ಬುಧಾದಿತ್ಯ ಯೋಗದಿಂದ ಈ ರಾಶಿಯವರ ಉದ್ಯೋಗ-ವ್ಯವಹಾರದಲ್ಲಿ ಭಾರೀ ಯಶಸ್ಸು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಸ್ತುತ ಮಕರ ರಾಶಿಯಲ್ಲಿ ಸೂರ್ಯ-ಬುಧ ಸಂಯೋಜನೆಯಿಂದಾಗಿ ಬುಧಾದಿತ್ಯ ಯೋಗ ರೂಪುಗೊಂಡಿದೆ. ಇದರ ಪರಿಣಾಮವಾಗಿ ಮೂರು ರಾಶಿಯವರ ಜೀವನದಲ್ಲಿ ಭಾಗ್ಯೋದಯವಾಗಲಿದ್ದು, ಇವರು ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಿರುತ್ತದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
ಬೆಂಗಳೂರು: ಜನವರಿ 14ರಂದು ಗ್ರಹಗಳ ರಾಜನಾದ ಸೂರ್ಯ ಮಕರ ರಾಶಿಯನ್ನು ಪ್ರವೇಶಿಸಿದ್ದನು. ಇದೀಗ ಫೆಬ್ರವರಿ 07ರಂದು ಗ್ರಹಗಳ ರಾಜಕುಮಾರನಾದ ಬುಧ ಕೂಡ ಇದೇ ರಾಶಿಯನ್ನು ಪ್ರವೇಶಿಸಿದ್ದಾನೆ. ಜ್ಯೋತಿಷ್ಯದಲ್ಲಿ ಯಾವುದೇ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಕೂಡಿದಾಗ ಅದನ್ನು ಯುತಿ ಎಂದು ಹೇಳಲಾಗುತ್ತದೆ. ಇಂತಹ ಸಂದರ್ಭದಲ್ಲಿ ಹಲವು ಶುಭ-ಅಶುಭ ಯೋಗಗಳು ಕೂಡ ರೂಪುಗೊಳ್ಳುತ್ತವೆ. ಇದೀಗ ಮಕರ ರಾಶಿಯಲ್ಲಿ ಸೂರ್ಯ-ಬುಧರ ಯುತಿಯಿಂದ ಬುಧಾದಿತ್ಯ ಯೋಗ ರೂಪುಗೊಳ್ಳುತ್ತಿದೆ. ಈ ಯೋಗವು ಕೆಲವು ರಾಶಿಯವರ ಜೀವನದಲ್ಲಿ ಭಾರೀ ಯಶಸ್ಸಿನ ಜೊತೆಗೆ ಅಪಾರ ಸಂಪತ್ತನ್ನು ಕೂಡ ಕರುಣಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಮಕರ ರಾಶಿಯಲ್ಲಿ ಬುಧಾದಿತ್ಯ ಯೋಗ- ಈ ಮೂರು ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ:-
ಸಿಂಹ ರಾಶಿ:
ಬುಧಾದಿತ್ಯ ಯೋಗವು ಈ ರಾಶಿಯವರಿಗೆ ಸುವರ್ಣ ಸಮಯವನ್ನು ತಂದಿದೆ. ಈ ಸಮಯದಲ್ಲಿ ಸಿಂಹ ರಾಶಿಯ ವಿವಾಹಿತರಿಗೆ ಮಕ್ಕಳಿಂದ ಸಂತೋಷ ಪ್ರಾಪ್ತಿಯಾಗಲಿದೆ. ಉದ್ಯೋಗಸ್ಥರು ತಮ್ಮ ಗುರಿ ಸಾಧಿಸಿ, ಬಡ್ತಿ ಪಡೆಯುವ ಸಾಧ್ಯತೆಯೂ ಇದೆ. ಈ ಸಮಯದಲ್ಲಿ ನಿಮ್ಮ ಹಣಕಾಸಿನ ಸ್ಥಿತಿಯೂ ಸುಧಾರಿಸಲಿದ್ದು ಎಲ್ಲವೂ ಒಳ್ಳೆಯದೇ ಆಗಲಿದೆ.
ಇದನ್ನೂ ಓದಿ- ‘ಶನಿ’ ರಾಶಿಯಲ್ಲಿ ಸೂರ್ಯ ಮತ್ತು ಶುಕ್ರರ ಸಂಯೋಗ: ಈ ರಾಶಿಯವರ ಅದೃಷ್ಟ ತೆರೆದುಕೊಳ್ಳುತ್ತದೆ!
ವೃಶ್ಚಿಕ ರಾಶಿ:
ಮಕರ ರಾಶಿಯಲ್ಲಿ ಬುಧ-ಆದಿತ್ಯನ ಸಂಯೋಗವು ವೃಶ್ಚಿಕ ರಾಶಿಯವರಿಗೆ ತುಂಬಾ ಫಲಪ್ರದವಾಗಿದೆ. ಈ ಸಮಯದಲ್ಲಿ ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಬಂಪರ್ ಲಾಭವಾಗಲಿದೆ. ಹೂಡಿಕೆಯು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ವೃತ್ತಿ ರಂಗದಲ್ಲೂ ಕೂಡ ಇಷ್ಟು ದಿನ ಮನೆ ಮಾಡಿದ್ದ ಅಡೆತಡೆಗಳು ದೂರವಾಗಿ ಭಾರೀ ಯಶಸ್ಸನ್ನು [ಪಡೆಯುವಿರಿ.
ಇದನ್ನೂ ಓದಿ- Shani Grah 2023 : ನಿಮ್ಮ ಜಾತಕದಲ್ಲಿ 'ಶನಿ ದೋಷ'ವಿದೆಯಾ? ಹಾಗಿದ್ರೆ, ಇಲ್ಲಿದೆ ಪರಿಹಾರಗಳು!
ಮಕರ ರಾಶಿ:
ಮಕರ ರಾಶಿಯಲ್ಲಿಯೇ ಬುಧಾದಿತ್ಯ ಯೋಗ ರೂಪುಗೊಂಡಿರುವುದರಿಂದ ಇದರ ಗರಿಷ್ಠ ಪರಿಣಾಮ ಈ ರಾಶಿಯವರ ಮೇಲೆಯೇ ಕಂಡು ಬರಲಿದೆ. ಈ ಸಮಯದಲ್ಲಿ ನೀವು ನಿಮ್ಮ ಇಷ್ಟು ದಿನಗಳ ಆರೋಗ್ಯ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತೀರಿ. ನ್ಯಾಯಾಲಯ ಪ್ರಕರಣಗಳು ನಿಮ್ಮ ಪರವಾಗಿ ಇತ್ಯರ್ಥಗೊಳ್ಳಲಿವೆ. ಹಣಕಾಸಿನ ಹರಿವು ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿ ಸುಧಾರಿಸಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.