ಬೆಂಗಳೂರು: ಶನಿಯ ಕೆಟ್ಟ ದೃಷ್ಟಿ ಜೀವನವನ್ನೇ ನಾಶಪಡಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ, ಆದರೆ ಶನಿಯು ಶುಭ ಫಲಿತಾಂಶಗಳನ್ನು ಕೂಡ ನೀಡುತ್ತಾನೆ ಎಂಬುದು ಕೆಲವೇ ಜನರಿಗೆ ಮಾತ್ರ ತಿಳಿದಿದೆ.ಶನಿಯು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ, ಅವನು ವ್ಯಕ್ತಿಯ ಜೀವನವನ್ನು ಸಂತೋಷದಿಂದ ತುಂಬುತ್ತಾನೆ (Spiritual News In Kannada). ಶನಿಯ ಕೃಪೆಯು ಓರ್ವ ಭಿಕ್ಷುಕನನ್ನು ಅರಸನನ್ನಾಗಿ ಕೂಡ ಮಾಡುತ್ತದೆ ಎನ್ನಲಾಗುತ್ತದೆ. ಇದಲ್ಲದೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯು ಕರ್ಮಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತಾನೆ. ವ್ಯಕ್ತಿಯ ಕರ್ಮಗಳು ಒಂದು ವೇಳೆ ಉತ್ತಮವಾಗಿದ್ದರೆ, ಜಾತಕದಲ್ಲಿ ಶನಿ ಅಶುಭವಾಗಿದ್ದರೂ ಕೂಡ ವ್ಯಕ್ತಿಗೆ ಅಷ್ಟೊಂದು ಸಮಸ್ಯೆ ಎದುರಾಗುವುದಿಲ್ಲ. ಆದರೆ, ವ್ಯಕ್ತಿಯ ಕರ್ಮಗಳು ಒಂದು ವೇಳೆ ಸರಿಯಾಗಿಲ್ಲದಿದ್ದರೆ, ಶನಿಯ ಶುಭ ಸ್ಥಾನವು ಕೂಡ ವ್ಯಕ್ತಿಗೆ ಪೂರ್ಣ ಫಲಿತಾಂಶಗಳು ಪ್ರಾಪ್ತಿಯಾಗುವುದಿಲ್ಲ.

COMMERCIAL BREAK
SCROLL TO CONTINUE READING

ಜಾತಕದಲ್ಲಿನ ಶುಭ ಶನಿಯು ಅನೇಕ ಉಡುಗೊರೆಗಳನ್ನು ನೀಡುತ್ತಾನೆ
ಜಾತಕದಲ್ಲಿ ಶನಿಯ ಸ್ಥಾನವು ಶುಭವಾಗಿದ್ದರೆ ಮತ್ತು ವ್ಯಕ್ತಿಯ ಕರ್ಮಗಳು ಕೂಡ ಉತ್ತಮವಾಗಿದ್ದರೆ, ವ್ಯಕ್ತಿಯು ತನ್ನ ಜೀವನದಲ್ಲಿ ಅನೇಕ ಉಡುಗೊರೆಗಳನ್ನು ಪಡೆಯುತ್ತಾನೆ. ಶನಿಯು ಜೀವನದಲ್ಲಿ ಏನನ್ನು ನೀಡುತ್ತಾನೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. 

ಪ್ರಗತಿ: ಜಾತಕದಲ್ಲಿ ಶನಿಯ ಮಂಗಳ ಸ್ಥಾನವು ವ್ಯಕ್ತಿಗೆ ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ನೀಡುತ್ತದೆ. ವ್ಯಕ್ತಿಯು ಯಾವ ಕ್ಷೇತ್ರಕ್ಕೆ ಹೋದರೂ, ಅವನು ವೇಗವಾಗಿ ಯಶಸ್ಸನ್ನು ಪಡೆಯುತ್ತಾನೆ.

ಸಂತೋಷ ಪ್ರಾಪ್ತಿಯಾಗುತ್ತದೆ: ಶನಿಯ ಮಂಗಳ ಸ್ಥಾನವು ವ್ಯಕ್ತಿಗೆ ಐಷಾರಾಮಿ ಮನೆಯಲ್ಲಿ ವಾಸಿಸುವ ಅವಕಾಶವನ್ನು ನೀಡುತ್ತದೆ.

ಗೌರವ: ಶನಿಯ ಮಂಗಳ ಸ್ಥಾನವು ವ್ಯಕ್ತಿಗೆ ಸಾಕಷ್ಟು ಘನತೆ ಮತ್ತು ಗೌರವವನ್ನು ನೀಡುತ್ತದೆ. ಶನಿಯ ಪ್ರಭಾವದಿಂದಾಗಿ, ವ್ಯಕ್ತಿಯು ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮಿಯಾಗುತ್ತಾನೆ ಮತ್ತು ಅನ್ಯಾಯದ ವಿರುದ್ಧ ಎದ್ದು ನಿಲ್ಲುತ್ತಾನೆ. ವ್ಯಕ್ತಿಯ ಈ ಗುಣಗಳು ಆತನಿಗೆ ಸಾಕಷ್ಟು ಗೌರವವನ್ನು ತಂದುಕೊಡುತ್ತವೆ.

ಶನಿದೇವನನ್ನು ಹೇಗೆ ಪ್ರಸನ್ನಗೊಳಿಸಬೇಕು
ಶನಿಯು ಕರ್ಮಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ, ಆದ್ದರಿಂದ ವ್ಯಕ್ತಿಯು ಶನಿ ದೇವರಿಗೆ ಇಷ್ಟವಾದ ಕರ್ಮಗಳನ್ನು ಮಾಡಬೇಕು. ಬಡವರಿಗೆ, ಅಸಹಾಯಕರಿಗೆ ಸಹಾಯ ಮಾಡುವಂತೆ, ಎಲ್ಲದರಲ್ಲೂ ಪ್ರಾಮಾಣಿಕರಾಗಿ, ಮಾದಕ ವಸ್ತುಗಳಿಂದ ದೂರವಿರಿ.


ಇದನ್ನೂ ಓದಿ-ಶೀಘ್ರದಲ್ಲೇ ಛಾಯಾ ಗ್ರಹಗಳಾದ ರಾಹು-ಕೇತುಗಳ ರಾಶಿ ಪರಿವರ್ತನೆ, ಈ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!

ಇದಲ್ಲದೇ ಶನಿದೇವನನ್ನು ಪ್ರಸನ್ನಗೊಳಿಸುವ ಕೆಲ ಕಾರ್ಯಗಳನ್ನು ಮಾಡಬೇಕು. ಉದಾಹರಣೆಗೆ, ಶನಿದೇವನ ಆಶೀರ್ವಾದ ಪಡೆಯಲು, ಹನುಮನನ್ನು ಪೂಜಿಸಿ. ಶನಿವಾರದಂದು ಆಲದ ಮರಕ್ಕೆ ನೀರನ್ನು ಅರ್ಪಿಸಿ. ಶನಿದೇವನಿಗೆ ಎಣ್ಣೆಯನ್ನು ಅರ್ಪಿಸಿ.


ಇದನ್ನೂ ಓದಿ-ಸ್ವರಾಶಿಗೆ ಮಂಗಳನ ಪ್ರವೇಶ, ಲಕ್ಷ್ಮಿ ನಾರಾಯಣ ಕೃಪೆಯಿಂದ ಈ ಜನರಿಗೆ ಕುಬೇರ ನಿಧಿ ಪ್ರಾಪ್ತಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.