Chanakya Niti For Money: ಆಚಾರ್ಯ ಚಾಣಕ್ಯ ಓರ್ವ ತತ್ವಜ್ಞಾನಿಯಾಗಿದ್ದರು. ಅವರು ಚಾಣಕ್ಯ ನೀತಿಯನ್ನು ರಚಿಸಿದ್ದಾರೆ, ಅವರ ನೀತಿಗಳನ್ನು ಇಂದಿಗೂ ಕೂಡ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಕಷ್ಟಪಟ್ಟು ದುಡಿಯುವ, ಹಣ ಸಂಪಾದಿಸುವ ಆದರೆ ಮನೆಯಲ್ಲಿ ಹಣವನ್ನು ಉಳಿಸಲು ಸಾಧ್ಯವಾಗದಂತಹ ಜನರ ಬಗ್ಗೆ ಚಾಣಕ್ಯ ತನ್ನ ನೀತಿ ಶಾಸ್ತ್ರದಲ್ಲಿ ಸಲಹೆಗಳನ್ನು ನೀಡಿದ್ದಾರೆ. ಇದರ ಹಿಂದಿನ ಕಾರಣ ವ್ಯಕ್ತಿಯ ತಪ್ಪು ಅಭ್ಯಾಸಗಳಾಗಿರಬಹುದು ಎನ್ನುತ್ತಾರೆ ಚಾಣಕ್ಯ. ಎಂತಹ  ಜನರ ಬಳಿ ಉಳಿಯುವುದಿಲ್ಲ ತಿಳಿದುಕೊಳ್ಳೋಣ ಬನ್ನಿ, 
 
1. ಸೋಮಾರಿ ಜನರು (Chanakya Niti For Success)
ಚಾಣಕ್ಯ ನೀತಿಯ ಪ್ರಕಾರ, ತುಂಬಾ ಸೋಮಾರಿಯಾದ ಜನರು ಎಂದಿಗೂ ಹಣವನ್ನು ಉಳಿಸಲು ಸಾಧ್ಯವಿಲ್ಲ ಎಂದು ಚಾಣಕ್ಯ ಹೇಳುತ್ತಾರೆ. ಕೆಲಸಕ್ಕಿಂತ ಸೋಮಾರಿತನದ ಮೇಲೆ ಹೆಚ್ಚು ಗಮನ ಹರಿಸುವ ಜನರು ಎಂದಿಗೂ ಹಣವನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಸೋಮಾರಿತನದಿಂದಾಗಿ ಇಂತಹ ಜನರು ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಚಾಣಕ್ಯ.


COMMERCIAL BREAK
SCROLL TO CONTINUE READING

2. ಮಹಿಳೆಯರನ್ನು ಅವಮಾನಿಸುವವರು (Chanakya Niti Related To Goddess Lakshmi)
ಆಚಾರ್ಯ ಚಾಣಕ್ಯರ ಚಾಣಕ್ಯ ನೀತಿಯ ಪ್ರಕಾರ, ಲಕ್ಷ್ಮಿ ದೇವಿಯು ಮಹಿಳೆಯರನ್ನು ಅವಮಾನಿಸುವವರ ಜನರ ಮೇಲೆ ಮುನಿಸಿಕೊಳ್ಳುತ್ತಾಳೆ ಮತ್ತು ಅವರನ್ನು ಗೌರವಿಸುವುದಿಲ್ಲ ಎನ್ನುತ್ತಾರೆ. ಈ ಜನರು ಜೀವನದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜೀವನದಲ್ಲಿ ಬಡತನವನ್ನು ನೋಡಿ ಚಟಕ್ಕೆ ಬೀಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹೆಣ್ಣನ್ನು ಅಪ್ಪಿತಪ್ಪಿಯೂ ಅವಮಾನಿಸಬಾರದು.


3. ಕೆಟ್ಟ ಸಹವಾಸ ಹೊಂದಿರುವ ಜನರು
ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯು ಕೆಟ್ಟ ಸಹವಾಸದಲ್ಲಿ ವಾಸಿಸುವ ಮತ್ತು ಕೆಟ್ಟ ಕೆಲಸಗಳನ್ನು ಮಾಡುವ ಜನರ ಮೇಲೆ ಎಂದಿಗೂ ಕೃಪೆ ತೋರುವುದಿಲ್ಲ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಈ ಜನರು ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಕಾಲಕಾಲಕ್ಕೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಇಂತಹ ಜನ ಹಣ ಸಂಪಾದಿಸಿದರೂ ಅದನ್ನು ಸರಿಯಾಗಿ ಬಳಸಿಕೊಳ್ಳುವುದಿಲ್ಲ ಎಂದು ಚಾಣಕ್ಯ ಹೇಳಿದ್ದಾರೆ.


ಇದನ್ನೂ ಓದಿ-Kuber Yog: ಹನ್ನೆರಡು ವರ್ಷಗಳ ಕುಬೇರ ಯೋಗ ರಚನೆ, ಲಕ್ಷ್ಮಿ ಕೃಪೆಯಿಂದ ಈ ಜನರ ಮೇಲೆ 2025ರವರೆಗೆ ಭಾರಿ ಧನವೃಷ್ಟಿ!


4. ಬೆಳಗ್ಗೆ ದೀರ್ಘಕಾಲದವರೆಗೆ ಮಲಗುವ ಜನರು
ಚಾಣಕ್ಯ ನೀತಿಯ ಪ್ರಕಾರ, ದೀರ್ಘಕಾಲದವರೆಗೆ ಮಲಗುವ ಜನರ ಮನೆಯಲ್ಲಿ ಸಂಪತ್ತು ಎಂದಿಗೂ ಉಳಿಯುವುದಿಲ್ಲ ಎನ್ನಲಾಗಿದೆ. ದೀರ್ಘಾವಧಿಯ ನಿದ್ದೆಯು ಜೀವನದಲ್ಲಿ ಅನೇಕ ದೊಡ್ಡ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಇಂತಹ ಜನರು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುವುದಿಲ್ಲ ಮತ್ತು ಆಗಾಗ್ಗೆ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.


ಇದನ್ನೂ ಓದಿ-ಗುರುವಿನ ರಾಶಿಯಲ್ಲಿ ನಾಲ್ಕು ದೊಡ್ಡ ಗ್ರಹಗಳ ಸಂತೆ, ಈ ಜನರಿಗೆ ಹಗಲು ರಾತ್ರಿ ಎನ್ನದೆ ಭಾರಿ ಸಿರಿಸಂಪತ್ತು ಸಿಗಲಿದೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.