ಬೆಂಗಳೂರು : ಗುರುವಾರದ ಉಪವಾಸವನ್ನು  ಪುರುಷರು, ಮಹಿಳೆಯರು   ಅನೇಕ ಮಂದಿ ಆಚರಿಸುತ್ತಾರೆ. ಗುರುವಾರದ ವೃತಾಚರಣೆ ಅತ್ಯಂತ ಫಲಪ್ರದ ಎಂದು ಹೇಳಲಾಗುತ್ತದೆ. ಕೆಲವರು ಗುರುವಾರದ ವೃತವನ್ನು ರಾಯರಿಗೆ ಆರೋಇಸಿದರೆ ಇನ್ನು ಕೆಲವರು ಸಾಯಿಬಾಬನಿಗೆ ಸಲ್ಲಿಸುತ್ತಾರೆ. ಇನ್ನು ಕೆಲವರು ಈ ದಿನದ ಉಪವಾಸವನ್ನು ಭಗವಾನ್ ವಿಷ್ಣುವಿನ ಹೆಸರಿನಲ್ಲಿ ಮಾಡುತ್ತಾರೆ. 


COMMERCIAL BREAK
SCROLL TO CONTINUE READING

ಈ ವೃತಾಚರಣೆಯಿಂದ ಜೀವನದಲ್ಲಿ  ಸುಖ ಶಾಂತಿ  ಸಮೃದ್ಧಿ ಸಿಗುತ್ತದೆ ಎನ್ನುವುದು ನಂಬಿಕೆ. ಇದಲ್ಲದೇ ಈ ವೃತದಿಂದ ಮಕ್ಕಳು, ಮತ್ತು ಮದುವೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.ಆದರೆ ಗುರುವಾರದ ವೃತದಲ್ಲಿ ದೋಷವಿದ್ದ ವೃತದ ಫಲ ಸಿಗುವುದಿಲ್ಲ ಎಂದು ಹೇಳಲಾಗುತ್ತದೆ. ಹೀಗಿರುವಾಗ ಮುಟ್ಟಿನ ಸಂದರ್ಭದಲ್ಲಿ  ಉಪವಾಸ ಮಾಡಬೇಕೇ ಅಥವಾ ಬೇಡವೇ ಎನ್ನುವ ಪ್ರಶ್ನೆ ಹೆಣ್ಣು ಮಕ್ಕಳನ್ನು ಸಹಜವಾಗಿಯೇ ಕಾಡುತ್ತಿರುತ್ತದೆ.


ಇದನ್ನೂ ಓದಿ :  ತಮ್ಮ ಗೊಂದಲ ಸ್ವಭಾವದಿಂದಲೇ ಸಮಸ್ಯೆ ಮೈ ಮೇಲೆ ಹಾಕಿಕೊಳ್ಳುತ್ತಾರೆ ಈ ರಾಶಿಯವರು ! ಸಂಬಂಧವನ್ನು ಕೆಡಿಸಿಕೊಳ್ಳುವುದೇ ಹೆಚ್ಚು


ಮುಟ್ಟಿನ ಅವಧಿಯಲ್ಲಿ ಉಪವಾಸ ಮಾಡಬೇಕೇ ಅಥವಾ ಬೇಡವೇ? 
ಗುರುವಾರದ ಉಪವಾಸದಲ್ಲಿ ಮಡಿ ಮೈಲಿಗೆಗೆ ಹೆಚ್ಚಿನ ಪ್ರಾಶಸ್ತ್ಯ. ಮಹಿಳೆಯರು ತಮ್ಮ ಮುಟ್ಟಿನ ಅವಧಿಯಲ್ಲಿ ಗುರುವಾರದ  ಉಪವಾಸ ವೃತವನ್ನು ಆಚರಿಸಬಾರದು. ಧಾರ್ಮಿಕ  ನಂಬಿಕೆಗಳ ಪ್ರಕಾರ, ಮುಟ್ಟಿನ ಸಮಯದಲ್ಲಿ  ಉಪವಾಸ ಮಾಡುವುದಿಲ್ಲ. ಇದಲ್ಲದೆ, ಈ ಅವಧಿಯಲ್ಲಿ ದೇವತೆಗಳ ಆರಾಧನೆಯನ್ನು ನಿಷೇಧಿಸಲಾಗಿದೆ. ಹೀಗಾಗಿ, ಗುರುವಾರದ ಉಪವಾಸ ಮಾಡುವವರು ಈ ಬಗ್ಗೆ ತಿಳಿದು ಕೊಂಡಿರಬೇಕು.  


ಗುರುವಾರದ ಉಪವಾಸದ ವೇಳೆ ನೆನಪಿರಲಿ ಈ ವಿಚಾರಗಳು  :  
ಗುರುವಾರ ಉಪವಾಸ ಮಾಡುವವರು ತಪ್ಪಿಯೂ ಕೂಡಾ  ಕೂದಲು, ಗಡ್ಡ, ಉಗುರು ಕತ್ತರಿಸಬಾರದು. ಹೀಗೆ ಮಾಡುವುದರಿಂದ ಉಪವಾಸದ ಫಲ ಸಿಗುವುದಿಲ್ಲ. ಇದಲ್ಲದೆ, ಈ ಉಪವಾಸದ ಸಮಯದಲ್ಲಿ ಮನೆಯಿಂದ ಕಸ ಅಥವಾ ಬೇಡದ ವಸ್ತುಗಳನ್ನು ಮನೆಯಿಂದ ಹೊರ  ಹಾಕಬಾರದು. ಇಷ್ಟೇ ಅಲ್ಲ, ಗುರುವಾರದ ಉಪವಾಸದಲ್ಲಿ ಉಪ್ಪು  ಸೇವನೆ ಮಾಡುವಂತಿಲ್ಲ.  


ಇದನ್ನೂ ಓದಿ : 27ವರ್ಷಗಳ ಬಳಿಕ ಪಿತೃವಿನ ನಕ್ಷತ್ರದಲ್ಲಿ ಶನಿ ಪ್ರವೇಶ: ಈ ರಾಶಿಯವರಿಗೆ ಸಕಲೈಶ್ವರ್ಯ ಪ್ರಾಪ್ತಿ..!


ಮದುವೆ ಮತ್ತು ಮಕ್ಕಳಿಗೆ ಏನು ಮಾಡಬೇಕು? 
ಅಕಾಲಿಕ ವಿವಾಹ ಮತ್ತು ಮಕ್ಕಳಿಗಾಗಿ ಗುರುವಾರ ಉಪವಾಸವನ್ನು ಆಚರಿಸಿ. ಬೆಳಿಗ್ಗೆ ಸ್ನಾನದ ನಂತರ, ಸೂರ್ಯನಿಗೆ ಅರಿಶಿನ ಬೆರೆಸಿದ ನೀರನ್ನು ಅರ್ಪಿಸಿ. ಇದರ ನಂತರ, ಗುರುವಿನ ಮಂತ್ರವನ್ನು ) ಜಪಿಸಿ. 


(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ  ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.