ನವದೆಹಲಿ: ಚಾಣಕ್ಯ ನೀತಿಯಲ್ಲಿ ಸಂತೋಷದ ದಾಂಪತ್ಯ ಜೀವನಕ್ಕಾಗಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ತಿಳಿಸಲಾಗಿದೆ. ಇದರ ಪ್ರಕಾರ ಗಂಡ ಮತ್ತು ಹೆಂಡತಿ ಕೆಲವು ಕೆಟ್ಟ ಅಭ್ಯಾಸಗಳು ಅಥವಾ ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡಬಾರದು. ಇಲ್ಲದಿದ್ದರೆ ಅವರ ಉತ್ತಮ ದಾಂಪತ್ಯ ಜೀವನವು ಹಾಳಾಗಬಹುದು. ಆದ್ದರಿಂದ ಈ ತಪ್ಪುಗಳನ್ನು ಆದಷ್ಟು ಅಂತರ ಕಾಯ್ದುಕೊಳ್ಳುವುದು ಉತ್ತಮ. ಪತಿ-ಪತ್ನಿ ಯಾವಾಗಲೂ ಯಾವ ವಿಷಯಗಳಿಂದ ದೂರವಿರಬೇಕು ಎಂಬುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.


COMMERCIAL BREAK
SCROLL TO CONTINUE READING

ಈ ತಪ್ಪುಗಳು ದಂಪತಿಯನ್ನು ಹಾಳುಮಾಡುತ್ತವೆ


ಸುಳ್ಳು ಹೇಳುವುದು: ಪತಿ-ಪತ್ನಿಯರ ನಡುವೆ ವಿಶ್ವಾಸವಿರುವುದು ಬಹಳ ಮುಖ್ಯ. ಇಬ್ಬರು ಸುಳ್ಳು ಹೇಳಿದರೆ ಅಥವಾ ಅನಗತ್ಯವಾಗಿ ಪರಸ್ಪರ ಅನುಮಾನಿಸಿದರೆ ಹಾಗೂ ಅನುಮಾನಕ್ಕೆ ಕಾರಣ ನೀಡಿದರೆ ಅಂತಹ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ.


ಕೋಪ: ಯಾವುದೇ ಸಂಬಂಧ ಮುರಿದು ಬೀಳಲು ಅಥವಾ ಸಂಸಾರದಲ್ಲಿ ಬಿರುಕು ಮೂಡಲು ಕೋಪ ಸಾಕು. ಗಂಡ-ಹೆಂಡತಿ ಕೋಪದಿಂದ ಆದಷ್ಟು ದೂರವಿರಬೇಕು. ಇಲ್ಲದಿದ್ದರೆ ಕೋಪ ದಂಪತಿಯ ಜೀವನವನ್ನೇ ಸರ್ವನಾಶ ಮಾಡುತ್ತದೆ. ಹೀಗಾಗಿ ಉತ್ತಮ ಜೀವನ ನಡೆಸಬಯಸುವ ಪತಿ-ಪತ್ನಿ ಎಂದಿಗೂ ಕೋಪಿಸಿಕೊಳ್ಳಬಾರದು.


ಇದನ್ನೂ ಓದಿ: Astro Tips: ಈ ದಿನದಂದು ಅಪ್ಪಿತಪ್ಪಿಯೂ ಉಗುರು ಕತ್ತರಿಸಬೇಡಿ!


ಅಹಂಕಾರ: ಅಹಂ ಅಥವಾ ಇತರರು ತನಗಿಂತ ಕಡಿಮೆ ಅಂತಾ ಪರಿಗಣಿಸುವುದು ವೈವಾಹಿಕ ಜೀವನದಲ್ಲಿ ಬಿರುಕು ಮುಡಿಸುತ್ತದೆ. ಮದುವೆಯ ಸಂಬಂಧವು ಸಮಾನವಾಗಿರುತ್ತದೆ. ಗಂಡ-ಹೆಂಡತಿ ಇಬ್ಬರೂ ಅಹಂಕಾರ ಅಥವಾ ಅಹಂನಿಂದ ದೂರವಿರಬೇಕು. ಈ ವಿಚಾರದಲ್ಲಿ ಏನಾದರೂ ತಪ್ಪಾದರೆ ಕ್ಷಮೆಯಾಚಿಸಲು ತಡ ಮಾಡಬಾರದು.


ಗೌಪ್ಯತೆಯ ಉಲ್ಲಂಘನೆ: ಪತಿ ಮತ್ತು ಹೆಂಡತಿಯ ಖಾಸಗಿ ವಿಷಯಗಳನ್ನು ಇತರರಿಗೆ ಹೇಳುವುದು ಇಬ್ಬರ ಇಮೇಜ್‌ಗೆ ಕಳಂಕ ತರುತ್ತದೆ. ಇದರಿಂದ ದಂಪತಿ ಸಂಬಂಧ ಹಾಳಾಗಬಹದು. ನೀವು ಸಂತೋಷದ ವೈವಾಹಿಕ ಜೀವನ ಬಯಸಿದರೆ ಪರಸ್ಪರ ಖಾಸಗಿ ವಿಷಯಗಳನ್ನು ಇತರರಿಗೆ ಹೇಳಬಾರದು. ಅವರು ಎಷ್ಟೇ ಆತ್ಮೀಯ ಸ್ನೇಹಿತರಾಗಿದ್ದರೂ ವೈಯಕ್ತಿಕ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಸಂಸಾರದ ವಿಷಯಗಳಲ್ಲಿ ಗೌಪ್ಯತೆ ಕಾಯ್ದುಕೊಳ್ಳುವುದು ತುಂಬಾ ಮುಖ್ಯ.


ಅನಾವಶ್ಯಕ ಖರ್ಚು: ದುಂದುವೆಚ್ಚ ಅಥವಾ ಯಾವುದೇ ಕೆಟ್ಟ ಚಟಗಳಿಗಾಗಿ ನೀರಿನಂತೆ ಹಣ ಖರ್ಚು ಮಾಡುವುದು ದಾಂಪತ್ಯ ಜೀವನ ಮಾತ್ರವಲ್ಲದೆ ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕುತ್ತದೆ. ಹೀಗಾಗಿ ಅನಾವಶ್ಯಕ ಖರ್ಚಿಗೆ ಕಡಿವಾಣ ಹಾಕುವುದು ಉತ್ತಮ. 


ಇದನ್ನೂ ಓದಿ: Daily Horoscope: ಭಾನುವಾರದ ದಿನ ಈ ರಾಶಿಗಳ ಜನರ ಭಾಗ್ಯದ ಬಾಗಿಲು ತೆರೆದುಕೊಳ್ಳಲಿದೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.