ಹೊಸ ವರ್ಷದಲ್ಲಿ ಈ ವಸ್ತುಗಳನ್ನು ಮನೆಗೆ ತನ್ನಿ ! ಮನೆಗೆ ಮಹಾಲಕ್ಷ್ಮಿಯ ಪ್ರವೇಶವಾಗುವುದು
Vastu Tips For Wealth :ಮನೆಯಲ್ಲಿ ಈ ವಸ್ತುಗಳನ್ನು ಇಡುವುದರಿಂದ ಸಂತೋಷ, ಸಮೃದ್ಧಿ ಬರುತ್ತದೆ ಎಂದು ಹೇಳಲಾಗುತ್ತದೆ. ಹೊಸ ವರ್ಷದಲ್ಲಿ ನಿಮ್ಮ ಜೀವನ ಕೂಡಾ ಸಂತೋಷದಿಂದ ತುಂಬಿರಬೇಕಾದರೆ ವಾಸ್ತು ಪ್ರಕಾರ ಈ ವಸ್ತುಗಳನ್ನು ಮನೆಗೆ ತನ್ನಿ.
Vastu Tips For Wealth :ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಹೊಸ ವರ್ಷವು ಸಂತಸ ತರಲಿ ಎಂಬುವುದೇ ಎಲ್ಲರ ಹಾರೈಕೆಯಾಗಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಖರೀದಿಸಿದರೆ ತಂದರೆ ಆ ವಸ್ತುಗಳೊಂದಿಗೆ ಅದೃಷ್ಟ ಕೂಡಾ ಮನೆ ಪ್ರವೇಶಿಸುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಈ ವಸ್ತುಗಳನ್ನು ಇಡುವುದರಿಂದ ಸಂತೋಷ, ಸಮೃದ್ಧಿ ಬರುತ್ತದೆ ಎಂದು ಹೇಳಲಾಗುತ್ತದೆ. ಹೊಸ ವರ್ಷದಲ್ಲಿ ನಿಮ್ಮ ಜೀವನ ಕೂಡಾ ಸಂತೋಷದಿಂದ ತುಂಬಿರಬೇಕಾದರೆ ವಾಸ್ತು ಪ್ರಕಾರ ಈ ವಸ್ತುಗಳನ್ನು ಮನೆಗೆ ತನ್ನಿ.
ಶಂಖ :
ಹಿಂದೂ ಧರ್ಮದಲ್ಲಿ, ಶಂಖವನ್ನು ಅತ್ಯಂತ ಪೂಜ್ಯ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯಲ್ಲಿ ಶಂಖವಿದ್ದರೆ, ಸಂತೋಷ ಮತ್ತು ಸಮೃದ್ಧಿ ಕೂಡಾ ನಿಮ್ಮ ಮನೆಯಲ್ಲಿ ನೆಲೆಸುತ್ತದೆ. ಮನೆಯಲ್ಲಿ ಶಂಖವನ್ನು ಇಟ್ಟುಕೊಳ್ಳುವುದರಿಂದ ಆರ್ಥಿಕ ಸಮೃದ್ಧಿಯಾಗುತ್ತದೆ. ಆದ್ದರಿಂದ, ಹೊಸ ವರ್ಷದಲ್ಲಿ ನೀವು ಶಂಖವನ್ನು ಖರೀದಿಸಿದರೆ ಅದರೊಂದಿಗೆ ಅದೃಷ್ಟ ಕೂಡಾ ನಿಮ್ಮದಾಗುವುದು.
ಇದನ್ನೂ ಓದಿ : Surya Gochar: ನಾಳೆಯಿಂದ ಈ 4 ರಾಶಿಯವರಿಗೆ ಬಂಗಾರದ ಸಮಯ, ಉದ್ಯೋಗದಲ್ಲಿ ಯಶಸ್ಸು
ತುಳಸಿ :
ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ದೇವಿಯು ತುಳಸಿ ಗಿಡದಲ್ಲಿ ನೆಲೆಸಿರುತ್ತಾಳೆ. ಆದ್ದರಿಂದ ನಿಮ್ಮ ಮನೆಯಲ್ಲಿ ತುಳಸಿ ಗಿಡವಿದ್ದರೆ ಸಂಪತ್ತಿಗೆ ಯಾವತ್ತೂ ಕೊರತೆ ಇರುವುದಿಲ್ಲ. ಹಾಗಾಗಿ ಹೊಸ ವರ್ಷದಲ್ಲಿ ಮನೆಯಲ್ಲಿ ತುಳಸಿ ಗಿಡವನ್ನು ನೆಡಬೇಕು.
ನವಿಲು ಗರಿ :
ಶ್ರೀಕೃಷ್ಣನಿಗೆ ನವಿಲು ಗರಿಗಳು ಬಹಳ ಪ್ರಿಯ. ನವಿಲು ಗರಿಯನ್ನು ಲಕ್ಷ್ಮೀ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ನವಿಲು ಗರಿಗಳಿರುವ ಮನೆಯಲ್ಲಿ ಲಕ್ಷ್ಮಿ ದೇವಿಯು ಯಾವಾಗಲೂ ನೆಲೆಸುತ್ತಾಳೆ. ಅಲ್ಲದೆ, ಆ ಮನೆಯಲ್ಲಿ ಹಣ ಸಂಪತ್ತಿಗೆ ಕೊರತೆಯಾಗುವುದೇ ಇಲ್ಲ. ಹೊಸ ವರ್ಷದ ಸಂದರ್ಭದಲ್ಲಿ ನವಿಲು ಗರಿಗಳನ್ನು ಖರೀದಿಸಬೇಕು.
ಇದನ್ನೂ ಓದಿ : ನವಪಂಚಮ ಯೋಗ.. 2024 ರಲ್ಲಿ ಈ ರಾಶಿಗಳಿಗೆ ಸಂಪತ್ತಿನ ಹೊಳೆ, ಕೈತುಂಬಾ ಹಣ ಪ್ರತಿ ಕೆಲಸದಲ್ಲೂ ಜಯ!
ಬೆಳ್ಳಿ ಆಮೆ :
ವಾಸ್ತು ಶಾಸ್ತ್ರದ ಪ್ರಕಾರ ಬೆಳ್ಳಿಯ ಆಮೆಯನ್ನು ಮನೆಯಲ್ಲಿ ಇಡುವುದು ತುಂಬಾ ಶುಭ. ನೀವು ಹೊಸ ವರ್ಷದಲ್ಲಿ ಬೆಳ್ಳಿ ಆಮೆಯನ್ನು ಖರೀದಿಸಿ ಮನೆಗೆ ತಂದರೆ, ಅದು ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಹೊಸ ವರ್ಷದ ಸಂದರ್ಭದಲ್ಲಿ ನೀವು ಬೆಳ್ಳಿ ಆಮೆಯನ್ನು ಖರೀದಿಸಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.