂರ್ಯನ ಸಂಚಾರದಿಂದ ರೂಪುಗೊಂಡ ಬುಧಾದಿತ್ಯ ಯೋಗವು ಕನ್ಯಾ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಮತ್ತು ಶಕ್ತಿ ಹೆಚ್ಚುತ್ತದೆ. ಅದೃಷ್ಟದ ಸಹಾಯದಿಂದ, ನಿಮ್ಮ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. 


ಇದನ್ನೂ ಓದಿ- Guru Margi 2022: ಗುರುವಿನ ನೇರ ನಡೆಯಿಂದ 'ಗಜಕೇಸರಿ ಯೋಗ', ಈ 3 ರಾಶಿಯವರಿಗೆ ಭಾರೀ ಅದೃಷ್ಟ


ತುಲಾ ರಾಶಿ:
ಬುಧಾದಿತ್ಯ ಯೋಗವು ತುಲಾ ರಾಶಿಯವರಿಗೆ ಸಂಪತ್ತನ್ನು ತರುತ್ತದೆ. ವೃತ್ತಿಯಲ್ಲಿ ಪ್ರಗತಿ ಕಾಣಬಹುದು. ಹೂಡಿಕೆಯಿಂದ ಲಾಭ ಪಡೆಯುವ ಸಾಧ್ಯತೆಗಳಿವೆ. ವೆಚ್ಚಗಳು ಕಡಿಮೆಯಾಗುತ್ತವೆ ಮತ್ತು ನೀವು ಈ ಸಮಯದಲ್ಲಿ ಸಾಕಷ್ಟು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. 


ವೃಶ್ಚಿಕ ರಾಶಿ: 
ವೃಶ್ಚಿಕ ರಾಶಿಯಲ್ಲಿಯೇ ಸೂರ್ಯ ಮತ್ತು ಬುಧನಿಂದ ಬುಧಾದಿತ್ಯ ಯೋಗ ರೂಪುಗೊಂಡಿದೆ. ಹಾಗಾಗಿ, ಇದರ ಅತ್ಯಂತ ಮಂಗಳಕರ ಪರಿಣಾಮವು ವೃಶ್ಚಿಕ ರಾಶಿಯ ಜನರ ಮೇಲೆ ಇರುತ್ತದೆ. ಈ ಸಮಯದಲ್ಲಿ ಈ ರಾಶಿಯವರಿಗೆ ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣಲಿದೆ. ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. 


ಮಕರ ರಾಶಿ:
ಬುಧಾದಿತ್ಯ ಯೋಗವು ಮಕರ ರಾಶಿಯವರಿಗೆ ಆದಾಯವನ್ನು ಹೆಚ್ಚಿಸುತ್ತದೆ. ಆದಾಯ ಹೆಚ್ಚಳದಿಂದ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಸಂಬಂಧಗಳು ಗಟ್ಟಿಯಾಗಲಿವೆ. ದೀರ್ಘ ಸಮಯದಿಂದ ಬೇರೆಡೆ ಸಿಲುಕಿರುವ ಹಣವು ಈ ಸಮಯದಲ್ಲಿ ನಿಮ್ಮ ಕೈ ಸೇರಲಿದೆ. ವೃತ್ತಿ ಜೀನದಲ್ಲಿ ಉನ್ನತ ಜೀವನ ಪ್ರಾಪ್ತಿಯಾಗಲಿದ್ದು, ಗೌರವವೂ ಹೆಚ್ಚಾಗಲಿದೆ. 


ಇದನ್ನೂ ಓದಿ- Sun Transit: 2022ರ ಅಂತ್ಯದವರೆಗೆ ಈ ಜನರಿಗೆ ದಯೆ ತೋರುತ್ತಾನೆ ಸೂರ್ಯ ದೇವ


ಕುಂಭ ರಾಶಿ:
ಸೂರ್ಯ-ಬುಧರ ಸಂಯೋಗದಿಂದ ರೂಪುಗೊಂಡಿರುವ ಬುಧಾದಿತ್ಯ ಯೋಗವು ಕುಂಭ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಭಾರೀ ಆರ್ಥಿಕ ಲಾಭವಾಗಲಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಉದ್ಯೋಗ ಮತ್ತು ವ್ಯಾಪಾರ ಎರಡರಲ್ಲೂ ಲಾಭ ಇರುತ್ತದೆ. ನೀವು ಖರ್ಚುಗಳನ್ನು ಕಡಿಮೆ ಮಾಡಲು ಸಾಧ್ಯವಾದರೆ, ನೀವು ಬ್ಯಾಂಕ್ ಬ್ಯಾಲೆನ್ಸ್ ಅನ್ನು ಗಮನಾರ್ಹವಾಗಿ ಹೆಚ್ಚಿಸಬಹುದಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.