Pitru Paksha: ಪೂರ್ವಜರ ಆಶೀರ್ವಾದಕ್ಕೆ ಪಿತೃಪಕ್ಷದ ಸಮಯದಲ್ಲಿ ಈ ವಸ್ತುಗಳನ್ನು ಖರೀದಿಸಿ!
ಪಿತೃ ಪಕ್ಷ: ಹಿಂದೂ ಸಂಪ್ರದಾಯದಲ್ಲಿ ಪಿತೃ ಪಕ್ಷವು ಪೂರ್ವಜರನ್ನು ನೆನಪಿಸಿಕೊಳ್ಳುವ ಪ್ರಮುಖ ಸಂದರ್ಭವಾಗಿದೆ. ಈ ವರ್ಷ ಇದು ಸೆಪ್ಟೆಂಬರ್ 29ರಿಂದ ಪ್ರಾರಂಭವಾಗುತ್ತದೆ. ಪಿತೃ ಪಕ್ಷದ ಸಮಯದಲ್ಲಿ ಕೆಲವು ವಿಶೇಷ ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಈ ವಸ್ತುವನ್ನು ಖರೀದಿಸುವುದರಿಂದ ಪೂರ್ವಜರು ಸಂತೋಷಪಡುತ್ತಾರೆ ಎಂದು ಶಾಸ್ತ್ರಗಳಲ್ಲಿ ನಂಬಲಾಗಿದೆ.
ನವದೆಹಲಿ: ಹಿಂದೂ ಧರ್ಮದಲ್ಲಿ ಪಿತೃ ಪಕ್ಷವು ಪ್ರಮುಖ ಪಾತ್ರವನ್ನು ಹೊಂದಿದೆ. ಇದು ಸೆಪ್ಟೆಂಬರ್ 29ರಿಂದ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಹೆಚ್ಚಿನ ಜನರು ತಮ್ಮ ಪೂರ್ವಜರನ್ನು ನೆನಪಿಸಿಕೊಳ್ಳುತ್ತಾರೆ. ಅವರನ್ನು ಸಮಾಧಾನಪಡಿಸಲು ವಿವಿಧ ವಿಧಾನಗಳ ಮೂಲಕ ಪೂಜೆ ಸಲ್ಲಿಸುತ್ತಾರೆ. ವಾಸ್ತವವಾಗಿ ಪಿತೃ ಪಕ್ಷವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಜನರು ವಿವಿಧ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸುತ್ತಾರೆ. ಆದರೆ ಪಿತೃ ಪಕ್ಷದ ಸಮಯದಲ್ಲಿ ಖರೀದಿಸಲು ಲಾಭದಾಯಕವಾದ ಕೆಲವು ವಸ್ತುಗಳು ಇವೆ. ಈ ವಸ್ತುಗಳನ್ನು ಖರೀದಿಸುವ ಮೂಲಕ ಪೂರ್ವಜರು ಸಂತೋಷಪಡುತ್ತಾರೆ ಮತ್ತು ವ್ಯಕ್ತಿಯು ಅವರ ಆಶೀರ್ವಾದವನ್ನು ಪಡೆಯುತ್ತಾರೆ. ಈ ವಸ್ತುಗಳು ಯಾವುವು ಎಂದು ತಿಳಿಯಿರಿ.
ಕಪ್ಪು ಎಳ್ಳು: ಪಿತೃ ಪಕ್ಷದ ಸಮಯದಲ್ಲಿ ಕಪ್ಪು ಎಳ್ಳನ್ನು ಖರೀದಿಸಿ ಪೂರ್ವಜರ ಶ್ರಾದ್ಧಕ್ಕಾಗಿ ದಾನ ಮಾಡುವುದು ಮಂಗಳಕರ. ಹೀಗೆ ಮಾಡುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ ಮತ್ತು ನಿಮ್ಮ ಜೀವನದಲ್ಲಿ ಸಂತೋಷವನ್ನು ತಂದುಕೊಡುತ್ತಾರೆ.
ಬಾರ್ಲಿ: ಬಾರ್ಲಿಗೆ ಚಿನ್ನದ ಸ್ಥಾನಮಾನವನ್ನು ನೀಡಲಾಗಿದೆ. ಪಿತೃಪಕ್ಷದ ಸಮಯದಲ್ಲಿ ಬಾರ್ಲಿಯನ್ನು ಖರೀದಿಸಿ ನಂತರ ಅದನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಬಾರ್ಲಿಯನ್ನು ದಾನ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ.
ಇದನ್ನೂ ಓದಿ: Vastu Tips: ಮನೆ ಮುಂದೆ ಬೇವಿನ ಮರ ಇರುವುದು ಶುಭವೋ? ಅಶುಭವೋ?
ಹೊಸ ವಸ್ತ್ರಗಳು: ಪಿತೃ ಪಕ್ಷದಲ್ಲಿ ಹೊಸ ವಸ್ತ್ರಗಳನ್ನು ಖರೀದಿಸಿ ಬ್ರಾಹ್ಮಣರಿಗೆ ಪೂರ್ವಿಕರಿಗಾಗಿ ದಾನ ಮಾಡಬೇಕು. ಪೂರ್ವಜರು ಹೊಸ ವಸ್ತ್ರಗಳ ದಾನದಿಂದ ಸಂತೋಷಪಡುತ್ತಾರೆ. ಅವರ ವಂಶಸ್ಥರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ಒದಗಿಸುತ್ತಾರೆ.
ಅಕ್ಕಿ: ಧಾರ್ಮಿಕ ನಂಬಿಕೆಗಳ ಪ್ರಕಾರ ಅಕ್ಕಿಯನ್ನು ಬೆಳ್ಳಿ ಎಂದು ಪರಿಗಣಿಸಲಾಗುತ್ತದೆ. ಪಿತೃಪಕ್ಷದಂದು ಅಕ್ಕಿಯನ್ನು ಖರೀದಿಸಿ ದಾನ ಮಾಡುವುದರಿಂದ ಪೂರ್ವಜರನ್ನು ಸಂತೋಷಪಡಿಸಿ ಸಂಪತ್ತು ವೃದ್ಧಿಸುತ್ತದೆ.
ಮಲ್ಲಿಗೆ ಎಣ್ಣೆ: ಶಾಸ್ತ್ರಗಳ ಪ್ರಕಾರ ಪಿತೃಪಕ್ಷದ ಸಮಯದಲ್ಲಿ ಪೂರ್ವಜರಿಗೆ ಮಲ್ಲಿಗೆ ಎಣ್ಣೆಅರ್ಪಿಸುವುದರಿಂದ ಅವರನ್ನು ತೃಪ್ತಿಪಡಿಸಬಹುದು. ಇದರಿಂದ ಪೂರ್ವಜರು ಅವರ ವಂಶಸ್ಥರ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ನೀಡುತ್ತಾರೆ.
ಇದನ್ನೂ ಓದಿ: ಶನಿಯ ಸಾಡೇಸಾತಿಯಿಂದ ಮುಕ್ತಿ ನೀಡುತ್ತೇ ಈ ಒಂದು ಚಿಕ್ಕ ಉಪಾಯ!
ಬಿಳಿ ಹೂಗಳು: ಬಿಳಿ ಹೂಗಳು ಪೂರ್ವಜರಿಗೆ ಪ್ರಿಯವೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಪಿತೃ ಪಕ್ಷದಂದು ಬಿಳಿ ಹೂವುಗಳನ್ನು ಖರೀದಿಸಿ ಪೂರ್ವಜರಿಗೆ ಅರ್ಪಿಸಬೇಕು. ಇದು ಅವರಿಗೆ ಸಂತೋಷವನ್ನು ನೀಡುತ್ತದೆ ಮತ್ತು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಉಳಿಯುತ್ತದೆ.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.